ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದಾವಳಿಗೆ ಚಾಲನೆ ನೀಡಿದ ಸಚಿವ ಆನಂದ ಸಿಂಗ್

ಹಂಪಿ ಉತ್ಸವ: ಅಖಾಡದ ಬಳೆಗಾಗಿ ಪೈಲ್ವಾನ್‌ಗಳ ಕಾದಾಟ 

ವಿಜಯನಗರ ಜ.28: ಮೊಲ ಕೂಡ ವೀರಾವೇಷದಿಂದ ಹೋರಾಡಿದ ವಿಜಯನಗರದ ಮಣ್ಣಿನಲ್ಲಿ ಕುಸ್ತಿ ಅಖಾಡರಂಗೇರಿದೆ. ಹಂಪಿ ಉತ್ಸವದ ಪ್ರಶಸ್ತಿಗಾಗಿ ಪೈಲ್ವಾನ್‌ಗಳ ಕಾದಾಟಆರಂಭವಾಗಿದೆ. ಎದುರಾಳಿಯನ್ನು ಚಿತ್ ಮಾಡಿ, ಮಣ್ಣು ಮುಕ್ಕಿಸಿ ಜಗಜಟ್ಟಿಗಳು ಎಂದೆನಿಸಿಕೊಳ್ಳಲು ಉರಿ ಬಿಸಿಲನ್ನು ಲೆಕ್ಕಿಸದೆ ಪೈಲ್ವಾನ್‌ಗಳು ಸಾಮು ತೆಗೆಯುತ್ತಿದ್ದಾರೆ.  ಇದಕ್ಕೆ ಸ್ಪೂರ್ತಿತುಂಬುವ ನಿಟ್ಟಿನಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತುಜೀವಶಾಸ್ತ್ರ ಸಚಿವ ಹಾಗೂ ಶಾಸಕ ಆನಂದ್ ಸಿಂಗ್ ಸ್ವತಃ ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ವಿಶೇಷ ದೃಶ್ಯಗಳಿಗೆ ಮಲಪನಗುಡಿಗ್ರಾಮದ ವಿಜಯ ವಿದ್ಯಾರಣ್ಯ ಶಾಲಾ ಆವರಣದ ಕುಸ್ತಿ ಅಖಾಡಇಂದು ಸಾಕ್ಷಿಯಾಯಿತು. ಈ ಬಾರಿಯ ಹಂಪಿ ಉತ್ಸವದರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ100 ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದಾರೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಶಸ್ತಿಗಳಿಗೆ ಸೆಣಸಾಟ ನಡೆಯಲಿದೆ.  

ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜನೆ; ಕುಸ್ತಿ ಪಂದ್ಯಗಳ ಉದ್ಘಾಟನೆಗೂ ಮುನ್ನ ಸ್ಥಳೀಯ ಕಸ್ತಿಪಟುಗಳು ಸಚಿವಆನಂದ್ ಸಿಂಗ್ ಅವರಲ್ಲಿ ಪ್ರತಿ ಬಾರಿಯಂತೆ ಪ್ರತ್ಯೇಕವಾಗಿಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸುವಂತೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಗಳನ್ನು ನಡೆಸುವಂತೆ ಸೂಚನೆ ನೀಡಿದರು. ‘ಸ್ಥಳೀಯ ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿಜಿಲ್ಲಾ ಮಟ್ಟದ ಪಂದ್ಯಾವಳಿ ಆಯೋಜಿಸುವುದರಲ್ಲಿಯಾವುದೇರೀತಿಯತಪ್ಪಿಲ್ಲ' ಎಂದು ಸಚಿವಆನಂದ್ ಸಿಂಗ್ ಹೇಳಿದರು. 

ಕುಸ್ತಿ ಪಂದ್ಯಾವಳಿ ಉದ್ಘಾಟನೆಯಲ್ಲಿ ಉಪ ಆಯುಕ್ತ ಸಿದ್ದರಾಮೇಶ್ವರ, ತಾ.ಪಂ.ಇಓ ರಮೇಶ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹರಿಸಿಂಗ್ ರಾಥೋಡ್, ಮಲಪನಗುಡಿಗ್ರಾ.ಪಂ ಅಧ್ಯಕ್ಷರಘುನಾಯ್ಕ, ಉಪಾ ವಿರೂಪಾಕ್ಷಪ್ಪ, ಜಿಲ್ಲಾದೈಹಿಕ ಪರೀವೀಕ್ಷಕ ಮುನಿರಾಜು, ತಾಲೂಕುದೈಹಿಕ ಪರೀವೀಕ್ಷಕ ಡಿ.ವಿ.ಜತ್ತಿ ಉಪಸ್ಥಿತರಿದ್ದರು. 

ಚದುರಿದ ವೇದಿಕೆಗಳ ನಿರ್ಮಾಣದಿಂದ ಮುಖ್ಯ ವೇದಿಕೆಯಲ್ಲಿ ಜನರ ಕೊರತೆ 

ಹಂಪಿ ಉತ್ಸವದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿದೂರದೂರದಲ್ಲಿ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ವಸ್ತು ಪ್ರದರ್ಶನ ಮಳಿಗೆಗಳು ಗಾಯಿತ್ರಿ ಮುಖ್ಯ ವೇದಿಕೆಯಿಂದದೂರದಲ್ಲಿವೆ. ಇವು ಹತ್ತಿರದಲ್ಲಿಇದ್ದಿದ್ದರೆಜನರು ವಸ್ತು ಪ್ರದರ್ಶನದಜೊತೆಗೆ ಮುಖ್ಯ ವೇದಿಕೆಯ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಿಸುತ್ತಿದ್ದರು. ಚದುರಿದ ವೇದಿಕೆ ನಿರ್ಮಾಣದಿಂದ ಮುಖ್ಯ ವೇದಿಕೆಯಲ್ಲಿವಜನರಕೊರತೆಯಾಗಿದೆಎಂದು ಸಚಿವಆನಂದ್ ಸಿಂಗ್ ಹೇಳಿದರು.  

ಕುಸ್ತಿ ಪಂದಾವಳಿ ಉದ್ಘಾಟನೆ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.  

ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮಆಯೋಜನೆ ಮಾಡಿದರೀತಿಯಲ್ಲಿ ಹಂಪಿಯಲ್ಲಿಕಾರ್ಯಕ್ರಮಆಯೋಜನೆ ಮಾಡಲು ಆಗುವುದಿಲ್ಲ. ವಿಶ್ವ ಪಾರಂಪರಿಕ ಸ್ಮಾರಕಗಳಿರುವ ಸ್ಥಳದಲ್ಲಿ ಸಾಕಷ್ಟು ಬಿಗಿ ನಿಯಮಗಳು ಇರುತ್ತವೆ. ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಅವರು ಸಾಕಷ್ಟು ಸಭೆಗಳನ್ನು ನಡೆಸಿ ಉತ್ಸವದ ಸಿದ್ಧತೆ ಕೈಗೊಂಡಿದ್ದಾರೆ. ಇಂದು ಹಾಗೂ ನಾಳಿನ ಹಂಪಿ ಉತ್ಸವದಲ್ಲಿಜನರು ಸೇರಲಿದ್ದಾರೆಎಂದುಆಶ್ವಾಸನೆ ವ್ಯಕ್ತಪಡಿಸಿದರು. ಗಾಯಿತ್ರಿ ಪೀಠದ ವೇದಿಕೆವರೆಗೂ ಸಾರ್ಜನಿಕರಿಗೆ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಯಾವುದೇ ಪಾಸ್‌ಗಳ ನಿಬಂರ್ಧವಿಲ್ಲ ಎಂದು ತಿಳಿಸಿದರು. 


 ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ    

ಹಂಪಿ ಕನ್ನಡ ವಿ.ವಿ.ಸಮೀಪದಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನವಕ್ಕೆ ಬಿಹಾರದಿಂದ ವಿಶೇಷಅತಿಥಿಆಗಮನವಾಗಿದೆ. ಡಾರ್ವಿನ್ ವಿಕಾಸವಾದಕ್ಕೆಕಣ್ಣೆದುರಿನ ಸಾಕ್ಷ್ಯವಾಗಿ ಪ್ರವಾಸಿಗರೆದುರು ಈ ಅತಿಥಿಗೋಚರಿಸಲಿದ್ದಾನೆ.  ಅಷ್ಟುಕ್ಕೂ ಈ ಅತಿಥಿಯಾರೆಂದು ಉಹಿಸುತ್ತಿದ್ದೀರಾ?  ಇದೇಆಫ್ರಿಕಾ ಮೂಲದಜಿರಾಫೆ...! ಈ ಸಂತಸ ವಿಷಯವನ್ನು ಮಲಪನಗುಡಿಯಲ್ಲಿ ಸಚಿವಆನಂದ್ ಸಿಂಗ್ ಮಾಧ್ಯಮದವರೊಂದಿಗೆ ಹಂಚಿಕೊಂಡರು.  

ಮೃಗಾಲಯದ ಡಿ.ಸಿ.ಎಫ್ ಕಿರಣ್‌ಕುಮಾರ್‌ಅವರು ಬಿಹಾರ ಪಟ್ನಾ ಮೃಗಾಲಯದಿಂದಜಿರಾಫೆಯನ್ನುತರುವಲ್ಲಿಆರು ತಿಂಗಳಿಂದ ಪ್ರಯತ್ನ ಪಟ್ಟಿದ್ದಾರೆ. ಇಲ್ಲಿನ ಮೃಗಾಲಯದಲ್ಲಿಜಿರಾಫೆಗೆ ಬೇಕಾದಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಾಲ್ಕು ದಿನಗಳ ರಸ್ತೆ ಪ್ರಯಾಣದ ಮೂಲಕ ಬಿಹಾರದಿಂದಜಿರಾಫೆಕರೆತರಲಾಗಿದೆ. 4 ವರ್ಷದ ಈ ಜಿರಾಫೆಗೆ ಮೈಸೂರು ಮೃಗಾಲಯದಿಂದ ಆಗಮಿಸುವ ಮತ್ತೋಂದು ಜಿರಾಫೆ ಜೋಡಿಯಾಗಲಿದೆ ಎಂದುಅವರು ಮಾಹಿತಿ ನೀಡಿದರು.  

2017 ರಲ್ಲಿ ಪ್ರಾರಂಭಿಸಲಾದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಸ್ಥಳವಾಗಿದೆ. 

ಈಗಾಗಲೇ ಉದ್ಯಾನವನದಲ್ಲಿ ಹುಲಿ, ಸಿಂಹ, ಸ್ಪಾಟರ್‌ಜಿಂಕೆ, ಸಾಂಬಾರ್, ಬಾರ್ಕಿಂಗ್‌ಜಿಂಕೆ ಮತ್ತುಇತರ ಪ್ರಾಣಿಗಳಿವೆ. ಮೊಸಳೆಗಳು, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿ ಮತ್ತು ಲಂಗೂರ್ ಸೇರಿದಂತೆ 80ಕ್ಕೂ ಹೆಚ್ಚಿನಜಾತಿಯ ಪಕ್ಷಿಗಳು ಹಲವಾರು ಪ್ರಾಣಿಗಳಿವೆ. ಇವುಗಳ ಗುಂಪಿಗೆ ಹೊಸದಾಗಿಜಿರಾಫೆಕೂಡ ಸೇರೆ​‍್ಡಯಾಗಿದೆ. ಹೊಸ ಅತಿಥಿಯಆಗಮನದಿಂದ ಮೃಗಾಲಯದಖ್ಯಾತಿ ಹೆಚ್ಚಲಿದೆ. 

 ‘ಮೃಗಾಲಯದ ಪ್ರಾಣಿಗಳ ವಿನಿಮಯಕಾರ್ಯಕ್ರಮದಅಡಿಯಲ್ಲಿ ಮೈಸೂರು ಮೃಗಾಲಯ ನೀಡಿದಜೀಬ್ರಾ, ಕಾಡೆಮ್ಮೆ ಮತ್ತಿತರ ಪ್ರಾಣಿಗಳ ಬದಲಾಗಿ ನಾಲ್ಕು ವರ್ಷದ ಹೆಣ್ಣುಜಿರಾಫೆಯನ್ನು ಪಟ್ನಾ ಮೃಗಾಲಯದಿಂದ ಹಂಪಿ ಮೃಗಾಲಯಕ್ಕೆ ನೀಡಲಾಗಿದೆ. ಇದನ್ನುತರಲುಇಲ್ಲಿಂದ ವಿಶೇಷ ಬೋನು, ವಾಹನಗಳಲ್ಲಿ ಹೋಗಿ, ಸತತಒಂದು ವಾರ ಕಾಲ ನಿಧಾನವಾಗಿ ಪ್ರಯಾಣಿಸಿ ಇಂದುಕಮಲಾಪುರದ ಮೃಗಾಲಯಕ್ಕೆ ಬರಲಾಗಿದೆ. ಈ ಜಿರಾಫೆಗಾಗಿ ಈಗಾಗಲೇ ವಿಶೇಷವಾದಆವರಣವನ್ನು ಸಿದ್ಧಪಡಿಸಲಾಗಿದ್ದು, ಇದಕ್ಕೆ ಬೇಕಾದಆಹಾರ ಹಾಗೂ ಆರೈಕೆಯ ವ್ಯವಸ್ತೆ ಮಾಡಲಾಗಿದೆ, ಸುದೀರ್ಘ ಪ್ರಯಾಣದಿಂದ ಚೇತರಿಸಿಕೊಂಡ ಜಿರಾಫೆ ಲವ ಲವಿಕೆಯಿಂದಓಡಾಡುತ್ತಿದೆ' ಎಂದು ಹಂಪಿ ಮೃಗಾಲಯದಕಾರ್ಯನಿರ್ವಾಹಕ ನಿರ್ದೇಶಕಎಂ.ಎನ್‌. ಕಿರಣ್ ಮಾಹಿತಿ ನೀಡಿದ್ದಾರೆ. ಜಿರಾಫೆತರುವಲ್ಲಿಕಾರ್ಯನಿರ್ವಹಿಸಿ ಪಶುವೈದ್ಯಾಧಿಕಾರಿ ಸೇರಿದಂತೆಇತರೆ ಸಿಬ್ಬಂದಿಗಳನ್ನು ಸಚಿವಆನಂದ್ ಸಿಂಗ್ ಅಭಿನಂದಿಸಿದ್ದಾರೆ.