ವಿವಿಧ ಬೇಡಿಕೆ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಗೆ ಮನವಿ
ಲೋಕದರ್ಶನ ವರದಿ
ವಿಜಯಪುರ 10 : 22-05-2026 ರಿಂದ ರಾಜ್ಯದಾದ್ಯಂತ ಜಾರಿಗೆ ಬಂದಿರುವ ಪರಿಷ್ಕೃತ ಕನಿಷ್ಠ ವೇತನ ಅಂತಿಮ ಅಧಿಸೂಚನೆಯನ್ನು ಅಮಾನತಿನಲ್ಲಿ (ತಡೆಹಿಡಿಯುವ) ಯಾವುದೇ ಪ್ರಸ್ತಾವನೆಯನ್ನು ತಕ್ಷಣ ತಿರಸ್ಕರಿಸಿ, ಪರಿಷ್ಕೃತ ಕನಿಷ್ಠ ವೇತನವನ್ನು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಕಾರ್ಮಿಕರು ಮತ್ತು ನೌಕರರಿಗೆ ವೇತನ ಪಾವತಿ ಮಾಡಬೇಕೆಂದು ಒತ್ತಾಯಿಸಿ ಎಐಯುಟಿಯುಸಿ, ಕರ್ನಾಟಕ ರಾಜ್ಯದ ಬಹುಹಳ್ಳಿ ಕುಡಿಯುವ ನೀರು ಸರಬರಾಜು ನೌಕರರ ಸಂಘ, ಸಂಯುಕ್ತ ಕೆ.ಬಿ.ಜೆ.ಎನ್.ಎಲ್ ಆಲಮಟ್ಟಿ ಗಾರ್ಡನ್ ನೌಕರರ ಸಂಘ ಮತ್ತು ವಸತಿ ನಿಲಯ ಕಾರ್ಮಿಕರ ಸಂಘದ ವತಿಯಿಂದ ಸಮಸ್ತ ಕಾರ್ಮಿಕರ ಸೇರಿಕೊಂಡು ಅಪರ ಜಿಲ್ಲಾಧಿಕಾರಿ ಡಾ. ಓದ್ರಾಮ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ರಾಜ್ಯ ಸರ್ಕಾರವು 22-05-2026ರಂದು ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ. ಹಾಗೂ ಖಾಸಗಿ ಕ್ಷೇತ್ರದಲ್ಲಿ ಕಾರ್ಮಿಕರಿಗೆ ವೇತನ ಪಾವತಿ ಮಾಡಲಾಗಿದೆ. ಇನ್ನೂ ಹಲವಾರು ಇಲಾಖೆಗಳಲ್ಲಿ ಪಾವತಿ ಮಾಡಲು ಕ್ರಮ ವಹಿಸುತ್ತಿರುವ ಇಂತಹ ಸಂದರ್ಭದಲ್ಲಿ ಹಣಕಾಸು ಇಲಾಖೆಯು ಅದನ್ನು ಅಮಾನತಿನಲ್ಲಿ ಇಡುವ ಪ್ರಸ್ತಾವನೆಯನ್ನು ಮುಂದಿಟ್ಟಿರುವುದು ಕಾರ್ಮಿಕ ವಿರೋಧಿ, ಕಾನೂನುಬಾಹಿರ ಸಂವಿಧಾನ ವಿರೋದಿ ಹಾಗೂ ಆಡಳಿತಾತ್ಮಕವಾಗಿ ಅಸಂಗತ ಕ್ರಮವಾಗಿದೆ.