ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಶನ್ ಹಾವಳಿ ವಿರುದ್ಧ ಇಂದು ಸಭೆ
Meeting today against donation scam by private educational institutions
ಲೋಕದರ್ಶನ ವರದಿ
ರಾಣೆಬೆನ್ನೂರು 17: ರಾಣೆಬೆನ್ನೂರು ನಗರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶವನ್ನ ಉಲ್ಲಂಘಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸೋ ಇಚ್ಚೆ ಒಂದೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದೊಂದು ರೀತಿಯ ಒತ್ತಾಯಪೂರ್ವಕವಾಗಿ ವಿದ್ಯಾರ್ಥಿಗಳಿಂದ ಡೊನೇಷನ್ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಕ್ಷಣ ವ್ಯಾಪಾರಿಕರಣ ಧೋರಣೆ ಖಂಡಿಸಿ ’ಕರ್ನಾಟಕ ರಾಜ್ಯ ವಿದ್ಯಾರ್ಥಿ ವಿಕಾಸ್ ಪರಿಷತ್’ನಿರಂತರವಾಗಿ ನಡೆಸುತ್ತಿರುವ ಹೋರಾಟಕ್ಕೆ ರಾಣೇಬೆನ್ನೂರು ತಾಲೂಕಿನ ಜನಪರ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಘೋಷಿಸಿ ಎಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ವಿಕಾಸ ಪರಿಷತ್ನ ರಾಜ್ಯಾಧ್ಯಕ್ಷರಾದ ರವೀಂದ್ರಗೌಡ ಎಫ್. ಪಾಟೇಲ ಹೇಳಿದರು.
ಮಾಧ್ಯಮದರೊಂದಿಗೆ ಉದ್ದೇಶಿಸಿ ಮುಂದುವರೆದು ಮಾತನಾಡಿದ ಅವರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ರಾಣೆಬೆನ್ನೂರು ತಾಲೂಕಿನ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಯವರು ಶಿಕ್ಷಣ ಇಲಾಖೆಯೂ ಏರಿ್ಡಸಿರುವ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಯಾವ ಯಾವ ತರಗತಿಗೆ ಎಷ್ಟೆಷ್ಟು ಡೊನೇಷನ್ ಪಡೆಯುತ್ತಾರೆ ಎಂಬುವದರ ಸ್ಪಷ್ಟ ಮಾಹಿತಿ ನೀಡುವುದರ ಜೊತೆಗೆ ಇತರ ವಿಷಯಗಳ ಬಹಿರಂಗ ಸಭೆಯನ್ನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಘಟನೆಗಳ ಹೋರಾಟಕ್ಕೆ ಮನ್ನಣೆ ನೀಡಿ ಏರಿ್ಡಸಿದ್ದಾರೆ. ಮಿತಿಮೀರಿದ ಡೊನೇಷನ್ ಹಾವಳಿಯಿಂದ ನಲುಗಿದ ವಿದ್ಯಾರ್ಥಿಗಳು ಮತ್ತು ಪಾಲಕರು ಈ ಸಭೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ.
ಈ ಉದ್ದೇಶಿತ ಹೋರಾಟವು ಗುರಿ ಮುಟ್ಟುವವರೆಗೂ ಎಲ್ಲಾ ರೀತಿಯ ಹೋರಾಟಕ್ಕೂ ಬಹಿರಂಗ ಬೆಂಬಲ ಘೋಷಿಸಿವೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ,ತಾಲೂಕ ಆಟೋ ಚಾಲಕರ ಒಕ್ಕೂಟ ,ನ್ಯಾಯವಾದಿಗಳ ಸಂಘ ,ಕೃಷಿ ಉತ್ಪನ್ನ ಮಾರಾಟ ಸಮಿತಿ ವರ್ತಕರ ಸಂಘ , ನೆಹರು ಮಾರ್ಕೆಟ್ ವರ್ತಕರ ಸಂಘ , ಜೈ ಭಾರತ್ ಶ್ರಮಜೀವಿ ಗುತ್ತಿಗೆ ಹಮಾಲರ ಸಂಘ ,ಶ್ರೀ ಚೌಡೇಶ್ವರಿ ಎಪಿಎಂಸಿ ಹಮಾಲರ ಸಂಘ , ಶ್ರೀ ವಿನಾಯಕ ಕಾರ್ ಸ್ಟ್ಯಾಂಡ್ ಅಸೋಸಿಯನ್ ,ಬೇಕರಿ ವ್ಯಾಪಾರಸ್ಥರ ಸಂಘ , ಮೆಟಲ್ ಅಸೋಸಿಯನ್ ಚಿತ್ರಮಂದಿರ ಪ್ರದರ್ಶಕರ ಸಂಘ .ದುರ್ಗಾ ತರಕಾರಿ ಮಾರ್ಕೆಟ್ ವ್ಯಾಪಾರಸ್ಥರ ಸಂಘ ,.ಚಿನ್ನ ಬೆಳ್ಳಿ ವ್ಯಾಪಾರಸ್ಥರ ಸಂಘ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ, ಶ್ರೀ ದುರ್ಗಾದೇವಿ ಹೂವಿನ ವ್ಯಾಪಾರಸ್ಥರ ಸಂಘ , ಚಿಕನ್ ಮಾರಾಟ ವ್ಯಾಪಾರಸ್ಥರ ಸಂಘ. ಶ್ರೀ ದುರ್ಗಾ ತರಕಾರಿ ಮಾರ್ಕೆಟ್ ಸಂಘ, ,ಸ್ವತಂತ್ರ ಜನ ಸೇವಾ ಸಂಸ್ಥೆ, ತಾಲೂಕಾ ಫೋಟೋಗ್ರಾಫರ್ ಅಸೋಸಿಯನ್ , ಕಟ್ಟಡ ಕಾರ್ಮಿಕರ ಸಂಘ, ಟಿಂಫು ಚಾಲಕ ಮತ್ತು ಮಾಲಕರ ಸಂಘ, ಬೀದಿ ವ್ಯಾಪಾರಸ್ಥರ ಸಂಘ ,ಮೇಲ್ಕಾಣಿಸಿದ ಸಂಘ, ಸಂಸ್ಥೆಗಳು ಈ ಹೋರಾಟಕ್ಕೆ ಅಧಿಕೃತ ಬೆಂಬಲ ಘೋಷಿಸಿವೆ.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 