ಮರೇಗುದ್ದಿ ಏತನೀರಾವರಿ ಯೋಜನೆ ಕಾಮಗಾರಿ ನೆನೆಗುದಿಗೆ

 ಏ.25 ರಂದು ರಸ್ತೆ ತಡೆ ಉಗ್ರ ಪ್ರತಿಭಟನೆ: ಪೂರ್ವಭಾವಿ ಸಭೆಯಲ್ಲಿ ನಾಲ್ಕು ಗ್ರಾಮಗಳ ಗ್ರಾಮಸ್ಥರ ತೀರ್ಮಾನ 

ಜಮಖಂಡಿ 24: ಮರೇಗುದ್ದಿ ಏತನೀರಾವರಿ ಯೋಜನೆಯು ಸುಮಾರು ವರ್ಷದಿಂದ ಕಾಮಗಾರಿ ಮಾಡಿದೆ. ಅಧಿಕಾರಿಗಳು. ರಾಜಕಾರಿಗಳ ನಿರ್ಲಕ್ಷ್ಯದಿಂದ ಹುಲ್ಯಾಳ, ಹುಣಸಿಕಟ್ಟಿ,  ಮರೇಗುದ್ದಿ, ಕೊಣ್ಣೂರ ಗ್ರಾಮದವರಿಗೆ ನೀರಿನ ಸಮಸ್ಯೆ ಪ್ರತಿವರ್ಷ ಎದ್ದುರಿಸಬೇಕಾಗಿದ್ದು. ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಹಾಕುವ ಮೂಲಕ ಏ.25 ರಂದು ಬೆಳಗ್ಗೆ 8 ಗಂಟೆಗೆ ಹುಲ್ಯಾಳ ಕ್ರಾಸ್‌ದಲ್ಲಿ ರಸ್ತೆ ತಡೆ ನಡೆಸಿ ಉಗ್ರವಾಗದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದರು.  

ತಾಲೂಕಿನ ಕೊಣ್ಣೂರ ಗ್ರಾಮದ ಕರಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ನಾಲ್ಕು ಗ್ರಾಮಸ್ಥರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.  

ಬಿ.ಎಲ್‌.ಗೋಠೆ ಮಾತನಾಡಿ.ಏ.25 ರಂದು ಹುಲ್ಯಾಳ ಕ್ರಾಸ್ ಬಳಿ ಶಾಮೀಯಾಣ ಹಾಕಿ ರಸ್ತೆ ಸಂಚಾರವನ್ನು ತಡೆದು ಪ್ರತಿಭಟನೆಯನ್ನು ಮಾಡುವ ಮೂಲಕ ರಾಜಕಾರಣಿ ಹಾಗೂ ಅಧಿಕಾರಿಗಳ ಕಣ್ಣು ತೆರೆಸಬೇಕಾಗಿದೆ. ಈ ಭಾಗದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಹುಲ್ಯಾಳ. ಕೊಣ್ಣೂರ. ಮರೇಗುದ್ದಿ. ಹುಣಸಿಕಟ್ಟ ಗ್ರಾಮದವರು ಸಮಸ್ಯೆ ಎದ್ದರಿಸುವ ಪ್ರಯತ್ನ ಮಾಡುತ್ತಿದ್ದೆವೆ. ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ತೀರ್ಮಾನಿಸಿ ಎಲ್ಲರೂ ಕೂಡಿ ಹೋರಾಟ ಮಾಡಬೇಕಾಗಿದೆ ಎಂದರು.  

ಮಣಗೇನಪ್ಪ ಕೂಂಚನೂರ ಮಾತನಾಡಿ ಸುಮಾರು 20 ವರ್ಷ ಕಾಲ ಕಳೆದರು ಯಾವ ಅಧಿಕಾರಿಗಳಾಗಲ್ಲಿ, ರಾಜಕಾರಣಿಗಳಾಗಲ್ಲಿ ನಮ್ಮ ಸಮಸ್ಯೆ ಬಗ್ಗೆ ಆಲಿಸುತ್ತಿಲ್ಲ. ನಾಲ್ಕು ಗ್ರಾಮದವರು ಸೇರಿಕೊಂಡು ಚುನಾವಣೆ ಬಹಿಷ್ಕಾರ ಹಾಕುವ ತೀರ್ಮಾನವನ್ನು ಮಾಡಲಾಗಿದೆ ಎಂದರು.  

ಪ್ರಕಾಶ ರಾಮಗೊಮಂಡ.ಮಾತನಾಡಿ. 1 ಸಾವಿರ ಪೈಪಲೈನ್ ಅಳವಡಿಸಲಾಗಿದೆ. ಹೀಗೆ ಪ್ರತಿವರ್ಷವೂ ರೈತರು ತಮ್ಮ ಹೊಲಗದ್ದೆಗಳಿಗೆ ಅನುಕೂಲ ಮಾಡಿಕೊಳುತ್ತಿದ್ದಾರೆ. ಆದರೆ ಸರಿಯಾದ ರೀತಿಯಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲರೂ ಸೇರಿ ಹೋರಾಟ ಮಾಡಬೇಕಾಗಿದೆ. ದಿ.ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರು ನಮ್ಮ ಭಾಗದ ರೈತರಿಗೆ ಅನುಕೂಲತೆಗಾಗಿ ಎಲ್ಲ ದಾಖಲಾತಿ ಮೂಲಕ ಮಂಜೂರಾತಿ ಮಾಡಿದ್ದಾರೆ. ಆದರೆ ಅದು ರಾಜಕಾರಣಿಗಳು ಹಿತಾಸಕ್ತಿ ತೊರದೆಯಿರುವ ಕಾರಣ ನಮ್ಮ ಭಾಗಕ್ಕೆ ನೀರಾವರಿ ಯೋಜನೆ ತಟಸ್ಥವಾಗಿದೆ. ಬರುವ ಚುನಾವಣೆಯಲ್ಲಿ ಬಹಿಷ್ಕಾರ ಹಾಕಿದರೆ ಮಾತ್ರ ರಾಜಕಾರಣಿಗಳ ಕಣ್ಣು ತೆರೆಸಲು ಸಾಧ್ಯ ಎಂದರು.  

ಮಾದೇವ ಪಾಟೀಲ ಮಾತನಾಡಿ.4 ಕೆರೆ. 33 ಚೆಕ್ ಡ್ಯಾಂ. ನೀರಾವರಿ ಹೀಗೆ ಎಲ್ಲ ರೀತಿಯಿಂದ ಅನುಕೂಲವಾಗುವ ಉದ್ದೇಶ ಹೊಂದಿದೆ. ಅಧಿಕಾರಿಗಳ ಮಟ್ಟದಲ್ಲಿ ಇರುವ ಎಲ್ಲ ದಾಖಲಾತಿಗಳನ್ನು ಪಡೆದುಕೊಂಡು ಯಾವ ಹಂತದಲ್ಲಿ ಇರುತ್ತದೆ ಎಂಬುವದನ್ನು ಅರಿತುಕೊಂಡು ಹೋರಾಟಕ್ಕೆ ತೀರ್ಮಾನ ಮಾಡಬೇಕಾಗುತ್ತದೆ ಎಂದರು.  

ದುಂಡಪ್ಪ ಕುಳ್ಳಲಿ ಮಾತನಾಡಿ.ನಮ್ಮ ಕೆಲಸ ಯಾರು ಮಾಡಿಕೊಡುತ್ತಾರೆ ಅವರಿಗೆ ನಾಲ್ಕು ಗ್ರಾಮಸ್ಥರು ಸೇರಿಕೊಂಡು ಬೆಂಬಲ ನೀಡುತ್ತೆವೆ. ಚುನಾವಣೆ ಬಹಿಷ್ಕಾರ ಹಾಕಿದರೆ ಮಾತ್ರ ನಮಗೆ ಕುಡಿಯುವ ನೀರು ದೊರೆಯಲು ಸಾಧ್ಯ. ಎಸಿ.ಡಿಸಿ.ಎಮ್‌ಎಲ್ ಎ.ಎಂ.ಪಿ ಗಳಿಗೆ ಎಲ್ಲ ಕಾಗದ ಪತ್ರಗಳನ್ನು ನೀಡಿದರು ಪ್ರಯೋಜನೆಯಾಗುತ್ತಿಲ್ಲ. ಆದರೆ ನಮ್ಮ ಹೋರಾಟ ಮಾಡಿದರೆ ಮಾತ್ರ ಸಾಧ್ಯ ಎಂದರು.  

ಹನಮಂತಪ್ಪ ಗುಡಿ ಗ್ರಾ.ಪಂ.ಅಧ್ಯಕ್ಷ ಮರೆಗುದ್ದಿ ಮಾತನಾಡಿ.ಎಲ್ಲರೂ ಸೇರಿಕೊಂಡು ಹೋರಾಟ ಮಾಡಬೇಕು. ಐದು ಗ್ರಾಮದವರು ನಂಬಿಕೆಯನ್ನು ಇಟ್ಟುಕೊಳ್ಳಬೇಕು. ಊರಿಗೆ 25 ಜನರು ಸೇರಿಕೊಂಡು ಪ್ರತಿದಿನ ಹೋರಾಟ ಮಾಡಲು ಸಿದ್ದರಾಗಿ ಎಂದರು.  

ಮೈಬೂಬ ಪೆಂಡಾರಿ, ಬಸವರಾಜ ಕಾಳಪ್ಪನ್ನವರ, ಮಲ್ಲಪ್ಪ ರಾಮಗೊಂಡ ಗಿರಗಾಂವಿ ಮಾತನಾಡಿದರು.  

ಸಭೆಯಲ್ಲಿ ನಾಲ್ಕು ಗ್ರಾಮದ ಗ್ರಾಮಸ್ಥರು ನೂರಾರು ರೈತರು ಗ್ರಾಮಸ್ಥರು ಇದ್ದರು.