ತಡವಲಗಾದಲ್ಲಿ ಮರಳುಸಿದ್ದೇಶ್ವರ ಜಾತ್ರೆ

ತಡವಲಗಾದಲ್ಲಿ ಮರಳುಸಿದ್ದೇಶ್ವರ ಜಾತ್ರೆ  Maralusiddeshwara Fair at Tadavalaga

ಇಂಡಿ ಸೆ.5: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಆರಾಧ್ಯ ದೈವ ಮರಳುಸಿದ್ದೇಶ್ವರ ಜಾತ್ರಾ ಮಹೋತ್ಸವವು ಸೆ.6ರಿಂದ 9ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.  ಸೆ.6ರಂದು ಬೆಳಗ್ಗೆ 8ರಿಂದ ಮರುದಿನ ಬೆಳಗ್ಗೆ 8ರವರೆಗೆ ದೇವಸ್ಥಾನದಲ್ಲಿ ಸಪ್ತಾಹ ಭಜನೆ ನಡೆಯಲಿದೆ.

ಸೆ.7ರಂದು ಬೆಳಗಿನ ಜಾವ 5ಕ್ಕೆ ರುದ್ರಾಭಿಷೇಕ, ಎಲೆ ಪೂಜೆ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಬೆಳಗ್ಗೆ 9ಕ್ಕೆ ತಡವಲಗಾ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಾತ್ರಾ ಸಮಿತಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.  

ಸಂಜೆ 4ಕ್ಕೆ  ಮರಳುಸಿದ್ದೇಶ್ವರ ಪಲ್ಲಕ್ಕಿ ಉತ್ಸವವು ವಾದ್ಯ, ಸಂಗೀತ, ನೃತ್ಯ ಹಾಗೂ ಭಜನೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೋಡಗುಡಿಗೆ ತಲುಪಲಿದೆ. ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.  

ಸೆ.8ರಂದು ಬೆಳಗ್ಗೆ ಪಲ್ಲಕ್ಕಿಯು ಮೂಲ ದೇವಸ್ಥಾನಕ್ಕೆ ಮರಳಲಿದ್ದು, ಪುರಾಣ ಪ್ರವಚನ, ಗೀ ಗೀ ಪದಗಳ ಕಾರ್ಯಕ್ರಮ, ಭಾರ ಎತ್ತುವ ಪ್ರದರ್ಶನ ಹಾಗೂ ಜಂಗಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಸಂಜೆ ಮಹಾಪ್ರಸಾದ ವಿತರಣೆ ಹಾಗೂ ರಾತ್ರಿ ನಾಟಕ ಪ್ರದರ್ಶನ ಏರಿ​‍್ಡಸಲಾಗಿದೆ.  

ಸೆ.9ರಂದು ರಾತ್ರಿ 9.30ಕ್ಕೆ ಭಜನೆ, ವಾದ್ಯ ವೈಭವದೊಂದಿಗೆ ಪಲ್ಲಕ್ಕಿಯ ‘ಪಟಾಕ್ಷಿ’ ಇಳಿಸುವ ಕಾರ್ಯಕ್ರಮ ನಡೆಯಲಿದೆ. ಜಾತ್ರೆಯ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮರಳುಸಿದ್ದೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.