ಕವಯಂತ್ರಿ ಲೇಖಕ ಡಾ. ತಮಿಳು ಸೆಲ್ವಿಗೆ ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ

Mallepuram Literary Award to Poet and Writer Dr. Tamil Selvi

ಕಲಬುರಗಿ 14: ಇಂದು ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಚೆನ್ನೈನ ಮದ್ರಾಸ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಕವಿ, ಸಂಶೋಧಕರಿ ಡಾ. ತಮಿಳ ಸೆಲ್ವಿ ಅವರು ಸಾಹಿತ್ಯ ಸಾಧನೆಯನ್ನು ಪರಿಗಣಿಸಿ 2025ನೇ ಸಾಲಿ ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಯನ್ನು ನೀಡುವುದಕ್ಕೆ ಪ್ರೊ. ಎಚ್‌.ಟಿ. ಪೋತೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮದಿಂದ ತೀರ್ಮಾನಿಸಲಾಯಿತು.  

ಚೈನ್ನೈಯಲ್ಲಿದ್ದುಕೊಂಡು ಕನ್ನಡ ಮತ್ತು ತಮಿಳು ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ‘ಅವರ ನಾನು ಅವಳಲ್ಲ ಅವನು’ ಅನುವಾದಿತ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಶ್ರೇಷ್ಠ ಅನುವಾದಕಿ ಪ್ರಶಸ್ತಿ ಸೇರಿದಂತೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ತಮಿಳು ನಾಡಿನ ಶ್ರೇಷ್ಠ ಲೇಖಕಿ ಪ್ರಶಸ್ತಿಯೂ ಸೇರಿದಂತೆ ಅವರ ಅನೇಕ ಕೃತಿಗಳಿಗೆ ಪ್ರಶಸ್ತಿ ಗೌರವಗಳು ಸಂದಿವೆ. 

2025 ಜೂನ್ 05 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ವಡಿ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ. ಪ್ರಶಸ್ತಿಯು 10,000=00 ರೂ ನಗದು ಪ್ರಶಸ್ತಿ ಫಲಕ ಶಾಲು ಸನ್ಮಾನ ಹೊಂದಿರುತ್ತದೆ. ಪ್ರತಿಷ್ಠಾನದ ಅಧ್ಯಕ್ಷರು ಡಾ. ವಸಂತ ನಾಶಿ, ಡಾ. ಸಂತೋಷಕುಮಾರ ಕಂಬಾರ, ಡಾ. ಹಣಮಂತ ಮೇಲಕೇರಿ ಸಭೆಯಲ್ಲಿ ಹಾಜರಿದರು. ಎಂದು ಪ್ರತಿಷ್ಠಾನದ ಅಧ್ಯಕ್ಷರು ಡಾ. ಶ್ರೀಶೈಲ ನಾಗರಾಳ ಮತ್ತು ಕಾರ್ಯದರ್ಶಿ ಡಾ. ಎಂ.ಬಿ. ಕಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ಜೆಂಟಿಯಾಗಿ ತಿಳಿಸಿರುತ್ತಾರೆ.