ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ

ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ Maintaining cleanliness is everyone's responsibility.

 ಲೋಕದರ್ಶನ ವರದಿ 

ಹೂವಿನ ಹಡಗಲಿ 12 : ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿಪಟ್ಟಣದ ಸ್ವಚ್ಛತೆ  ಕಾಪಾಡುವುದು ಎಲ್ಲರ ಜವಾಬ್ದಾರಿ, ಗೃಹಿಣಿಯರು ಸಹಕರಿಸಿರಿ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ ಜಿ ಹೇಳಿದರು. ಇಲ್ಲಿನ ಪುರಸಭೆ ವತಿಯಿಂದ ಪಟ್ಟಣದ 13 ಹಾಗೂ 20 ನೇ ವಾರ್ಡಿನ ಮಹಿಳೆಯರಿಗೆ ಗುರುವಾರ  ಹೊಳಗುಂದಿ ರಸ್ತೆಯಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿಕಸ, ಒಣಕಸ ಅಪಾಯಕಾರಿ ತಾಜ್ಯ ವಿಂಗಡನೆಯ ಕುರಿತು ಕಿರಿಯ ಆರೋಗ್ಯ ನೀರೀಕ್ಷಕ ಎಂ ಸೋಮಶೆಖರ್ ಉಪಯುಕ್ತ ಮಾಹಿತಿ ನೀಡಿದರು. 

ಪುರಸಭೆ ಮುಖ್ಯಾಧಿಕಾರಿ ಜಿ ಹನುಮಂತಪ್ಪ ಮಾತನಾಡಿ ಏಕ ಬಳಕೆಯ ಪ್ಲಾಸ್ಟಿಕ್ ನಿಂದಾಗುವ ಅಪಾಯದ ಬಗ್ಗೆ ವಿವರಿಸಿದರು. ಎರೆಹುಳು ಗೊಬ್ಬರ ತಯಾರಿಕಾ ಘಟಕ ಹಾಗೂ ಹಸಿ ಕಸದಿಂದ ಗೊಬ್ಬರ ತಯಾರಿಸುವುದು ಮತ್ತು ಮರುಬಳಕೆ ಮಾಡುವ ವಿಧಾನ ವಸ್ತುಗಳು ಕುರಿತು ಮಹಿಳೆಯರಿಗೆ ತಿಳಿಸಿದರು.ಕಸೆ ವಿಲೇವಾರಿ ಘಟಕದ ಉತ್ತಂಗಿ ನಿಂಗಪ್ಪ, ಪುರಸಭೆ ಸಿಬ್ಬಂದಿ ದೀಪಾ ಅಂಗಡಿ, ಸಂಜೀವಿನಿ, ಮಂಜುಳಾ, ರೇಖಾ, ಪದ್ಮಾ ಇತರರು ಇದ್ದರು.