ಬ್ಯಾಡ್ಗಿ

ಇಂದು ಬ್ಯಾಡಗಿ ತಾಲ್ಲೂಕಿನಲ್ಲಿ ಮಹಾಶಿವರಾತ್ರಿಯ ಸಂಭ್ರಮ: ಹೂವು ಹಾಗೂ ಹಣ್ಣಿನ ದರದಲ್ಲಿ ಕೊಂಚ ಏರಿಕೆ

ಇಂದು ಬ್ಯಾಡಗಿ ತಾಲ್ಲೂಕಿನಲ್ಲಿ ಮಹಾಶಿವರಾತ್ರಿಯ ಸಂಭ್ರಮ:  ಹೂವು ಹಾಗೂ ಹಣ್ಣಿನ ದರದಲ್ಲಿ ಕೊಂಚ ಏರಿಕೆ

ಬ್ಯಾಡಗಿ 15 :  ತಾಲೂಕಿನ ವಿವಿದೆಡೆ ಮಹಾಶಿವರಾತ್ರಿ ಹಬ್ಬದ ಸಡಗರ ಮನೆಮಾಡಿದೆ. ಶಿವನ ಪೂಜೆಗೆ ಭಕ್ತರು ಸಕಲ ತಯಾರಿ ನಡೆಸುತ್ತಿದ್ದಾರೆ. ಆದರೆ, ಮಾರುಕಟ್ಟೆಗೆ ಹೋದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಹೂವು ಮತ್ತು ಹಣ್ಣುಗಳ ದರ ಕಂಡು ದಂಗಾಗಿದ್ದಾರೆ.ಕಳೆದ ವಾರಕ್ಕೆ ಹೋಲಿಸಿದರೆ ಹಬ್ಬದ ಮುನ್ನಾದಿನವಾದ ಇಂದು (ಶನಿವಾರ) ಪಟ್ಟಣದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು ಹಾಗೂ ಹಣ್ಣಿನ ದರದಲ್ಲಿ ಕೊಂಚ ಏರಿಕೆಯಾಗಿದೆ.

ಜಿಲ್ಲೆಯ ಎಲ್ಲಾ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ದರ ಏರಿಕೆ ಮಾಡಿದ್ದಾರೆ.ಶಿವರಾತ್ರಿ ಪೂಜೆಗೆ ಅತ್ಯಗತ್ಯವಾದ ಬಿಲ್ವಪತ್ರೆಗೆ ಭಾರೀ ಬೇಡಿಕೆ ಉಂಟಾಗಿದೆ. ಪೂಜೆಗೆ ಬೇಕಾದ ಬಾಳೆಹಣ್ಣು, ದ್ರಾಕ್ಷಿ, ಸೇಬು, ದಾಳಿಂಬೆ, ಕಿತ್ತಳೆ ಹಣ್ಣು ಹಾಗೂ ಕಡಲೆಕಾಯಿ ದರವೂ ಕಳೆದ ವಾರಕ್ಕಿಂತ ಶೇ.20-30 ರಷ್ಟು ಹೆಚ್ಚಾಗಿದೆ. ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ರಸಗಳಿಗೆ ಬೇಡಿಕೆ ದುಪ್ಪಟ್ಟಾಗಿದೆ. ಒಟ್ಟಿನಲ್ಲಿ ಬೆಲೆ ಏರಿಕೆಯ ನಡುವೆಯೂ ಭಕ್ತರು ಜಾಗರಣೆ ಮತ್ತು ಶಿವಪೂಜೆಗೆ ಬೇಕಾದ ಸಿದ್ಧತೆಗಳನ್ನು ಉತ್ಸಾಹದಿಂದಲೇ ಮಾಡಿಕೊಳ್ಳುತ್ತಿದ್ದಾರೆ.ಕಲ್ಲಂಗಡಿ-35-50, ಶೇಬು- 150- 300, ದ್ರಾಕ್ಷಿ 120-150, ದಾಳಿಂಬೆ-200, ಕಿತ್ತಳೆ-120, ಕರಬುಜ-50, ಕಡ್ಲಿ ಗಿಡ-35, ಖರ್ಜುರ-200 ರೂ ಗಳ ದಂತೆ ದರಗಳಿದ್ದವು.

ಕಳೆದ ವಾರ ಬೆಲೆಗಳು ಕಡಿಮೆಯಿದ್ದವು. ಆದರೆ ಹಬ್ಬ ಹತ್ತಿರ ಬರುತ್ತಿದ್ದಂತೆ ವ್ಯಾಪಾರಿಗಳು ದುಪ್ಪಟ್ಟು ಬೆಲೆ ಹೇಳುತ್ತಿದ್ದಾರೆ. ಆದರೂ ವರ್ಷಕ್ಕೊಮ್ಮೆ ಬರುವ ಹಬ್ಬವಾದ್ದರಿಂದ ದೇವರ ಪೂಜೆಗೆ ತೆಗೆದುಕೊಳ್ಳಲೇಬೇಕಿದೆ. ಪುಟ್ಟಪ್ಪ ಮಲ್ಲಾಡದ,  ಗ್ರಾಹಕ.ಕೋಟ್‌:ಹಬ್ಬದ ದಿನದಂದು ಬೆಲೆ ಏರಿಕೆಯು ಸಹಜ, ಹಾಗೆಯೇ ಖರೀದಿಸುವವರ ಸಂಖ್ಯೆಯು ಕೂಡಾ ಹೆಚ್ಚಾ ಗುವದರಿಂದ ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿಗೆ ತುಟ್ಟಿಎನಸಬಹುದು.

ಪರಮೇಶಪ್ಪ ನೆಗಳೂರ,

ಕಡ್ಲೆ ಗಿಡ ವ್ಯಾಪಾರಸ್ಥ. 


ಸುದ್ದಿ ಓದಿ