ದಿ. 17 ರಂದು ಮಹಾರಾಣಾ ಪ್ರತಾಪಸಿಂಹರ ಜಯಂತ್ಯೋತ್ಸವ ಕಾರ್ಯಕ್ರಮ
Maharana Pratap Singh's birth anniversary celebration on the 17th
ಬೆಟಗೇರಿ 13 : ಇಲ್ಲಿಯ ರಜಪೂತ ಸಮಾಜ ಆಶ್ರಯದಲ್ಲಿ ರಾಷ್ಟ್ರ ವೀರ ಪುರುಷ ಮಹಾರಾಣಾ ಪ್ರತಾಪಸಿಂಹರ 486ನೇ ಜಯಂತಿಯನ್ನು ಬಾಲಾಜಿ ರಸ್ತೆಯಲ್ಲಿರುವ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ 17 ರ ಬುಧವಾರ ಮುಂಜಾನೆ 9 ಗಂಟೆಗೆ ಜರುಗಲಿರುವದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಬೆಟಗೇರಿ ರಜಪೂತ ಸಮಾಜದ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಜಿಮ್ಸ್ನ ಆರ್ಥೊ ಸರ್ಜನ್ ಡಾ. ಬೀಮಸಿಂಗ್ ವಿ. ಸಮೋರೇಕರ್ ಹಾಗೂ ಧಾರವಾಡದ ಜಿಲ್ಲಾ ಆಸ್ಪತ್ರೆ ಹಿರಿಯ ತಜ್ಞ ವೈದ್ಯರಾದ ಡಾ. ಸಂತೋಷಸಿಂಗ್ ಶಾ. ರಂಗವಾಲೆ ಆಗಮಿಲಿರುವರು. ಮಹಾರಾಣಾ ಪ್ರತಾಪಸಿಂಹರ ಕುರಿತು ನಿವೃತ್ತ ಮುಖ್ಯೋಧ್ಯಾಪಕ ಎಸ್.ಎ. ಜಮಾದಾರ ಉಪನ್ಯಾಸ ನೀಡಲಿರುವರು.
ಅದರಂಗವಾಗಿ ಅಂದು ಮುಂಜಾನೆ 8 ಗಂಟೆಗೆ ಬಾಲಾಜಿ ಮಂದಿರದಲ್ಲಿ ಧ್ವಜಾರೋಹಣ ನಂತರ ಟೆಂಗಿನಕಾಯಿ ಬಜಾರದಲ್ಲಿರುವ ರಾಣಾ ಪ್ರತಾಪ ಸರ್ಕಲ್, ಕೋರ್ಟ ಅಂಡರ್ ಬ್ರಿಡ್ಜದಲ್ಲಿರುವ ಮಹಾರಾಣಾ ಪ್ರತಾಪಸಿಂಹ ಸರ್ಕಲ್ಗಳಲ್ಲಿ ಪೂಜೆ ಹಾಗೂ ರಜಪೂತ ಗಲ್ಲಿ ಮಲ್ಲಿಕಾರ್ಜುನ ರಸ್ತೆಯಲ್ಲಿ ಮಹಾರಾಣಾ ಪ್ರತಾಪರ ಭಾವಚಿತ್ರ ಪೂಜೆ ನಂತರ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಹಾರಾಣಾ ಪ್ರತಾಪ ಸಿಂಹರ ಭಾವಚಿತ್ರ ಪೂಜಾ ಕಾರ್ಯಕ್ರಮದೊಂದಿಗೆ ಪ್ರಮುಖ ಕಾರ್ಯಕ್ರಮ ನೆರವೇರುವದು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ತದನಂತರದ ಪದವಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಗದಗ ಬೆಟಗೇರಿ ರಜಪೂತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಕಾರಣ ಸಮಾಜ ಬಾಂಧವರು ರಾಣಾ ಪ್ರತಾಪರ ಅಭಿಮಾನಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಮಾಜದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 