ಮಹಾಲಕ್ಷ್ಮೀ ಮಹೋತ್ಸವ ಸಂಭ್ರಮ; ಭಕ್ತರಿಗೆ ಆಶೀರ್ವಚನ ನೀಡಿದ ಶಿವಾಚಾರ್ಯರು

ಮಹಾಲಕ್ಷ್ಮೀ ಮಹೋತ್ಸವ ಸಂಭ್ರಮ; ಭಕ್ತರಿಗೆ ಆಶೀರ್ವಚನ ನೀಡಿದ ಶಿವಾಚಾರ್ಯರು Mahalakshmi Mahotsava Celebrations; Shivacharya Bestows Blessings Upon Devotees

ಲೋಕದರ್ಶನ ವರದಿ 

  ಕುಂದರಗಿ  09:  ಕುಂದರಗಿಯಲ್ಲಿ ಮಹಾಲಕ್ಷ್ಮಿ  ದೇವಿ ಜಾತ್ರಾ ಮಹೋತ್ಸವದಲ್ಲಿ ಚರಂತಿಮಠದ ಪೂಜ್ಯರಾದ ವೀರಸಂಗಮೇಶ್ವರ ಶಿವಾಚಾರ್ಯರು ಆರ್ಶಿವಚನ ನೀಡಿದರು. ಬೀಳಗಿ ಕುಂದರಗಿ: ಇಲ್ಲಿನ ಗ್ರಾಮದ ಹೊರವಲಯದಲ್ಲಿರುವ ಜವಳ ಮಹಾಲಕ್ಷ್ಮಿ  18 ನೇ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಗುರುವಾರದಂದು ವಿಜೃಂಭಣೆಯಿಂದ ಜರುಗಿತು.ಬೆಳಗ್ಗಿನಿಂದಲೇ   ದೇವಿಗೆ ಫಲಪಂಚಾಮೃತ ಶ್ರೀಸೂಕ್ತ ಮತ್ತು ಲಲಿತಾ ಸಹಸ್ರನಾಮದೊಂದಿಗೆ ವಿಶೇಷವಾಗಿ ನೆರವೇರಿತು.ನಂತರ ವಿಶೇಷವಾಗಿ ತರಿಸಲಾಗಿದ್ದು ನಾನಾ ಹೂವುಗಳಿಂದ ಅಲಂಕಾರ ಸೇವೆ ನೆರವೇರಿತು.ಧಾರವಾಡದ ಅಧ್ವರ್ಯು ವಿದ್ವಾನ್ ಪಾಂಡುರಂಗ ಶರ್ಮಾ ಅವರ ಹೋತೃ ತಂಡದಿಂದ ಆಶ್ವಾರೂಢ ಮಹಾಲಕ್ಷ್ಮಿ  ಹೋಮವನ್ನು ನೆರವೇರಿಸಲಾಯಿತು.

ಆರಂಭದಲ್ಲಿ ಧ್ಯಾನ, ಜಪ ನಡೆದು ಬಂದವು. ನವಗ್ರಹ ಹೋಮ, ನಂತರ ಮಹಾಲಕ್ಷ್ಮಿ  ಹೋಮವು ಲಲಿತಾ ಸಹಸ್ರನಾಮ ಅಲ್ಲದೇ ಹಿರಣ್ಯಸೂಕ್ತ ಮತ್ತು ಶ್ರೀ ಸೂಕ್ತಗಳಿಂದ ನೆರವೇರಿಸಲಾಯಿತು. ಚರಂತಿಮಠದ ಪೀಠಾಧಿಕಾರಿ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಗ್ರಾಮದಲ್ಲಿ ಸಂಸ್ಕಾರಗಳು ಗಟ್ಟಿಯಾಗಿ ಉಳಿಯಬೇಕಾದಲ್ಲಿ ದೇವರ ಬಗ್ಗೆ ಶ್ರದ್ಧೆ ಇರಬೇಕು. ಹಿರಿಯರಲ್ಲಿ ಗೌರವ ಇಟ್ಟುಕೊಳ್ಳಬೇಕು. ಧಾರ್ಮಿಕ ಮನೋಭಾವನೆಯನ್ನು ರೂಢಿಸಿಕೊಂಡಾಗ ಸಮಾಜ ಸುಭಿಕ್ಷವಾಗಿರುತ್ತದೆ. ಜವಳ ಮಹಾಲಕ್ಷ್ಮಿ  ಪ್ರತಿಷ್ಠಾಪನಾ 18 ನೇ ವರ್ಧಂತ್ಯುತ್ಸವವು ಸಂಭ್ರಮದಿಂದ  ನೆರವೇರುತ್ತಿರುವುದು ಸಂತಸಕರ ಮತ್ತು ಸಮಾಜದ ಆರೋಗ್ಯಕರವಾದ ವಿಚಾರವೆಂದರು.

ಪೂರ್ಣಾಹುತಿ, ನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ಹರ್ಷ ಗುಡಿ ನೇತೃತ್ವದಲ್ಲಿ ನಡೆದು ಬಂದವು.ಇಳಿಹೊತ್ತು ಕುಂದರಗಿಯ ಲಕ್ಷ್ಮೀನಾರಾಯಣ  ಭಜನಾ ಮಂಡಳಿ ವತಿಯಿಂದ ಲಕ್ಷ್ಮಿ  ಶೋಭಾನ ಭಜನೆ ಕಾರ್ಯಕ್ರಮಗಳು ಅಲ್ಲದೇ ಪಲ್ಲಕ್ಕಿ ಉತ್ಸವ ಸಾಗಿ ಬಂದವು.ಜವಳ ಮಹಾಲಕ್ಷ್ಮಿ  ದೇವಸ್ಥಾನದ ಸಮಿತಿಯ ಬಿ. ಟಿ. ಪಾಟೀಲ, ಸುನೀಲ ಪಾಟೀಲ, ಪ್ರಕಾಶ ಅಂಕಲಗಿ, ಗಿರಿಯಪ್ಪ ಕಟಗಿ, ಇಸ್ಮಾಯಿಲ್ ಜಮಾದಾರ, ಪಾಂಡುರಂಗ ಪೂಜಾರಿ, ಮಹಾನಿಂಗಯ್ಯ ದೊಡಮನಿ, ಗುರಯ್ಯ ಬಾರಾಗಣಿ, ವಿ. ಆರ್‌. ಪಾಟೀಲ, ವಿ. ಎಂ. ಕೋಟಿ, ರಾಮಣ್ಣ ಯಡಹಳ್ಳಿ, ತಿಪ್ಪಣ್ಣ ಪೂಜಾರಿ ಕೆ. ಪಿ. ಪಾಟೀಲ, ನಾರಾಯಣ ಜೋಶಿ, ಅರವಿಂದಪ್ಪ ಕಂಬಾರ, ಪ್ರಾಣೇಶಾಚಾರ್ಯ ಕುಂದರಗಿ, ಚಂದ್ರಕಾಂತಭಟ್ಟ ಜೋಶಿ, ಚಂದ್ರಶೇಖರ ಜೋಶಿ, ಅನಂತಮೂರ್ತಿ ಗುಡಿ, ಶ್ರೀಪಾದ ಯಾದವಾಡ, ಬಿ. ಎಚ್‌. ಕುಲಕರ್ಣಿ, ಭೀಮರಾವ್ ದೇಶಪಾಂಡೆ ಇತರರು ಪಾಲ್ಗೊಂಡಿದ್ದರು.