ಹೊರನಾಡು ಕನ್ನಡಿಗರ ಏಕತೆಗಾಗಿ ಮಹಾಮೇಳ: ಉದ್ಘಾಟನಾ ಸಮಾರಂಭ
Maha Mela for the unity of Kannadigas abroad: Inaugural ceremony
ಲೋಕದರ್ಶನ ವರದಿ
ಸೋಲ್ಲಾಪುರ : ಕನ್ನಡ ಭಾಷೆ ಐತಿಹಾಸಿಕ ಭಾಷೆಯಾಗಿದ್ದು. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಧೋಳದ ಮೃತ್ಯುಂಜಯ ಅಪ್ಪಗಳವರ ಅಪಾರ ಕನ್ನಡದ ಪ್ರೀತಿ, ಕಳಕಳಿಯಿಂದ ಇಂದು ಸೋಲಾಪುರದಲ್ಲಿ ಕನ್ನಡ ಸಂಪದ್ಭರಿತವಾಗಿ ಬೆಳೆದಿದೆ. ಸೋಲಾಪುರದ ರುದ್ರಾಂಬಿಕಾ ತಾಯಿ ಮೃತ್ಯುಂಜಯ ಅಪ್ಪಗಳನ್ನು ಮಧೋಳದಿಂದ ಕರೆಯಿಸಿ ಪ್ರವಚನ ಮಾಡಿಸುತ್ತಿದ್ದರು. ಹೀಗಾಗಿ ಕೀರೀಟ ಮಠವನ್ನು ಶ್ರೀಗಳಿಗೆ ರುದ್ರಾಂಬಿಕಾ ತಾಯಿ ದಾನರೂಪದಲ್ಲಿ ನೀಡಿರುವುದು ಇತಿಹಾಸ ಎಂದು ಸೋಲ್ಲಾಪುರದ ಕೀರಿಟೇಶ್ವರ ಮಠದ ಮ.ನಿ.ಪ್ರ ಸ್ವಾಮಿನಾಥ ಮಹಾಸ್ವಾಮಿಗಳು ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದ ನೆರವಿನಿಂದ ಹಾಗೂ ಸೋಲ್ಲಾಪುರ ಜಿಲ್ಲೆಯ ಕನ್ನಡ ಸಂಘಗಳ ಸಹಯೋಗದಲ್ಲಿ ಸೋಲ್ಲಾಪುರದ ಹಾತಾತ್ಮ ಸ್ಮೃತಿ ಮಂದಿರದ, ಸೊನ್ನಲಗಿ ಸಿದ್ಧರಾಮ ಸಭಾಂಗಣ ಮತ್ತು ವಾರದ ಮಲ್ಲಪ್ಪನವರ ವೇದಿಕೆಯಲ್ಲಿ ಜರುಗಿದಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10 ನೇ ಮಹಾಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ಹೊರನಾಡು ಕನ್ನಡಿಗರಿಗೆ ಅಭದ್ರತೆ ಕಾಡುತ್ತಿದ್ದು ಅವರಿಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯ ನೀಡುವ ಕಾರ್ಯವನ್ನು ನಾಡಿನ ಹಿರಿಯ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘವು ಹೊರನಾಡು ಸಂಘಗಳ ಮೂಲಕ ಮಾಡುತ್ತಿದೆ. ಆದರೆ, ಇದೇ ನಡೆಯನ್ನು ಕರ್ನಾಟಕ ಸರ್ಕಾರ ಏತಕ್ಕೆ ಮಾಡುತ್ತಿಲ್ಲ? ಆದ್ದರಿಂದ ರಾಜಕಾರಣಿಗಳನ್ನು ಹೇಗೆ ಭಾಷಾ ರಾಜಕಾರಣಕ್ಕೆ ತೊಡಗಿಸಬೇಕು ಎಂಬುದನ್ನು ಕನ್ನಡದ ಸಂಘಗಳು ಆಲೋಚನೆ ಮಾಡಬೇಕು.
ಭಾಷೆ, ಭಾಷಾ ತತ್ವ ಇಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಿ ಭಾಷಿಕ ಪಕ್ಷವನ್ನು ಕಟ್ಟಬೇಕಿದೆ. ಆಗ ಭಾಷಾ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಂಬಿಕೆ ಇದೆ. ಇದರ ಭಾಗವಾಗಿ ದಕ್ಷಿಣ ಭಾರತದ ಐದಾರು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ಜನ ವಿರೋಧಿ ನೀತಿಗಳನ್ನು ವಿರೋಧಿಸಲು ಸಾಧ್ಯವಿದೆ ಎಂಬುದನ್ನು ಭಾಷಿಕ ನೆಲೆಗಟ್ಟಿನ ಮೂಲಕ ಆಲೋಚನೆ ಮಾಡಿದರೆ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಪ್ರತಿಪಾದಿಸಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 