ವಿವಿಧ ಕ್ಷೇತ್ರಗಳಲ್ಲಿ 10 ಜನ ಸಾಧಕರಿಗೆ ಮಹಾನ ಅಂಬೇಡ್ಕರ್ ರತ್ನ ಪ್ರಶಸ್ತಿ

ಮುದ್ದೇಬಿಹಾಳ 10: ಕರ್ನಾಟಕ ಭೀಮ್ ಸೇನೆಯ ವಿಜಯಪುರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ ಭಾಗ 2 ಗ್ರಾಮದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೆ ಜಯಂತೋತ್ಸವ ಮತ್ತು ಮಹಿಳಾ ಘಟಕ ಉದ್ಘಾಟನಾ ಹಾಗೂ ಅಂಬೇಡ್ಕರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿವಿಧ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಸಾಧಕರಿಗೆ ಮಹಾನ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಭೀಮ್ ಸೇನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರ ಯಲ್ಲಪ್ಪ ಚಲವಾದಿ ತಿಳಿಸಿದರು.  

ಪಟ್ಟಣದ ಕೀರ್ತಿ ಸಾಗರ ಹೋಟೇಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಭೀಮ್ ಸೇನೆಯ ಸಮೀತಿಯ ಹಲವು ವರ್ಷಗಳಿಂದ ಸಂವಿದಾನ ಶಿಲ್ಪಿ ಡಾ, ಬಿ ಆರ್ ಅಂಬೇಡ್ಕರವರ ಚಿಂತನೆ ಹಾಗೂ ದೇಶಕ್ಕೆ ನೀಡಿದ ಸಂವಿದಾನದ ಮಹತ್ವವೂ ಇಡಿ ವಿಶ್ವಕ್ಕೆ ಮಾದರಿಯಾಗಿದೆ ಅವರ ಜೀವನ ಆದರ್ಶ ತತ್ವಗುಣಗಳನ್ನು ಇಂದಿನ  ಯುವ ಪೀಳಿಗೆಗೆ ತಿಳಿಸುವು ಉದ್ದೇಶದಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೆ ಬರುತ್ತಿದೆ ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರ್ತಿಸಿ ಪ್ರಶಸ್ತಿ ನೀಡುವ ಮೂಲಕ ಸ್ಪೂರ್ತಿ ತುಂಬಿ ಇನ್ನಷ್ಟು ಸಾಮಾಜಿಕ ಸೇವೆ ನೀಡುವಂತಾಗಲಿ ಎನ್ನುವುದೊಂದೆ ಇದರ ಪ್ರಮುಖ ಉದ್ದೇಶವಾಗಿದೆ ಎಂದು. ಈ ವೇಳೆ   ಚಿಕ್ಕೋಡಿ ತಾಲೂಕಿನ ಅಂಬೇಡ್ಕರ ವಿಚಾರಧಾರೆಯ ಅಗಾಧವಾದ ಪಂಡಿತ ಜ್ಞಾನವನ್ನು ಹೊಂದಿದ ಸಂತೋಷ ದೊಡಮನಿ,  

ಭೀಮ ಆರ್ಮಿ ಭಾರತ್ ಮಿಷನ್ ಮಾನವ ಹಕ್ಕುಗಳ ಹೋರಾಟ ಸಮೀತಿಯ ಸಾಮಾಜಿಕ ಕಾರ್ಯಕರ್ತ ಅಧ್ಯಕ್ಷ ಮುತ್ತುರಾಜ ಹು. ಬಾಗೇವಾಡಿ, ದಲಿತ ಧೌರ್ಜನ್ಯ ನಿಯಂತ್ರಣ ಸಮೀತಿಯ ಸದಸ್ಯ ಮಲ್ಲು ಎಸ್‌. ತಳವಾರ. ಕರ್ನಾಟಕ ಭೀಮ ಆರ್ಮಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಮತಿನಕುಮಾರ, ದಲಿತ ಹಿರಿಯ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಹರೀಶ ನಾಟಿಕಾರ, ಹಿರಿಯ ದಲಿತ ಸಾಹಿತಿ ಪತ್ರಕರ್ತ ಪರುಶುರಾಮ ಕೊಣ್ಣೂರ, ಪತ್ರಕರ್ತ ಶಕ್ತಿಕುಮಾರ್ ಉಕುಮನಾಳ,  ಅಥರ್ಗಾದ ಕ್ರಾಂತಿ ಗೀತೆ ಹಾಗೂ ಹಿರಿಯ ದಲಿತ ಸಾಹಿತಿ ಪರಶುರಾಮ ದೊಡಮನಿ, ದಲಿತ ಸಂಘರ್ಷ ಸಮೀತಿಯ ಜಿಲ್ಲಾ ಸಂಚಾಲಕ ಸಿ ಜೆ ವಿಜಯಕರ, ಶಿವಕುಮಾರ್ ವಿ  ಸೇರಿದಂತೆ ಇನ್ನು ಹಲವರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಸಾಧಕರು ಅಂಬೇಡ್ಕರ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.