ಜನಸೇವಾ ಕಾರ್ಯಕ್ರಮದಿಂದ ಶಾಸಕ ನಿರ್ಗಮನ
MLA leaves public service event
ಜನಸೇವಾ ಕಾರ್ಯಕ್ರಮದಿಂದ ಶಾಸಕ ನಿರ್ಗಮನ
ಜಮಖಂಡಿ 13: ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದ ಪ್ರಜಾಸೇವಾ ಆಂದೋಲನಹಿಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಕಾರ್ಯಕ್ರಮ ಕಾಟ್ಟಾಚಾರದ ಕಾರ್ಯಕ್ರಮವಾಗಿತ್ತು. ಶಾಸಕ ಜಗದೀಶ ಗುಡಗುಂಟಿ ಅವರು ಕೇವಲ 10 ನಿಮಿಷದಲ್ಲಿ ವೇದಿಕೆಯಿಂದ ನಿರ್ಗಮಿಸಿದ ಘಟನೆ ಜರುಗಿತು. ಪ್ರಜಾಸೇವಾ ಆಂದೋಲನಹಿಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ, ಸರ್ಕಾರದ ವಿವಿಧ ಸೇವೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಪ್ರಜಾಸೇವಾ ಆಂದೋಲನಹಿಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಜನಪರ ಹಾಗೂ ಮಹತ್ವದ ವೇದಿಕೆಯಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ತ್ವರಿತವಾಗಿ ಪರಿಹಾರ ಕಲ್ಪಿಸುವ ಮೂಲಕ ಕಾರ್ಯಕ್ರಮದ ಉದ್ದೇಶ ಯಶಸ್ವಿಗೊಳಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಅವರು ಹೇಳಿದ ಬಳಿಕ ಕೇವಲ 10 ನಿಮಿಷದಲ್ಲಿ ವೇದಿಕೆಯಿಂದ ನಿರ್ಗಮಿಸಿದ ಘಟನೆ ಜರುಗಿತು. ಕಾರ್ಯಕ್ರಮದಲ್ಲಿ ಸ್ವಲ್ಪ ಅಸ್ತವ್ಯಸ್ತವಾಯಿತು. ಅರ್ಜಿ ಸ್ವೀಕರಿಸಲು ಅಯಾ ಇಲಾಖೆಯ ಸಿಬ್ಬಂದಿಗಳು ಇರಲಿಲ್ಲಾ. ಇನ್ನೂ ಕೆಲವು ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿಗಳನ್ನು ಕಳುಹಿಸಿ ಸುಮ್ಮನೆ ಮನೆಯಲ್ಲಿ ಕುಳಿತ ಹಾಗೇ ಆಗಿತ್ತು. ಇದರಿಂದ ಸಾರ್ವಜನಿಕ ಅರ್ಜಿಗಳು ಕೇವಲ ಓದೋದಕ್ಕೆ ಮಾತ್ರ ಮೀಸಲಾಗಿದ್ದವೂ. ಬಂದಂತಹ ಅರ್ಜಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಪೋಡೀ, ಪಟ್ಟಾ ತಿದ್ದುಪಡಿ , ವಾರಸಾ ಬದಲಾವಣೆ, ಹಕ್ಕು ಬದಲಾವಣೆ ಅಂತಾ ಹೆಚ್ಚಿನವದಾಗಿತ್ತು. ಇವುಗಳೆಲ್ಲವೂ ಸ್ಥಳದಲ್ಲಿಯೇ ಪರಿಹಾರ ನೀಡಬದುದಾಗಿತ್ತು. ಆದರೇ ತರಾತೂರಿನಲ್ಲಿ ತಹಶಿಲ್ದಾರರು ತಮ್ಮ ಇಲಾಖೆಗೆ ಬಂದ ಅರ್ಜಿಗಳಿಗೆ ಆದಷ್ಟು ಬೇಗ ಕ್ರಮ ಕೈಗೊಂಡು ಉತ್ತರ ನೀಡುತ್ತೆವೆ ಎಂದು 11:30ಕ್ಕೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಧ್ಯಾಹ್ನ 3 ಕ್ಕೆ ಮುಕ್ತಾಯಗೊಳಿಸಿದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 