ಹಾವೇರಿ 20 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಮಗದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ಮಂಜೂರಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆಗೆ ಹಾಗೂ ಕೊಳವೆಬಾವಿ ಕೊರೆಸಲು ಶಾಸಕ ಯು.ಬಿ.ಬಣಕಾರ ಅವರು ಶನಿವಾರ ಹಿರೇಕೆರೂರಿನಲ್ಲಿ ಚಾಲನೆ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಎಂಟು ಅಭ್ಯರ್ಥಿಗಳಿಗೆ ಕೊಳವೆಬಾವಿ ಸೌಲಭ್ಯ ಮಂಜೂರಾಗಿದ್ದು, ತಲಾ ರೂ. ಮೂರು ಲಕ್ಷದಂತೆ ಒಟ್ಟು ರೂ. 24 ಲಕ್ಷ ಮೊತ್ತವನ್ನು ನಿಗಮದಿಂದ ಸಹಾಯಧನ ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿಸದಸ್ಯ ಶಿವರಾಜ ಹರಿಜನ, ವಕೀಲರಾದ ಎಸ್.ಬಿ.ತಿಪ್ಪಣ್ಣನವರ ಹಾಗೂ ನಬಿಸಾಬ ಕಡೆಮನಿ ಇತರರು ಉಪಸ್ಥಿತರಿದ್ದರು.