ಲಂಡನ್ 20: ಒಂದು ವೇಳೆ ಯುದ್ಧಪೀಡಿತ ಗಾಜಾ ಪ್ರದೇಶಕ್ಕೆ ಹೆಚ್ಚಿನ ಆಹಾರ ಪದಾರ್ಥ ತಲುಪದಿದ್ದರೆ 48 ಗಂಟೆಯೊಳಗೆ ಸುಮಾರು 14,000 ಶಿಶುಗಳು ಸಾವ*ನ್ನಪ್ಪುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
11 ವಾರಗಳಿಂದ
ಗಾಜಾದ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಿದ ನಂತರ ಇಸ್ರೇಲ್ ಅಧಿಕಾರಿಗಳು ಪ್ಯಾಲೆಸ್ತೀನ್ ಪ್ರದೇಶಕ್ಕೆ ಸೀಮಿತ ನೆರವು ನೀಡಲು ಮಾತ್ರ ಅವಕಾಶ ನೀಡುತ್ತಿದೆ. ಇಸ್ರೇಲ್ ನ ಈ ನಿರ್ಧಾರದ
ವಿರುದ್ಧ ಅಮೆರಿಕ, ಕೆನಡಾ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್ ಡಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
“ಶಿಶುಗಳ
ಆಹಾರ ಸೇರಿದಂತೆ ಮಾನವೀಯ ನೆರವು ತುಂಬಿದ್ದ ಕೇವಲ ಐದು ಟ್ರಕ್ ಗಳು ಮಾತ್ರ ಸೋಮವಾರ ಗಾಜಾವನ್ನು ತಲುಪಿದ್ದು, ಇದು ಸಾಗರಕ್ಕೆ ಒಂದು ಹನಿ ಹಾಕಿದಂತೆ ಆಗಿದೆ. ಆಹಾರ ವಸ್ತುಗಳು ಇನ್ನೂ ಕೂಡಾ ಅಗತ್ಯವಿರುವವರಿಗೆ ತಲುಪಿಲ್ಲ ಎಂದು ವಿಶ್ವಸಂಸ್ಥೆ ಮಾನವೀಯ ವ್ಯವಹಾರಗಳ ಮುಖ್ಯಸ್ಥ ಟಾಮ್ ಫ್ಲೆಚರ್ ತಿಳಿಸಿದ್ದಾರೆ.
“ಒಂದು
ವೇಳೆ ಗಾಜಾ ಪ್ರದೇಶಕ್ಕೆ ಸಾಕಷ್ಟು ಪ್ರಮಾಣದ ಆಹಾರ ತಲುಪದಿದ್ದರೆ, ಮುಂದಿನ 48ಗಂಟೆಗಳಲ್ಲಿ 14,000 ಶಿಶುಗಳು ಕೊನೆಯುಸಿರೆಳೆಯುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಶಿಶುಗಳ ತಾಯಂದಿರು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಮಕ್ಕಳಿಗೆ ಹಾಲುಣಿಸುವ ಶಕ್ತಿಯನ್ನೂ ಹೊಂದಿಲ್ಲ. ಹೀಗಾಗಿ ತಾಯಂದಿರಿಗೆ ಆಹಾರ ಒದಗಿಸದಿದ್ದರೆ ಮಕ್ಕಳು ಸಾಯು*ವ ಸಾಧ್ಯತೆ ಇದ್ದಿರುವುದಾಗಿ
ಫ್ಲೆಚರ್ ಬಿಬಿಸಿ ರೇಡಿಯೊ 4 ಜತೆ ಮಾತನಾಡುತ್ತ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿಸಿದೆ.
ಒಂದು
ವೇಳೆ ಗಾಜಾ ಮೇಲಿನ ಮಾನವೀಯತೆ ನಿರ್ಬಂಧವನ್ನು ಕೊನೆಗೊಳಿಸದಿದ್ದರೆ ಜಂಟಿಯಾಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಇಸ್ರೇಲ್ ವಿರುದ್ಧ ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ಎಚ್ಚರಿಕೆ ನೀಡಿದ ನಂತರ ಫ್ಲೆಚರ್ ಈ ಪ್ರತಿಕ್ರಿಯೆ ನೀಡಿರುವುದಾಗಿ
ವರದಿಯಾಗಿದೆ.