ಸತ್ತಿಗೇರಿ ಗ್ರಾಮದಲ್ಲಿ 30.00 ಲಕ್ಷ ಅಂದಾಜು ಮೊತ್ತದ ಮೇಲ್ಮಟ್ಟದ ಜಲ ಸಂಗ್ರಹಾಲಯಕ್ಕೆ ಶಾಸಕ ವಿಶ್ವಾಸ ವೈದ್ಯರಿಂದ ಭೂಮಿ ಪೂಜೆ
ಲೋಕದರ್ಶನ ವರದಿ
ಯರಗಟ್ಟಿ 29 : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಳಗಾವಿ (ಉಪ ವಿಭಾಗ ಸವದತ್ತಿ) ಇವರ ಆಶ್ರಯದಲ್ಲಿ 2025-26 ನೇ ಸಾಲಿನ ಯೋಜನೆಯಡಿ ಸಮೀಪದ ಸತ್ತಿಗೇರಿ ಗ್ರಾಮದ ಕೊಡ್ಲಿವಾಡ ಪ್ಲಾಟ್ ಹತ್ತಿರ ನೂತನವಾಗಿ ನಿರ್ಮಾಣವಾಗಲಿರುವ ಮೇಲ್ಮಟ್ಟದ ಜಲ ಸಂಗ್ರಹಾಲಯದ ಕಾಮಗಾರಿಗೆ ಇತ್ತಿಚಿಗೆ ಸ್ಥಳ ಪೂಜೆ ನೆರವೇರಿಸಿ ಚಾಲನೆ ನೀಡದ ಶಾಸಕ ವಿಶ್ವಾಸ ವೈದ್ಯ.
ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಸುಸಜ್ಜಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸುಮಾರು 30.00 ಲಕ್ಷ ಅಂದಾಜು ಮೊತ್ತದ ಈ ಯೋಜನೆಯಿಂದ ಸತ್ತಿಗೇರಿ ಗ್ರಾಮದ ಸಾರ್ವಜನಿಕರ ಕುಡಿಯುವ ನೀರಿನ ಅಗತ್ಯತೆ ಸಂಪೂರ್ಣವಾಗಿ ಈಡೇರಲಿದ್ದು, ಕಾಮಗಾರಿಯನ್ನು ಅತ್ಯಂತ ಗುಣಮಟ್ಟದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ವಿಶ್ವಾಸ ವೈದ್ಯ.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ಮಲಿಕಸಾಬ ಬಾಗವಾನ, ಬಂಗಾರೆಪ್ಪ ಹರಳಿ, ಸುರೇಶ ಭಜಂತ್ರಿ, ಬಸವರಾಜ ಸತ್ತೂರಿ, ಯಂಕಣ್ಣಾ ಕಳ್ಳಿಗುದ್ದಿ, ಸತ್ತಿಗೇರಿ ಗ್ರಾ. ಪಂ. ಪಿಡಿಓ ಎ. ಬಿ ಬಂಗಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಗೋಪಾಲ ದಳವಾಯಿ, ಉಮೇಶ ಮಾಗುಂಡನ್ನವರ, ಸಿದ್ದಪ್ಪ ರಂಗರಣ್ಣವರ, ಬನಪ್ಪಗೌಡ ಪಾಟೀಲ, ಮುಗಬಶೀರ ಭಾಗವಾನ, ಜಯವಂತ ಹಾದಿಮನಿ, ರುದ್ರ್ಪ ತುಮಂದಿ, ನಾಗಪ್ಪ ತುರಮಂದಿ, ಶಿವಪ್ಪ ದೇಸಾಯಿ, ಆರ್‌ಡೆಬ್ಲೂಎಸ್ ಇಲಾಖೆಯ ಅಧಿಕಾರಿಗಳು ಬಸವರಾಜ ಅಯ್ಯನಗೌಡ್ರ, ಪ್ರೇಮ ರಾಠೋಡ, ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.