ಶಾಸಕ ಪಠಾಣ ಅವರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಶಾಸಕ ಪಠಾಣ ಅವರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ  MLA Pathan performs ground-breaking ceremony for various works

 ಲೋಕದರ್ಶನ ವರದಿ 

ಶಿಗ್ಗಾವಿ 17:  ಶಿಗ್ಗಾವಿ ಸವಣೂರ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಅದರ ಜೊತೆ ಮೂಲಭೂತ ಸೌಕರ್ಯ ಅಭಿವೃದ್ಧಿಯು ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಾಣ, ರಸ್ತೆ ಅಭಿವೃದ್ಧಿ ,ಕೆರೆ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಚಾಲನೆ ನೀಡಿ ಮಾತನಾಡಿದ ಅವರುಅನುದಾನದಲ್ಲಿ ಲಭ್ಯತೆ ಮತ್ತು ಕಾಮಗಾರಿಯ ಅವಶ್ಯಕತೆ ನೋಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ ಅದಕ್ಕೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ ಎಂದರು. 

ಗುಡ್ಡದಚನ್ನಾಪೂರ 158 ಲಕ್ಷ,ಹುಲಿಕಟ್ಟಿ 40 ಲಕ್ಷ, ಹಳೆಬಂಕಾಪೂರ 30 ಲಕ್ಷ , ಮೂಕ ಬಸರಿಕಟ್ಟಿ 65 ಲಕ್ಷ, ನಾರಾಯಣಪೂರ 50 ಲಕ್ಷ, ಇಬ್ರಾಹಿಂಪೂರ 55 ಲಕ್ಷ, ಸದಾಶಿವಪೇಟೆ 40 ಲಕ್ಷ, ಮುನವಳ್ಳಿ 20 ಲಕ್ಷ ,ಬಿಸನಳ್ಳಿ 40 ಲಕ್ಷ ವೆಚ್ಚದ ವಿವಿಧ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿ ಇದರ ಜೊತೆಗೆ ಹಳೆಬಂಕಾಪೂರ 183, ಸದಾಶಿವಪೇಟೆ 72 ಒಟ್ಟು 255 ಫಲಾನುಭವಿಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಮಾಡಿದರು.ಶಿಗ್ಗಾವಿ ಸವಣೂರ ಕ್ಷೇತ್ರದಲ್ಲಿ ಸುಮಾರು 20,000 ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣೆ ಮಾಡುವ ಗುರಿ ಹೊಂದಲಾಗಿದೆ, ಈಗಾಗಲೇ 8,000 ಫಲಾನುಭವಿಗಳ ಹಕ್ಕು ಪತ್ರ ದಾಖಲೆಗಳು ಸಿದ್ದವಾಗಿದ್ದು ಆಯಾ ಗ್ರಾಮಗಳ ಭೇಟಿ ಸಂದರ್ಭದಲ್ಲಿ ವಿತರಣೆ ಮಾಡುತ್ತಿದ್ದೇವೆ ಎಂದರು.