ರಸ್ತೆ ಮೇಲೆ ಟ್ರ್ಯಾಕ್ಟರ್ ಕಬ್ಬಿಣ ವೀಲ್ ಹಾಕದಂತೆ ರೈತರಲ್ಲಿ ಶಾಸಕ ಗಣೇಶ ಮನವಿ

MLA Ganesh appeals to farmers not to place tractor iron wheels on the road

ಕಂಪಿ  12:  ಕ್ಷೇತ್ರದಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿಯಾಗಿದ್ದು, ಡಾಂಬರ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಕಬ್ಬಿಣ ವೀಲ್ ಹಾಕುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ಇದರಿಂದ ಕೋಟ್ಯಾಂತರ ಅನುದಾನ ವ್ಯರ್ಥವಾಗುವಂತಾಗಿದೆ. ಆದ್ದರಿಂದ ರೈತರು ಗಮನಹರಿಸಿ, ರಸ್ತೆ ಮೇಲೆ ವೀಲ್ ಹಾಕುವುದು ಬಿಡಬೇಕು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು. 

ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಸುಮಾರು 490 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ದೇವಸಮುದ್ರ-ಚಿಕ್ಕಜಾಯಿಗನೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶುಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಒಂದು ಅನುದಾನ ತರಲು, ಒಂದೆರಡು ವರ್ಷ ಬೇಕು. ಅಭಿವೃದ್ಧಿಗಾಗಿ ಕಷ್ಟಪಟ್ಟು ಅನುದಾನ ತಂದು, ರಸ್ತೆಗಳನ್ನು ಮಾಡಲಾಗುತ್ತಿದೆ. ಇಂತದರಲ್ಲಿ ರೈತರು ವೀಲ್ ಹಾಕುವುದರಿಂದ ರಸ್ತೆಗಳು ಹಾಳಾಗುತ್ತವೆ. ಹೊಸ ರಸ್ತೆಗಳು ವೀಲ್ ಹಾಕುವುದರಿಂದ ಬಾಳಿಕೆ ಬರುವುದಿಲ್ಲ. ಆದ್ದರಿಂದ ರೈತರು ಜಾಗೃತರಾಗಿ ವೀಲ್ ಹಾಕುವದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಒಂದೆರಡು ವರ್ಷದಲ್ಲಿ ಜವುಕು, ಕಿರು ಸೇತುವೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಕೋಳೂರು ಕ್ರಾಸ್‌- ಕುರುಗೋಡು-ಎಮ್ಮಿಗನೂರು, ಎಮ್ಮಿಗನೂರು-ಕಂಪ್ಲಿ, ಕಂಪ್ಲಿ-ರಾಮಸಾಗರದವರೆಗೆ ಸುಮಾರು 37 ಕಿ.ಮೀವರೆಗೆ ಸೇರಿದಂತೆ ಒಟ್ಟಾರೆಯಾಗಿ 67 ಕಿ.ಮೀ ರಸ್ತೆ ಅಭಿವೃದ್ಧಿಯಾದಂಗಾಗಿದೆ. ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿಗೆ ದಿನವಿಡಿ ಶ್ರಮಿಸಲಾಗುತ್ತಿದೆ ದೇವಸಮುದ್ರ ಗ್ರಾಮದ ಹರಿಜನ ಕಾಲೂನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶ್ರೀಘ್ರದಲ್ಲಿ ಭೂಮಿಪೂಜೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಷಣ್ಮುಖಪ್ಪ, ಗ್ರಾಪಂ ಅಧ್ಯಕ್ಷೆ ಮಾಯಪ್ಪ, ಸದಸ್ಯರಾದ ನಾಯಕರ ವೆಂಕೋಬ, ಮೌನೇಶ, ಮುಖಂಡರಾದ ಹೆಚ್‌.ಗುಂಡಪ್ಪ, ಕೋರಿ ಚನ್ನಬಸುವ, ಕರಿಯಪ್ಪ, ಚಾನಾಳ ಪಕ್ಕೀರ​‍್ಪ, ಕೋರಿ ನಾಗೇಂದ್ರ​‍್ಪ, ದೊಡ್ಡನಾಯಕ, ವಿರುಪಣ್ಣ, ಅಂಜಿನಿ ಸೇರಿದಂತೆ ಅನೇಕರಿದ್ದರು. 

ಮೇ.01: ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಸುಮಾರು 490 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ದೇವಸಮುದ್ರ-ಚಿಕ್ಕಜಾಯಿಗನೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್‌.ಗಣೇಶ ಸೋಮವಾರ ಶುಂಕುಸ್ಥಾಪನೆ ನೆರವೇರಿಸಿದರು.