ಜಾಸೇವಾ ಅಭಿಯಾನ ಸಭೆ ಉದ್ಘಾಟಿಸಿದ ಶಾಸಕ ಗಣೇಶ ಹುಕ್ಕೇರಿ

ಜಾಸೇವಾ ಅಭಿಯಾನ ಸಭೆ ಉದ್ಘಾಟಿಸಿದ ಶಾಸಕ ಗಣೇಶ ಹುಕ್ಕೇರಿ MLA Ganesh Hukkeri inaugurates 'Jaseva Abhiyan' meeting

ಲೋಕದರ್ಶನ ವರದಿ

ಮಾಂಜರಿ 06:  ರಾಜ್ಯದಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಸಾರ್ವಜನಿಕರು ಸರಕಾರದ ಜನಪರ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. 

ಯಕ್ಸಂಬಾ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರಿ​‍್ಡಸಿದ್ದ ಪ್ರಜಾಸೇವಾ ಅಭಿಯಾನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇನ್ನು ಮುಂದೆ ಸರಕಾರ ಜನರ ಬಾಗಿಲಿಗೆ ಬರಲಿದೆ. ಅಧಿಕಾರಿಗಳು ಸಾರ್ವಜನಿಕರಿಂದ ಅವಹಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಯೋಜನೆಗಳಿಂದ ತೆಗಳಿಂದೆ ಯಾರೂ ವಂಚಿತರಾಗದಂತೆ ನೋಡಿಕೋಳ್ಳಬೇಕು ಎಂದು ಸೂಚಿಸಿದರು. 

ಉಪವಿಭಾಗಾಧಿಕಾರಿ ಎಸ್‌.ಎಸ್‌. ಸಂಪಗಾವಿ ಮತ್ತು ತಹಶೀಲ್ದಾರ್ ರಾಜೇಶ ಬುರ್ಲಿ ಮಾತನಾಡಿ, ಸರಕಾರ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಪ್ರಜಾಸೇವಾ ಅಭಿಯಾನ ಸಭೆ ಪ್ರಾರಂಭಿಸಿದೆ. ಸಭೆಯಲ್ಲಿ ಸ್ವೀಕರಿಸಿದ ಅಹವಾಲು ಕೂಲಂಕುಷವಾಗಿ ಪರೀಶೀಲಿಸಿ" 7 ದಿನಗಳೊಳಗಾಗಿ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಹೇಳಿದರು. ಪಪಂ ಅಧ್ಯಕ್ಷ ಸುನೀಲ ಸಪ್ತಸಾಗರೆ, ರಮೇಶ ಪಾಟೀಲ, ಸತೀಶ ಪಾಟೀಲ, ವಿನೋದ ಕಾಗೆ ಸೇರಿದಂತೆ ಅಧಿಕಾರಿಗಳಿದ್ದರು.

ಸಭೆಯಲ್ಲಿ ಪಪಂ 3, ಸರ್ವೆ 3, ಆಹಾರ 3 ಮತ್ತು ಕಂದಾಯ ಇಲಾಖೆ 28 ಹೀಗೆ 36 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಉಪತಹಶೀಲ್ದಾರ್ ಪಿ.ಬಿ. ಶಿರಿವಂತ, ಮಾರುತಿ ನಾಗರಾಳೆ, ಎಂ.ಜಿ. ಹಟ್ಟಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು, ಪಪಂ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಫಲಾನುಭವಿಗಳು ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಎಸ್‌. ಧುಪದಾಳ ನಿರೂಪಿಸಿದರು. ಮಹಾಂತೇಶ ನಿಡವಣಿ ಸ್ವಾಗತಿಸಿದರು.