ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಚಾಲನೆ

ಶಿರಹಟ್ಟಿ 17: ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅವಶ್ಯಕವಾಗಿರುವ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲಾಗಿದ್ದು, ಪಟ್ಟಣದ ಮೂರನೇ ವಾರ್ಡ್‌ ಮೇಗೇರಿ ಓಣಿ ಶಿರಹಟ್ಟಿ ಮಾಗಡಿ ರಸ್ತೆಯಲ್ಲಿನ ಕೃಷಿ ಇಲಾಖೆ ಎದುರುಗಡೆ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶನಿವಾರ ಮಧ್ಯಾಹ್ನ ಶಾಸಕ ಡಾ.ಚಂದ್ರು ಲಮಾಣಿ ಅವರು ಕಾರ್ಡ್‌ ಹಾಕಿ ನಂತರ ಸ್ವತಃ ನೀರು ಕುಡಿಯುವ ಮೂಲಕ ಚಾಲನೆ ನೀಡಿದರು. 

ಈ ಸಂದರ್ಬದಲ್ಲಿ ತಹಶೀಲ್ದಾರ್ ಅನಿಲ್ ಬಡಿಗೇರ, ಪಟ್ಟಣ ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪಂಚಾಯ್ತಿ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ,  ಪರಮೇಶ ಪರಬ, ಇಸಾಕ್ ಆದ್ರಳ್ಳಿ, ತಿಪ್ಪಣ್ಣ ಕೊಂಚಿಗೇರಿ, ಅಶೋಕ ವರವಿ,  ಅಕ್ಬರ ಯಾದಗಿರಿ, ಬಿ.ಡಿ ಪಲ್ಲೇದ, ಜಾನು ಲಮಾಣಿ, ಶಂಕರ ಮರಾಠೆ, ಬಸವರಾಜ ತುಳಿ, ಸಂದೀಪ ಕಳಸಣ್ಣವರ, ಇಶಾಕ್ ಅಹಮ್ಮದ್ ಡಾಲಾಯತ, ಆದ್ರಳ್ಳಿ, ನಂದಾ ಪಲ್ಲೇದ ಇನ್ನು ಅನೇಕರಿದ್ದರು.