ಕಚೇರಿ ನಿರ್ಮಾಣಕ್ಕೆ ಶಾಸಕ ದೊಡ್ಡನಗೌಡ ಭೂಮಿ ಪೂಜೆ


ಹುನಗುಂದ 09: ದೇಶದ ಪ್ರಧಾನಿ ಮೋದಿಜಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಸಾಕಷ್ಟು ಪ್ರಮಾಣದಲ್ಲಿ ನೀಡಿದ ಅನುದಾನದಿಂದ ಹಲವಾರು ಕಾಮಗಾರಿಗಳನ್ನು ಕೈಗೊಂಡು ಹುನಗುಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.                                             

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂ. ಸೆಕ್ಷೆನ್ ಕಚೇರಿ ಹಿಂದುಗಡೆ ಸಿವ್ಹಿಲ್ ಕಾಮಗಾರಿ ಅಡಿಯಲ್ಲಿ ಸಹಾಯಕ ಕಾರ್ಯನಿರ್ವಾಕ ಅಭಿಯಂತರರ ಉಪ ವಿಭಾಗದ ನೂತನ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 

 ಈ ಕಾಮಗಾರಿಗೆ ರೂ 1ಕೋಟಿ ಅನುದಾನವನ್ನು ಮಂಜೂರ ಮಾಡಲಾಗಿದೆ. ಈ ಕ್ಷೇತ್ರದ ಜನರ ಬಹುವರ್ಷಗಳ ಬೇಡಿಕೆ ಇಡೇರಸಲು ಪಟ್ಟ ಶ್ರಮ ಫಲಪ್ರದವಾಗಿದೆ. ಕಪ್ಪು ಭೂಮಿ ಇರುವದರಿಂದ ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಿ ಸೀಮಿತ ಅವದಿಯಲ್ಲಿ ಕಾಮಗಾರಿ ಮುಗಿಸಬೇಕು. ಕಟ್ಟಣ ನಿರ್ಮಾಣದ ಹಂತದಲ್ಲಿ ನಾನು ಆಗಾಗ್ಗೆ ಭೇಟಿ ನೀಡಿ ಪರೀಶೀಲಿಸುತ್ತೇನೆಂದು ಶಾಸಕ ದೊಡ್ಡನಗೌಡರು ತಿಳಿಸಿದರು. ಈ ವೇಳೆ ಕೆಇಬಿ ಮೇಲಾಧಿಕಾರಿಗಳು ಗೈರ್ ಇರುವದರಿಂದ ಶಾಸಕರು ಗರಂಗೊಂಡು ಅವರ ಮೇಲೆ ಕ್ರಮ ಜರುಗಿಸುವಂತೆ ಮೇಲಾಧಿಕಾರಿಗಳಿಗೆ ಸೂಚಿಸಿದರು. ಇದೆ ವೇಳೆ ಪುರಸಭೆ ಸದಸ್ಯರಾ ಮಹೇಶ ಬೆಳ್ಳಿಹಾಳ, ಶಾಂತಪ್ಪ ಹೊಸಮನಿ, ಮುಖಂಡರಾದ ಮಂಜು ಆಲೂರ, ಮಹಾಂತೇಶ ಚಿತ್ತವಾಡಗಿ, ಮಲ್ಲು ನಾಗರಾಳ, ಸುಭಾಸ ಮಜುಕ್ಕಣ್ಣವರ,ಶಿವು    ಬಾವಿಕಟ್ಟಿ ಮತ್ತು ಇಲಾಖಾ ಕೆಳಮಟ್ಟದ ಅಧಿಕಾರಿಗಳು ಇದ್ದರು.