ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಚಾಲನೆ
MLA DM Aihole launches road improvement work
ರಾಯಬಾಗ 14 : ಮತಕ್ಷೇತ್ರದಲ್ಲಿರುವ ತೋಟದ ರಸ್ತೆ ಸುಧಾರಣೆ ಹಾಗೂ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದರ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಪಂಚಾಯತ ರಾಜ್ ಇಲಾಖೆಯಿಂದ ವಿವಿಧ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚಿಂಚಲಿ ಮುಖ್ಯ ರಸ್ತೆಯಿಂದ ಮಾಂಗ ಮನೆಯ ವರೆಗೆ ಹಾಗೂ ಡೋರ ಜನಾಂಗದ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ, 30 ಲಕ್ಷ ರೂ.ವೆಚ್ಚದಲ್ಲಿ ಉಪ್ಪಾರ ಕೋಡಿ ರಸ್ತೆಯಿಂದ ಚಿಂಚಲಿ-ಬೆಕ್ಕೇರಿ ಕೂಡು ರಸ್ತೆ ಸುಧಾರಣೆ, 5 ಲಕ್ಷ ರೂ.ವೆಚ್ಚದಲ್ಲಿ ಧರಣ ರಸ್ತೆಯಿಂದ ಹಳಚಪಟ್ಟಿ ರಸ್ತೆ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರಸ್ತೆ ಸುಧಾರಣೆಯಿಂದ ಸಾರಿಗೆ ಸಂಚಾರ ಸುಗಮವಾಗುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುವುದು ಎಂದರು.
ಸದಾಶಿವ ಘೋರೆ್ಡ, ಅಂಕುಶ ಜಾಧವ, ಅನೀಲ ಮೈಶಾಳೆ, ಕಲ್ಲಪ್ಪ ಮೈಶಾಳೆ, ಪ್ರಭು ಮೈಶಾಳೆ, ಸಂಜು ಮೈಶಾಳೆ, ಕದ್ದು ಜಾಧವ, ಪೊಪಟ ಜಾಧವ, ಗಂಗಪ್ಪ ಪುಜೇರಿ, ರಾಮು ಪುಜೇರಿ, ಲಕ್ಷ್ಮಣ ಕೋಳಿ, ರಾಮಾ ಕೋಳಿ, ಗಣಪತಿ ಕೋಳಿ, ಪ್ರಕಾಶ ಜಾಧವ, ದೀಪಕ ಜಾಧವ, ಅಜಿತ ಜಾಧವ, ಲಕ್ಷ್ಮಣ ತುಳಸಗೇರಿ, ರಾವಸಾಬ ಜಾಧವ, ಮಲ್ಲು ಪಾಟೀಲ, ಮಹಾವೀರ ಮಾಂಜರೆ, ರಾಜು ಪೋಳ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 