ಕೃತಿಯನ್ನು ಶಾಸಕ ಅಶೋಕ ಮನಗುಳಿ ಬಿಡುಗಡ

ಕೃತಿಯನ್ನು ಶಾಸಕ ಅಶೋಕ ಮನಗುಳಿ ಬಿಡುಗಡ MLA Ashok Managuli released the book

ಲೋಕದರ್ಶನ ವರದಿ 

ಸಿಂದಗಿ 05 : ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಸಾಹಿತ್ಯ ಕ್ಷೀಣಿಸುತ್ತಿದ್ದೆ. ಸಾಹಿತ್ಯ ಕ್ಷೇತ್ರ ಸಮಾಜದ ಬದಲಾವಣೆ ಸೇರಿದಂತೆ ಅನೇಕ ಕ್ಷೇತ್ರಗಳ ಬದಲಾವಣೆಗೆ ಕಾರಣವಾಗುತ್ತಿವೆ. ಕರ್ನಾಟಕದ ಸಾಹಿತ್ಯ ಇಡಿ ಜಗತ್ತಿನ ತುಂಬಾ ಪಸರಿಸುತ್ತಿದೆ ಅದಕ್ಕೆಲ್ಲ ಕಾರಣ ಕನ್ನಡ ಭಾಷೆ, ಸಾಹಿತ್ಯ, ಕವಿಗಳು, ಸಂಶೋಧಕರು ಹಾಗೂ ಯುವ ಬರಹಗಾರರ ಸೃಜನಾತ್ಮಕತೆಯಿಂದ ಕೂಡಿದ ಬರಹಗಳೇ ನಮ್ಮ ನಾಡನ್ನು ಬೆಳಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್‌.ಜಿ.ಪದವಿ ಪೂರ್ವ ಕಾಲೇಜಿನಲ್ಲಿ  ನಡೆದ  ವರ್ಷಾ ಪ್ರಕಾಶನ ಕನ್ನೋಳ್ಳಿಯ ಯುವ ಬರಹಗಾರ ಆಕಾಶ ದೊಡ್ಡಪ್ಪರಾಗಿ ಅವರು ರಚಿಸಿದ ಅಂತರಂಗದ ಕರೆಯೋಲೆ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶಿಕ್ಷಣದಿಮದ ಮಾತ್ರ ನಿಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಅದರ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳ ಜ್ಞಾನವನ್ನು ಅರಿಯುವುದು ಇಂದು ಅತ್ಯಂತ ಅವಶ್ಯವಾಗಿದೆ ಎಂದರು.

ಈ ವೇಳೆ ಕೃತಿಯನ್ನು ಯುವ ಬರಹಗಾರ ಮಲ್ಲಿಕಾರ್ಜುನ ಧರಿ ಅವರು ಅವಲೋಕನ ಮಾಡಿ ಮಾತನಾಡಿ, ಈ ಕೃತಿಯಲ್ಲಿ ಸಾಮಾಜಿಕ, ಜಾನಪದ, ಕೃಷಿ, ಬದುಕು ಸೇರಿದಂತೆ ಅನೇಕ ಸ್ಥರಗಳ ಸುಮಾರು 65 ಕವನಗಳನ್ನು ಒಳಗೊಂಡ ಕವನ ಸಂಕಲನವಾಗಿದೆ. ಇಂದಿನ ಮಕ್ಕಳು ಜಾನಪದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಜಾನಪದ ಲೋಕ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.

ಈ ವೇಳೆ ಪ್ರಾಚಾರ್ಯ, ಎ.ಆರ್‌.ಹೆಗ್ಗನದೊಡ್ಡಿ, ಡಾ.ಆರ್‌.ಎಮ್‌.ಪಾಟೀಲ ಯುವ ಸಾಹಿತಿ ಆಕಾಶ ರಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಚಂದ್ರಯ್ಯ ಸ್ಥಾವರಮಠ, ಸಾಹಿತಿ ಕೆ.ಎಚ್‌.ಸೋಮಾಪೂರ,  ರಾಚು ಕೊಪ್ಪಾ, ಸಾಹೇಬಗೌಡ ಬಿರಾದಾರ, ಕಾಸಪ್ಪಗೌಡ ಜಲಕತ್ತಿ, ಈರಣ್ಣಗೌಡ ಪಾಟೀಲ, ಮಹೇಶ ಯಾಳಗಿ, ಸಿದ್ದು ಪತ್ತಾರ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.  ಕಾರ್ಯಕ್ರಮದಲ್ಲಿ ಎಚ್‌.ಜಿ.ಪದವಿ ಪೂರ್ವಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಕನ್ನೋಳ್ಳಿ ಗ್ರಾಮದ ಹಿರಿಯರು ಭಾಗವಹಿಸಿದ್ದರು.