ಕಂಪ್ಲಿ

ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಎಂ.ಬಾಬುಸಾಬ್, ಆಯ್ಕೆ

ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಎಂ.ಬಾಬುಸಾಬ್, ಆಯ್ಕೆ

ಲೋಕದರ್ಶನ ವರದಿ

ಕಂಪ್ಲಿ 19:  19ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸಂಘಟನಾ ಸಭೆಯಲ್ಲಿ ನೂತನ ಕಂಪ್ಲಿ ಕೈಗಾರಿಕಾ ಸಂಘ ರಚಿಸುವ ಜೊತೆಗೆ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಂಪ್ಲಿ ಕೈಗಾರಿಕಾ ಸಂಘದ ಗೌರವಾಧ್ಯಕ್ಷರಾಗಿ ಜಿ.ಸಿ.ನಾಗರಾಜ್, ಅಧ್ಯಕ್ಷರಾಗಿ ಎಂ.ಬಾಬುಸಾಬ್, ಉಪಾಧ್ಯಕ್ಷರಾಗಿ ಜಿ.ಶ್ರೀವಾಸ್‌ರಾವ್(ಅಂಜಯ್ಯ ಗ್ಯಾರೇಜ್) ಮತ್ತು ಅಹಮದ್ ಸಾಬ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಮೌಲಾ ಹುಸೇನ್, ಜಂಟಿ ಕಾರ್ಯದರ್ಶಿಯಾಗಿ ಟಿ..ಹೆಚ್‌.ಎಂ.ರಾಜಕುಮಾರ್, ಖಜಾಂಚಿಯಾಗಿ ಎಂ.ದಾದಾಪೀರ್, ಮಾಧ್ಯಮ ಪ್ರತಿನಿಧಿಯಾಗಿ ಎಂ.ತಬ್ರೇಜ್ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕೆ. ಮಸ್ತಾನ್, ಐ ಆಂಡ್ ಟಿ ಅಬ್ದುಲ್, ಕೆ.ಸಲೀಂ, ಚಾಂದ್ ಗ್ರೀಲ್ ವರ್ಕ್ಸ್‌, ಸಿ.ವಾಸುದೇವ, ಖಾಸಿಂ ಎಲೆಕ್ಟ್ರೀಷಿಯನ್, ಸ್ವರಾಜ್ ರಾಜಸಾಬ್, ಶಂಷುದ್ಧೀನ್(ಗಬ್ಬರ್), ಪೇಂಟರ್ ಮೋಹನ್ ಸಿಂಗ್, ಇಮ್ತಿಯಾಜ್ ಖಾನ್, ಕೆ.ಅಲಂಸಾಬ್, ಶಾಮೀದ್(ಸಿರಾಜ್), ಮೆಕಾನಿಕ್ ರಮೇಶ್ ಇವರನ್ನು ಸರ್ವಾನುತದಿಂದ ಆಯ್ಕೆಗೊಂಡರು. ನಂತರ ನೂತನ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇಮ್ತಿಯಾಜ್, ಜಕ್ರೀಯಾ, ಮೆಕಾನಿಕ್ ವೆಂಕಟೇಶ, ರಫಿಕ್, ಎ.ಮೊಹ್ಮದ್‌ಗೌಸ್ ಸೇರಿದಂತೆ ಇತರರು ಇದ್ದರು.  


ಸುದ್ದಿ ಓದಿ