ಪಚ್ಚನ ಸಾಮ್ರಾಜ್ಯದಲ್ಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್ ' ಸುಪ್ರಿಯಾನ್ವಿ ಸ್ಟುಡಿಯೋಸ್' ಮತ್ತು 'ಕೆಆರ್‌ಜಿ ಸ್ಟುಡಿಯೋಸ್' ನಿರ್ಮಾಣದ ಚಿತ್ರ ಜೂನ್ 5ರಂದು ತೆರೆಗೆ

ಪಚ್ಚನ ಸಾಮ್ರಾಜ್ಯದಲ್ಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್ ' ಸುಪ್ರಿಯಾನ್ವಿ ಸ್ಟುಡಿಯೋಸ್' ಮತ್ತು 'ಕೆಆರ್‌ಜಿ ಸ್ಟುಡಿಯೋಸ್' ನಿರ್ಮಾಣದ ಚಿತ್ರ ಜೂನ್ 5ರಂದು ತೆರೆಗೆ Love, sentiment, action in the kingdom of Pacchana, a film produced by 'Supriyanvi Studios' and 'KRG

ಲೋಕದರ್ಶನ ವರದಿ 

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ಬಹುನೀರೀಕ್ಷಿತ ಆಕ್ಷನ್‌-ಕ್ರೈಂ ಥ್ರಿಲ್ಲರ್ ಸಿನಿಮಾ 'ಮ್ಯಾಂಗೋ ಪಚ್ಚ' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಜೂನ್ 5ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಮೈಸೂರು ಹಿನ್ನೆಲೆಯ ಈ ಚಿತ್ರಕ್ಕೆ ವಿವೇಕ್ ಆಕ್ಷನ್ ಕಟ್ ಹೇಳಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೇಲರ್ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಟ್ರೇಲರ್ ಬಗ್ಗೆ ನಟ ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೇಲರ್ ನೋಡಿದರೆ ಇದೊಂದು ಸಾಮಾನ್ಯ ಯುವಕನ ಅಸಾಮಾನ್ಯ ಕತೆಯಂತೆ ತೋರುತ್ತಿದೆ. 'ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ' ಎಂಬ ಅಡಿಬರಹದೊಂದಿಗೆ ಬಿಡುಗಡೆ ಆಗಿರುವ ಈ ಟ್ರೇಲರ್ ಗಮನ ಸೆಳೆಯುತ್ತಿದೆ. ಅಂದಂಗೆ ರೀಲೀಸ್ ಆದ ನಾಲ್ಕು ದಿನಗಳಲ್ಲಿ ಈ ಟ್ರೇಲರ್‌ನ್ನು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.  

ಸಾಮಾನ್ಯ ಯುವಕ ಪ್ರಶಾಂತ್, ಗೆಳೆಯರ ಬಾಯಲ್ಲಿ ಪಚ್ಚ ಆಗಿ ಆ ನಂತರ ವ್ಯವಸ್ಥೆಯ ಹೊಡೆತಕ್ಕೆ ಸಿಲುಕಿ 'ಮ್ಯಾಂಗೊ ಪಚ್ಚ' ಆಗುವುದು ಹೇಗೆಂಬುದನ್ನು ಈ ಚಿತ್ರದ ಕಥೆ ಒಳಗೊಂಡಿದೆ. ಸಾಮಾನ್ಯ ಬಡ ಮಧ್ಯಮ ಕುಟುಂಬದ ಯುವಕ ಸಾಮ್ರಾಜ್ಯ ಕಟ್ಟುವ ಕನಸು ಕಾಣುವುದು ಹಾಗೂ ಅದರ ಈಡೇರಿಕೆಗೆ ಮಾಡುವ ಪ್ರಯತ್ನಗಳು, ಆತನ ದಾರಿಗೆ ಅಡ್ಡಾಗುವ ವ್ಯಕ್ತಿಗಳು, ಅವರನ್ನು ನಾಯಕ ಹಿಮ್ಮೆಟ್ಟಿಸುವ ಬಗೆ ಇನ್ನಿತರೆಗಳನ್ನು ಈ ಸಿನಿಮಾ ಒಳಗೊಂಡಿದೆ ಎಂಬುದನ್ನು ಟ್ರೇಲರ್ ಹೇಳುತ್ತಿದೆ. 'ಮ್ಯಾಂಗೊ ಪಚ್ಚ' ಮೈಸೂರು ಭಾಗದಲ್ಲಿ ಒಂದು ದಶಕದ ಹಿಂದೆ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೇಲರ್‌ನಲ್ಲಿ ತೋರಿಸಿರುವಂತೆ ಇದೊಂದು ಸಂಪೂರ್ಣ ಪ್ಯಾಕೇಜ್ ಆಗಿರುವ ಕಮರ್ಶಿಯಲ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಲವ್ ಸ್ಟೋರಿ, ಹಾಸ್ಯ ಎಲ್ಲವೂ ಇದೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ ಇದು ಸುದೀಪ್ ಪುತ್ರಿ ಸಾನ್ವಿ ಸುದೀಪ್ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಆಗಿದೆ. ತಮ್ಮ ತಾಯಿ ಪ್ರಿಯಾ ಅವರೊಟ್ಟಿಗೆ ಸೇರಿ ಈ ಸಿನಿಮಾದ ಸಹ ನಿರ್ಮಾಣ ಮಾಡುತ್ತಿದ್ದಾರೆ ಅವರು. 

'ಸುಪ್ರಿಯಾನ್ವಿ ಸ್ಟುಡಿಯೋಸ್' ಮತ್ತು 'ಕೆಆರ್‌ಜಿ ಸ್ಟುಡಿಯೋಸ್' ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಚಿತ್ರದ ನಾಯಕನಾಗಿ ಸಂಚಿತ್ ಸಂಜೀವ್ ನಟಿಸಿದ್ದು, ನಾಯಕಿಯಾಗಿ ಕಾಜಲ್ ಕುಂದರ್ ಬಣ್ಣ ಹಚ್ಚಿದ್ದಾರೆ. ನಾಯಕನ ತಂದೆಯ ಪಾತ್ರದಲ್ಲಿ ಉಗ್ರಂ ಮಂಜು ನಟಿಸಿದ್ದಾರೆ. ವಿಲನ್ ಆಗಿ ನಟ ಮಯೂರ್ ಪಟೇಲ್ ನಟಿಸಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.