ಹೂವಿನ ಹಡಗಲಿ

ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ

ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ

ಲೋಕದರ್ಶನ ವರದಿ 

ಹೂವಿನಹಡಗಲಿ   22:  ಪಟ್ಟಣ ಸೇರಿದಂತೆ ತಾಲ್ಲೂಕಿನ ನಾನಾ ಕಡೆಗಳಲ್ಲಿ ಮಂಗಳವಾರ ಸಂಜೆ ಗುಡುಗು, ಸಿಡಿಲು, ಗಾಳಿ, ಮಳೆ ಸುರಿದಿದ್ದು, ನದಿ ತೀರದ ಭತ್ತ,ಬಾಳೆ ಬೆಳೆಗಳಿಗೆ ಹಾನಿಯಾಗಿ ಲಕ್ಷಾಂತರ ನಷ್ಟವಾಗಿದೆ.  ಪಟ್ಟಣದ 10ನೇ ವಾರ್ಡ್‌ ಸೊಪ್ಪಿನ ಕಾಳಮ್ಮ ಬಡಾವಣೆಯ ಜನವಸತಿಗೆ ಹೊಂದಿಕೊಂಡಿರುವ ಹುಚ್ಚಿ ಉಮಾಪತಿ ಅವರ ತೋಟದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಅದು ಹೊತ್ತಿ ಉರಿಯಿತು. ಸಂಜೆ ಗುಡುಗು, ಮಿಂಚು, ಸಿಡಿಲ ಆರ್ಭಟದೊಂದಿಗೆ ಕೆಲಕಾಲ ತುಂತುರು ಮಳೆ ಸುರಿಯಿತು. ಈ ವೇಳೆ ತೆಂಗಿನ ಮರಕ್ಕೆ ಸಿಡಿಲು ಎರಗಿ ಬೆಂಕಿ ಹೊತ್ತಿಕೊಂಡಿತು. 30 ನಿಮಿಷ ಕಾಲ ಮರ ಹೊತ್ತಿ ಉರಿಯಿತು. ಕೆಲವರು ಆ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರು.ಈ ವೇಳೆ ತುಂತುರು ಮಳೆ ಸುರಿದಿದ್ದರಿಂದ ಮರದಲ್ಲಿನ ಬೆಂಕಿ ನಂದಿತು. ಸಿಡಿಲ ಸದ್ದಿಗೆ ಬಡಾವಣೆ ನಿವಾಸಿಗಳು ಬೆಚ್ಚಿ ಬಿದ್ದರು.ಸೋಮವಾರ ರಾತ್ರಿಯೂ ಹರಪನಹಳ್ಳಿ ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿದಿತ್ತು. ತಾಲ್ಲೂಕಿನ ಹಲುವಾಗಲು ಗ್ರಾಮದ ಕೆಇಬಿ ಕಚೇರಿ ಬಳಿಯ ಬಡಾವಣೆಯಲ್ಲಿ ಹಾವೇರಿ ವಿರೂಪಾಕ್ಷಪ್ಪ ಎಂಬುವವರ ಮನೆಯ ತಗಡಿನ ಚಾವಣಿ ಗಾಳಿಗೆ ಹಾರಿ ಮುರಿದು ಬಿದ್ದಿದೆ. 


ಸುದ್ದಿ ಓದಿ