ಒಗ್ಗಟ್ಟಿನಿಂದ ಬಾಳಿದರೆ ಬದುಕು ಸುಂದರ: ದುಂಡಯ್ಯಸ್ವಾಮಿ

ಬೈಲಹೊಂಗಲ 21: ಮನುಷ್ಯನ ಮನಸ್ಸನ್ನು ಶುದ್ಧಗೊಳಿಸಿಕೊಳ್ಳಲು ಜಾತ್ರೆ- ಉತ್ಸವದಂತಹ ಚಟುವಟಿಕೆಗಳು ಸಹಕಾರಿಯಾಗಿದ್ದು ಒಗ್ಗಟ್ಟಿನಿಂದ ಬಾಳಿದರೆ ಬದುಕು ಸುಂದರವಾಗಲಿದೆ ಎಂದು ರಾಜಗುರು ಕೆಳದಿ ಸಂಸ್ಥಾನದ ಶಾಖಾಮಠದ ದುಂಡಯ್ಯಸ್ವಾಮಿ ಹಿರೇಮಠ ಹೇಳಿದರು.  

ಅವರು ತಾಲೂಕಿನ ಯರಡಾಲ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಹೋಮ, ಹವನ, ವಿಶೇಷ ಪೂಜೆ, ಪ್ರಾರ್ಥನೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪರಿಸರದಲ್ಲಿ ಎಲ್ಲವೂ ಸೂಸುತ್ರವಾಗಿ ನಡೆಯಬೇಕೆಂದರೆ ಧಾರ್ಮಿಕ, ಅಧ್ಯಾತ್ಮಿಕದಂತಹ ಶಕ್ತಿಯು ಅತ್ಯವಶ್ಯವಾಗಿದೆ. ಜೀವನದಲ್ಲಿ ಪರೋಪಕಾರ ಭಾವನೆಗಳನ್ನು ಹೊಂದಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದರು.  

ಗ್ರಾಮದೇವಿ ಜಾತ್ರಾ ಮಹೋತ್ಸವ ಕಮೀಟಿಯ ಅಧ್ಯಕ್ಷ ಸಿ.ಆರ್‌.ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯರಡಾಲ ಗ್ರಾಮವು ಚಿಕ್ಕವಾಗಿದ್ದರೂ ಸಹ ಅಧ್ಯಾತ್ಮ, ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ. ಸುಮಾರು ವರ್ಷಗಳ ನಂತರ ಗ್ರಾಮಸ್ಥರು ಸೇರಿ ಗ್ರಾಮದೇವಿ ಜಾತ್ರೆಯನ್ನು ಸಡಗರ- ಸಂಭ್ರಮದಿಂದ ಆಚರಿಸುತ್ತಿದ್ದೇವೆ. ನಿತ್ಯ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.  

ಯಮಕನಮರಡಿಯ ಚೇತನ ಗುರೂಜಿ, ಗುರುದೇವ ಗುರೂಜಿ ಅವರು ಬ್ರಾಹ್ಮಿ ಮೂಹೂರ್ತದಲ್ಲಿ ಹೋಮ, ಹವನದ ವಿಧಿ-ವಿಧಾನಗಳನ್ನು ನೆರವೇರಿಸಿದರು. ಚಂದ್ರಗೌಡಾ ಪಾಟೀಲ ದಂಪತಿಗಳಿಂದ ವಿಶೇಷ ಪೂಜೆ ಜರುಗಿತು. ಗೀತಾ ಪಾಟೀಲ, ಗ್ರಾ.ಪಂ. ಉಪಾಧ್ಯಕ್ಷ ಬಸನಗೌಡಾ ಪಾಟೀಲ, ನಿವೃತ ಶಿಕ್ಷಕ ವಿಜಯ ಬನಶೆಟ್ಟಿ, ಹಿರಿಯರಾದ ಮಲ್ಲಪ್ಪ ರಾಜಗೋಳಿ, ರಾಜು ಕುಲಕರ್ಣಿ, ಯುವ ಧುರೀಣ ಬಸನಗೌಡಾ ಪಾಟೀಲ, ದುಂಡಯ್ಯ ಪೂಜೇರ, ಶಂಕರ ಮುರಗೋಡ, ಮಲ್ಲನಗೌಡಾ ಪಾಟೀಲ, ನಾಗಪ್ಪ ಬೈಲಪ್ಪನವರ, ಶಿವಲಿಂಗಪ್ಪ ಇಂಗಳಗಿ, ನಿವೃತ್ತ ಶಿಕ್ಷಕ ಮಡಿವಾಳಯ್ಯ ಪೂಜೇರ, ರಾಜು ಸಂಗೊಳ್ಳಿ, ಗ್ರಾ.ಪಂ. ಮಾಜಿ ಸದಸ್ಯ ನಿಂಗಪ್ಪ ರಾಜಗೋಳಿ, ಶಿವರಾಜ ಸಂಗೊಳ್ಳಿ, ನಾಗನಗೌಡ ಮುದಿನಾಯ್ಕರ, ಅನಿಲ ಪಾಟೀಲ, ಶ್ರೀಶೈಲಗೌಡಾ ಪಾಟೀಲ, ಈರಣ್ಣ ಇಂಗಳಗಿ, ರವಿ ಕಮತಗಿ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ರೂಪಾ ಬನಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.  

ಸುಮಾರು 150 ಕ್ಕೂ ಹೆಚ್ಚಿನ ದಂಪತಿಗಳು ವಿಶೇಷ ಪೂಜೆ, ಹೋಮ, ಹವನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾಪ್ರಸಾದ ಏರಿ​‍್ಡಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.