ಮಾನ್ಯ ಮುಖ್ಯಮಂತ್ರಿಗಳೇ ಬಡವರಿಗೆ ಸೂರು ನೀಡವಂತೆ ಪತ್ರ ಚಳುವಳಿ

Letter campaign to the Honorable Chief Minister to provide shelter to the poor

ಬ್ಯಾಡಗಿ 20 :  ಪಟ್ಟಣದ ಪುರಸಭೆ ವತಿಯಿಂದ ಸುಮಾರು ಎಂಟು ವರ್ಷಗಳಿಂದ ಇಲ್ಲಿಯವರೆಗೆ ಯಾವುದೇ ತರಹದ ಆಶ್ರಯ ಮನೆಗಳನ್ನು ಹಂಚಿಕೆಯಾಗಿಲ್ಲ ಎಂದು ಆಶ್ರಯ ಮನೆ ಸಮಿತಿಯವರು ಇಂದು ಪತ್ರ ಚಳುವಳಿಯನ್ನು ಮಾಡಿದರು ಪಟ್ಟಣದ ಅಂಚೆ ಕಚೇರಿಯ ಮುಂದೆ ಸುಮಾರು ನೂರಕ್ಕಿಂತ ಹೆಚ್ಚು ಬಡ ವರ್ಗದವರು ಚಳುವಳಿಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಆಶ್ರಯ ಸಮಿತಿಯ ಅಧ್ಯಕ್ಷರಾದ ಸುರೇಶ್ ಚಲವಾದಿ ಮಾತನಾಡಿ ಸುಮಾರು 500 ಬಡ ವರ್ಗದವರಿಂದ ತಲಾ ರೂ.30,000 ದುಡ್ಡನ್ನು ಪುರಸಭೆ ಕಟ್ಟಿಸಿಕೊಂಡು ಇಲ್ಲಿಯವರೆಗೂ ಯಾವುದೇ ಸೂರನ್ನು ಕೊಟ್ಟಿರುವುದಿಲ್ಲ ಕಳೆದ ಬಾರಿ ಪುರಸಭೆಯ ಮುಂದೆ ನಾವು ಅಹೋರಾತ್ರಿ ಧರಣಿಯನ್ನು ನಡೆಸಿದರು ಮಾನ್ಯ ಎಸಿ ಅವರು ಹಾಗೂ ಪುರಸಭೆಯ ಆಶ್ರಯ ಸಮಿತಿ ಅಧ್ಯಕ್ಷರು ಮಾರ್ಚ್‌ ತಿಂಗಳಲ್ಲಿ ಎಲ್ಲರಿಗೆ ಸೂರು ಮನೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದರು ಆದರೆ ಮಾರ್ಚ್‌ ತಿಂಗಳು ಕಳೆದು ತಿರುಗಿ ಮೇ ತಿಂಗಳು ಕಳೆಯುತ್ತಿದೆ ಆದರೂ ಸಹ ಬಡಜವರರಿಗೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡಿಲ್ಲ ಆದ ಕಾರಣ ಎಲ್ಲಾ  ಬಡವರ್ಗದವರು ಇಂದು ಮುಖ್ಯಮಂತ್ರಿಗಳಿಗೆ ಸೂರು ಕೊಡಿ ಎಂದು ಪತ್ರ ಚಳುವಳಿಯನ್ನು ಮಾಡಿದರು.ಆಶ್ರಯ ಸಮಿತಿ ಹೋರಾಟದ ಪಾಂಡುರಂಗ ಸುತಾರ ಮಾತನಾಡಿ 2017ರಲ್ಲಿ 10 ಎಕರೆ ಜಾಗವನ್ನು ಬಡವರ ನಿವೇಶನ ಹಂಚಿಕೆ ಮಾಡಲು ತೆಗೆದುಕೊಳ್ಳಲಾಯಿತು ಆದರೆ ಇಲ್ಲಿಯವರೆಗೂ ಯಾವ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ ಹಲವಾರು ಬಾರಿ ಸುಮಾರು ವರ್ಷಗಳಿಂದ ಆಶ್ರಯ ನಿವೇಶನಗಳಿಗೋಸ್ಕರ ಪ್ರತಿಭಟನೆ ಧರಣಿ ಅನೇಕ ತರಹದ ಚಳುವಳಿಗಳನ್ನು ಸಹ ಮಾಡಲಾಯಿತು ಆದರೆ ಇಲ್ಲಿ ಇರುವರೆಗೂ ತಾಲೂಕಿನ ಜಿಲ್ಲೆಯ ಯಾವ ಅಧಿಕಾರಿಗಳಾಗಲಿ, ಬಡವರಿಗೆ ಬಡ ವರ್ಗದವರಿಗೆ ಸೂರು ಕೊಡಿಸುವ ಕೆಲಸ ಮಾಡಲಿಲ್ಲ ಇದ್ದು ಇಲ್ಲದಂತಾದ ಅಧಿಕಾರಿಗಳು ಕಳೆದ ಬಾರಿ ಮಾರ್ಚ್‌ ತಿಂಗಳಲ್ಲಿ ಬಡವರಿಗೆ ನಿವೇಶನ ಹಂಚಲಾಗುತ್ತದೆ ಎಂದು ಹೇಳಿದ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ತರಹದ ಮನೆಗಳು ಹಂಚಿಕೆಯಾಗಿಲ್ಲ. 

ವಸತಿ ಸಚಿವರಾದ ಜಮೀರ್ ಅಹ್ಮದ್ ರವರು ಇತ್ತ ಗಮನಹರಿಸಿ ಬಡವರಿಗೆ ಸೂರು ಕೊಡಿಸುವ ಕೆಲಸ ಮಾಡಬೇಕು ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಚಳುವಳಿಯನ್ನು ಮಾಡುವ ಮೂಲಕ ಇತ್ತ ಕಡೆ ಗಮನಹರಿಸಬೇಕು ಎಂದು ಹೇಳಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪರೀದಾಬಿ ನಜೀಮುಲ್ಲಾ ಮಾತನಾಡಿ ಬಹಳಷ್ಟು ಬಡವರ್ಗದವರು ತಮ್ಮ ತಾಳಿ ಕಿವಿಯೋಲೆ ಇನ್ನೂ ಅನೇಕ ವಸ್ತುಗಳನ್ನು ಇಟ್ಟು ನಿವೇಶನ ತೆಗೆದು ಗೋಸ್ಕರ ಪುರಸಭೆಗೆ 30,000ಗಳನ್ನು ಕಟ್ಟಿದ್ದಾರೆ ಆದರೆ ಇಲ್ಲಿಯವರೆಗೂ ಅವರಿಗೆ ನಿವೇಶನ ದೊರೆತಿಲ್ಲ ದುಬಾರಿ ದುನಿಯಾದಲ್ಲಿ ಅತಿ ಹೆಚ್ಚು ಬಾಡಿಗೆ ತುಂಬಿ ಬದುಕುವ ಪರಿಪಾಠಲು ಬಡವರ್ಗದವರಾಗಿದೆ ಎಷ್ಟಾದರೂ ಅಧಿಕಾರಿಗಳಾಗಲಿ ಹಾಗೂ ಜನಪ್ರತಿನಿಧಿಗಳಾಗಲಿ ಬಡವರಿಗೆ ನಿವೇಶನ ಕೊಡಿಸಲಾಗುತ್ತಿಲ್ಲ ತಕ್ಷಣವೇ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಪತ್ರಕ್ಕೆ ಸ್ಪಂಧಿಸಿ ಶೀಘ್ರವೇ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಂಡುರಂಗ ಸುತಾರ.ಚಂದ್ರಶೇಖರ್ ಗದಗಕರ. ನಿಯಾಜ ಕಜ್ಜರಿ.ರೆಣುಕವ್ವಾ ಆಲಮಟ್ಟಿ.ಗೌರಮ್ಮ ಸಡಕಿನಮನೆ. ಲಕ್ಷ್ಮೀ ಗದಗಕರ. ಸುಜಾತಾ ಪೂಜಾರಿ. ಗೀತಾ ಕಲ್ಯಾಣಿ. ಸುನಿತಾ ಕಲ್ಯಾಣಿ. ರಜಿಯಾಬಾನು ಮೆಡ್ಲೇರಿ. ಹುಲಿಗೆಮ್ಮಾ ವಡ್ಡರ. ಮಂಗಳಾ ಮಡಿವಾಳರ ಹಾಗೂ ಮಹಿಳೆಯರು ನೆರೆದಿದ್ದರು.