ಮಕ್ಕಳಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಪಾಲಕರು ಮುಂದಾಗಲಿ

ಕಂಪ್ಲಿ 26 ಪಾಲಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣ ನೀಡಿ ಸಮಾಜದಲ್ಲಿ ಶಿಕ್ಷಣಕ್ಕೆ ಉನ್ನತ ಸ್ಥಾನವಿದೆ ಮಕ್ಕಳಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಪಾಲಕರು ಮುಂದಾಗಬೇಕು ಎಂದು ಇಲ್ಲಿನ ಪ್ರಭುಸ್ವಾಮಿಗಳ ಕಲ್ಮಠ ಪ್ರೌಢಶಾಲೆಯ ಮಾಜಿ ಕಾರ್ಯದರ್ಶಿ ಪಿ.ಎಂ.ಮಲ್ಲಿಕಾರ್ಜುನಸ್ವಾಮಿ ಹೇಳಿದರು. 

ಇಲ್ಲಿನ ಕಲ್ಮಠದ ಆವರಣದಲ್ಲಿ 1994-95ನೇ ಸಾಲಿನ 10ನೇತರಗತಿ ಹಳೆ ವಿದ್ಯಾರ್ಥಿಗಳ ಬಳಗ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕಲಿಯುವ ಮೂಲಕ ಉನ್ನತ ಹುದ್ದೆಯಲ್ಲಿದ್ದಾರೆ ಬಹಳ ಸಂತೋಷವಾಗುತ್ತದೆ. ಶಾಲೆ ಅವಧಿಯಲ್ಲಿ ಕಲಿತ ಶಿಸ್ತು ಮತ್ತು ಆದರ್ಶಗಳನ್ನು ನಿತ್ಯ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಕಲಿತ ಶಾಲೆ, ಕಲಿಸಿದ ಗುರುಗಳನ್ನು ಮರೆಯಬಾರದು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು ಎಂದರು.  

ಕಲ್ಮಠದ ಅಭಿನವ ಪ್ರಭುಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿದ್ದರು. ಶಿಕ್ಷಕರಾದ ಎಚ್‌.ಎಂ.ಗೌರಮ್ಮ, ಜೆ.ಬಸವರಾಜ, ಶರಣಪ್ಪ ಸಿಂಗಾಡಿ, ಜಿತೇಂದ್ರ, ಗುರುಬಸಪ್ಪ ಪಟ್ಟಣಶೆಟ್ಟಿ, ಡಿ.ಎಂ.ಶಶಿಧರ, ಎಂ.ಎಸ್‌.ಮಂಜುನಾಥ, ಬಿ.ಎಂ.ಸೋಮನಾಥ, ವಿ.ಕೃಷ್ಣಪ್ಪ, ಎಸ್‌.ಎಂ.ಹಂಪಯ್ಯ ಇವರನ್ನು ಗೌರವಿಸಿದ ನಂತರ ಮಾತನಾಡಿದರು. ನಿಧನಹೊಂದಿದ ಶಿಕ್ಷಕರಾದ ನಾಗನಗೌಡ್ರು, ನೂರ್‌ಅಹ್ಮದ್, ಪ್ರಕಾಶ್ ಶಿಕ್ಷಕರಿಗೆ ಹಾಗೂ ಹಳೆವಿದ್ಯಾರ್ಥಿಗಳಿಗೆ ಮೌನ ಸಲ್ಲಿಸಿದರು. ಹಳೆ ವಿದ್ಯಾರ್ಥಿಗಳಾದ ಜಯಚಂದ್ರಿಕಾ, ಟಿ.ಎಂ.ಮಂಗಳಗೌರಿ, ಬಸಮ್ಮ, ಸಪ್ಪರದ ರಾಘವೇಂದ್ರ, ಎನ್‌.ಎಂ.ಅಶೋಕ, ರಾಜಶೇಖರ್, ಶರಣಪ್ಪ ಸಜ್ಜನರ, ಡಾ.ಬಿ.ಸುನೀಲ್, ಎಚ್‌.ಲೋಕೇಶ್ ಸೇರಿ ನಾನಾ ಕಡೆಗಳಿಂದ ಆಗಮಿಸಿದ ಹಳೆ ವಿದ್ಯಾರ್ಥಿಗಳಿದ್ದರು.