ಅಳಿವಿನಂಚಿನಲ್ಲಿರುವ ಗರಡಿ ಕಲೆಯನ್ನು ರಕ್ಷಿಸಲು ಸರ್ಕಾರ ಮುಂದಾಗಲಿ: ಅಧ್ಯಕ್ಷ ಯು. ಹನುಮೇಶ್

ಕಂಪ್ಲಿ 25:  ಗ್ರಾಮೀಣ ಭಾಗದಲ್ಲಿ ಸಹ ಗರಡಿ ಕಲೆ ಉಳಿಸಲು ಯುವ ಪೀಳಿಗೆ ಮುಂದಾಗಬೇಕು ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಯುವ ಸೈನ) ರಾಜ್ಯ ಅಧ್ಯಕ್ಷ ಯು. ಹನುಮೇಶ್ ಹೇಳಿದರು.  

ಇಲ್ಲಿನ ಷಾ.ಮಿಯಾಚಂದ್ ಹೈಸ್ಕೂಲ್ ಆವರಣಲ್ಲಿ ಇಲ್ಲಿನ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ತಾಲೂಕು ಘಟಕದಿಂದ ಶ್ರೀಪೇಟೆ ಬಸವೇಶ್ವರ ನೀಲಮ್ಮ ಜೋಡಿ ರಥೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಮುಕ್ತ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಗರಡಿ ಕಲೆ ಅಳಿವಿನಂಚಿನಲ್ಲಿದ್ದು ರಕ್ಷಿಸಲು ಸರ್ಕಾರ ಮುಂದಾಗಲಿಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಪ್ರಗತಿಪರ ಸಂಘಟನೆಗಳು ಶ್ರಮಿಸಬೇಕಿದೆ ಗರಡಿ ಕಲೆ ಗಂಡುಮೆಟ್ಟಿನ ಕಲೆಯಾಗಿದ್ದು ಪೋಷಿಸುವಲ್ಲಿ ಸರ್ಕಾರ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.  

ನಮ್ಮ ಕರವೇ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ, ಜಿಲ್ಲಾಧ್ಯಕ್ಷ ಮಾರೆಪ್ಪ, ಉತ್ತರ ಕರ್ನಾಟಕದ ಅಧ್ಯಕ್ಷ ದುರುಗೇಶ್ ಉಪ್ಪಾರ, ಸಂಚಾಲಕ ನೀಲಕಂಠ, ಜಿಲ್ಲಾ ಕ್ರೀಡಾ ಅಧ್ಯಕ್ಷ, ಎ.ದುರುಗೇಶ್, ತಾಲೂಕು ಅಧ್ಯಕ್ಷ ಸಿ.ರಾಜಶೇಖರ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ.ನಾರಾಯಣಪ್ಪ, ಕರವೇ ಸದಸ್ಯರಾದ ಶ್ರೀನಿವಾಸ್, ಗೋಪಿನಾಥ, ವೀರಭದ್ರ, ಮಾರುತಿ, ಉಸ್ತಾದ್‌ಗಳಾದ ಜಿ.ಕೊಟ್ರಯ್ಯಸ್ವಾಮಿ ವೀರೇಶ್, ಶಬ್ಬೀರ್, ಮಾರುತಿ ಬೊವೇರು ಚಂದ್ರಶೇಖರ ಇತರರಿದ್ದರು.  

ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ 30ಸ್ಪರ್ಧಿಗಳು ಮುಕ್ತ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.