ಯರಗಟ್ಟಿ, 07 : ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಒತ್ತು ಕೊಡಿ. ಇಡೀ ನಮ್ಮ ರಾಜ್ಯದಲ್ಲಿ ಕೆಎಂಎಫ್ ಕರ್ನಾಟಕ ರಾಜ್ಯದಲ್ಲಿ ಒಂದು ಸಶಕ್ತ, ಸ್ವಾವಲಂಬಿ ಮತ್ತು ಸಂಪೂರ್ಣವಾದ ಸಹಕಾರಿ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ನಮ್ಮ ಹಾಲು ಉತ್ಪಾದಕರ ಜೀವನದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮೃದ್ಧಿಯನ್ನು ಉಂಟುಮಾಡುವುದೇ ಕರ್ನಾಟಕ ಹಾಲು ಘನೋದ್ದೇಶವಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ಧಿ ಹೊಂದಲಿ. ಬೆಮೂಲ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಯವರ ನೇತೃತ್ವದಲ್ಲಿ 13.26 ಕೋಟಿ ರೂಪಾಯಿಗಳಷ್ಟು ಲಾಭವಾಗಿದ್ದು ಎಂದು ಬೇಮೂಲ ನಿರ್ದೇಶಕ ಶಂಕರ ಇಟ್ನಾಳ ಮಾತನಾಡಿದರು.
ಸಮೀಪದ ಕಡಬಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘವನ್ನು ನೂತನ ಶಾಖೆಯನ್ನು ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿಗಳಾದ ರವಿ ಎಂ. ತಳವಾರ, ಬಸವರಾಜ ಕುಳ್ಳೂರ, ಛಾಯಪ್ಪ ಹುಂಡೇಕಾರ, ಕಿಟ್ಟು ಹುಂಡೆಕಾರ, ಕೆಎಂಎಫ್ ಅಧ್ಯಕ್ಷ ಸಂಜು ಹುಂಡೇಕಾರ, ಉಪಾಧ್ಯಕ್ಷರು ಸಂಗೀತಾ ಹುಂಡೆಕಾರ, ಸಿದ್ದಪ್ಪ ಮಾಳಕ್ಕನ್ನವರ, ಮುಗುಟಸಾಬ ಮುಘಟಖಾನ, ಸೈದು ಸನದಿ, ಶ್ರೀಧರ ಪುಂಗನೂರ, ನೇಮಿನಾಥ ಇಂಡಿ, ಶಂಕರ ಬಡಿಗೇರ, ಮಹಾದೇವ ವನ್ನೂರ, ಮುಗಳಿಹಾಳ ಕೆಎಂಎಫ್ ನಿರ್ದೇಶಕರಾದ ದುರಗಪ್ಪ ದಳವಾಯಿ ಹಾಗೂ ಗ್ರಾಮದ ಹಿರಿಯರು, ರೈತರು ಮತ್ತಿತರರು ಉಪಸ್ಥಿತರಿದ್ದರು.