ಗರ್ಭಿಣಿ ಸ್ತ್ರೀಯರು ಆರೋಗ್ಯದ ಕಾಳಜಿ ವಹಿಸಲಿ: ಸುಮಿತ್ರಾ ಡಿ.

ನಿಪ್ಪಾಣಿ 24: ಗರ್ಭಿಣಿ ಸ್ತ್ರೀಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌಷ್ಠಿಕ ಆಹಾರ ಸೇವಿಸಿ ಆಗಾಗ ವೈದ್ಯರ ಚಿಕಿತ್ಸೆ ಪಡೆದುಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಡಬೇಕೆಂದರು, ಹೆಣ್ಣು-ಗಂಡು ತಾರತಮ್ಯ ಮಾಡದೇ ಇಬ್ಬರನ್ನು ಸಮನಾಗಿ ಕಾಣಬೇಕು. ನಿಪ್ಪಾಣಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ ಡಿ. ಮಹಿಳೆಯರಿಗೆ ಕರೆ ನೀಡಿದರು. 

ಅವರು ಮಾರ್ಚ 23, 24ರಂದು ನಿಪ್ಪಾಣಿ ತಾಲೂಕಿನ ಆಯ್ದ ಐದು ಗ್ರಾಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ನಿಪ್ಪಾಣಿ ಹಾಗೂ ಗ್ರಾಮ ಪಂಚಾಯತ ಅಕ್ಕೋಳ ಗ್ರಾಮದ ಸ್ಥಳೀಯ ಸರ್ಕಾರಿ ಮರಾಠಿ ಶಾಲೆ ಆವರಣದಲ್ಲಿ ಪೋಷಣ ಅಭಿಯಾನ-2020-21 ಐ.ಇ.ಸಿ ಕಾರ್ಯಕ್ರಮ ಯೋಜನೆಯಡಿಯಲ್ಲಿ ಸಮೂದಾಯಕ್ಕೆ ಅರಿವು ಮೂಡಿಸುವ ಬೀದಿನಾಟಕ ಕಾರ್ಯಕ್ರಮವನ್ನು ತಮಟೆ ವಾದ್ಯ ನುಡಿಸಿ, ಸಸಿಗೆ ನೀರೆರೆದು ಚಾಲನೆ ನೀಡಿ ಮಾತನಾಡಿದರು. 

ಮಾತೃಪೂರ್ಣ, ಮಾತೃವಂದನ ಯೋಜನೆಯಡಿಯಲ್ಲಿ ಸರ್ಕಾರ ಯೋಜನೆ ರೂಪಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. 

ವೇದಿಕೆಯ ಮೇಲೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎ.ಎನ್. ಗೋಪಾಗೋಳ, ಅಂಗನವಾಡಿ, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ನಂತರ ನಡೆದ ರಂಗದರ್ಶನ ಕಲಾತಂಡ ಧುಳಗನವಾಡಿ ಇವರು ಅರಳಲಿ ಬಾಳೆ ಬೀದಿ ನಾಟಕದಲ್ಲಿ ಬಾಲ್ಯ ವಿವಾಹ ನಿಷೇಧ, ಹೆಣ್ಣು ಮಕ್ಕಳ ಸಾಗಾಣೆ ನಿಷೇಧ, ಭ್ರೂಣಲಿಂಗ ಪತ್ತೆ ನಿಷೇಧ, ಆಯಿ ಮಗುವಿನ ಆರೈಕೆ, ವರದಕ್ಷಿಣಿ ನಿಷೇಧ, ಪೌಷ್ಠಿಕ ಆಹಾರ ಸೇವನೆ, ಹೆಣ್ಣು ಮಕ್ಕಳ ಕಾನೂನು ಹಕ್ಕುಗಳ, ಮಕ್ಕಳಿಗೆ ಲಸಿಕೆ ಹಾಕುವುದು ಬಗ್ಗೆ ಹಾಗೂ ಸÀರ್ಕಾರದಿಂದ ಮಹಿಳೆಯರಿಗೆÉ  ಸಿಗುವ ಅಭಿವೃದ್ಧಿ ಯೋಜನೆಗಳ ಕುರಿತು ಬೀದಿನಾಟಕ ಹಾಗೂ ಜಾಗೃತಿ ಹಾಡುಗಳ ಮುಖಾಂತರ ಸಾರ್ವಜನಿಕರಿಗೆ ಮನಮುಟ್ಟುವಂತೆ ಕಲಾ ಪ್ರದರ್ಶನ ನೀಡಿ ಜಾಗೃತಿ ಮೂಡಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಸ್ವಾಗತಿಸಿ, ವಂದಿಸಿದರು.  

ಇದೇ ಕಲಾತಂಡದವರು ತಾಲೂಕಿನ ಬೇಡಕಿಹಾಳ, ಭೋಜ, ಪಟ್ಟಣಕುಡಿ, ನವಲಿಹಾಳ ಗ್ರಾಮಗಳಲ್ಲಿ ಪ್ರದರ್ಶನ ನೀಡಿ ಸಮೂದಾಯಕ್ಕೆ ಜಾಗÀೃತಿ ಮೂಡಿಸಿದರು. ಕಲಾತಂಡದಲ್ಲಿ ಭರತ ಕಲಾಚಂದ್ರ, ಮಾರುತಿ ಕಾಮಗೌಡಾ, ಪ್ರಕಾಶ ಜನಮಟ್ಟಿ, ಸಂತ್ರಾಮ ಮಯೂರ, ವಿಷ್ಣು ಹಲಗೇಕರ, ಅಪ್ಪಾಸಾಬ ಚಿಮನೆ, ಪುಂಡಲೀಕ ನಾಯಿಕ, ಸಾವಿತ್ರಿ ಹಳಕಲ್, ಸುಜಾತಾ ಮಗದುಮ್ಮ ಭಾಗವಹಿಸಿದ್ದರು.