ಮಾನವನ ಜೀವನ ಪಾರದರ್ಶಕತೆಯಿಂದ ಕೂಡಿರಲಿ: ಗುರುಶಾಂತೇಶ್ವರ ಶ್ರೀ

ಸವಣೂರ 19 : ಪ್ರತಿಯೊಬ್ಬ ಮಾನವನು ಕೂಡ ತನ್ನ ಜೀವನವನ್ನು ಪಾರದರ್ಶಕತೆ ಯಲ್ಲಿ ಸಾಗಿಸಿದಾಗ ಮಾತ್ರ ಮಾನವ ಮಹಾದೇವನಾಗಬಲ್ಲ ಎಂದು  ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಹಿರೇಮುಗದೂರ ಗ್ರಾಮದ ಗುರುಶಾಂತೇಶ್ವರ ಹಿರೇಮಠದಲ್ಲಿ ಜರಗುತ್ತಿರುವ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನದಲ್ಲಿ ಗುರುವಾರದಾನಮ್ಮದೇವಿ ತೊಟ್ಟಿಲು ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ತನ್ನಲ್ಲಿರುವ ತಾಮಸ ಗುಣಗಳಿಂದ ತನ್ನ ಬದುಕನ್ನು ಹಾಳು ಮಾಡಿಕೊಳ್ಳುವದರ ಜೊತೆಗೆ ಬೇರೆಯವರನ್ನು ಸಹ ತನ್ನ ಮಾರ್ಗಕ್ಕೆ ಸೆಳೆದು ಅವರನ್ನು ಸಹ ದಾರಿ ತಪ್ಪಿಸಲು ಮುಂದಾಗುತ್ತಾನೆ ಎಂದರು. ಯಾರ ಬದುಕು ನಡೆ ನುಡಿಗಳು ಒಂದಾಗಿರುತ್ತವೆಯೂ ಅಂತಹವರಿಗೆ ಭಗವಂತನ ಒಲುಮೆಯಾಗುತ್ತದೆ. ಅಂತಹ  ಬದುಕನ್ನು ಬದುಕಿದವರೇ ಸಂತರು ಮಹಾತ್ಮರಾಗಿ ಇಂದಿಗೂ ಜನ ಮಾನಸದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದರು.  

ಪ್ರವಚನ ಕಾರ  ಗುರುಮಹಾಂತಯ್ಯ ಶಾಸ್ತ್ರಿಗಳು ಮಾತನಾಡಿ ಸಂತ ಮಹಾತ್ಮರಿಗೆ ಮರಣವೆಂಬುದೇ ಇಲ್ಲ ಅವರು ಮತ್ತೆ ಮತ್ತೆ ಭೂಲೋಕದಲ್ಲಿ ನಾನಾ ರೂಪದಲ್ಲಿ ಅವತರಿಸುತ್ತಾ ಬರುತ್ತಿರುತ್ತಾರೆ. ಅದರಲ್ಲಿಯೂ ಹಿಂದೂ ಧರ್ಮ ಪರಂಪರೆಯಲ್ಲಿ ತೊಟ್ಟಿಲು ಕಾರ್ಯಕ್ರಮಕ್ಕೆ ತನ್ನದೇ ಯಾದ ಮಹತ್ವವನ್ನು ನಮ್ಮ ಪೂರ್ವಜರು ನೀಡುತ್ತಾ ಬಂದಿದ್ದಾರೆ. ಮಗು ಜನನವಾದ 13 ದಿನಕ್ಕೆ ನಾಮಕಾರಣ ಶಾಸ್ತ್ರವನ್ನು ಮಾಡುತ್ತಾರೆ. ಆಗಿನ ಕಾಲದಲ್ಲಿ ಮಕ್ಕಳಿಗೆ ಮಹಾತ್ಮರ ಶರಣರ ಕುಲ ದೇವರಗಳ ಮನೆಯ ಹಿರಿಯರ ಗುರುಗಳ  ಹೆಸರನ್ನು ಇಡಲಾಗುತ್ತಿತ್ತು. ಈಗ ಎಲ್ಲರೂ ಸಹ ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗಿ  ಸಿನಿಮಾ ಧಾರವಾಹಿಗಳಲ್ಲಿ ಬರುವ ಪಾತ್ರಧಾರಿಗಳ ಹೆಸರುಗಳನ್ನು ಇಟ್ಟು ಕರೆಯಲಾಗುತ್ತಿರುವುದು ವಿಷಾಧನೀಯ ಎಂದರು. ನಂತರ ಗ್ರಾಮದ ಮಹಿಳೆಯರು ಪರಸ್ಪರ ಉಡಿ ತುಂಬಿಕೊಂಡು ಶ್ರೀಗಳ ಸಮ್ಮಖದಲ್ಲಿ ಹೆಣ್ಣು ಮಗುವನ್ನು ತೊಟ್ಟಿಲಿಗೆ ಹಾಕಿ ದಾನಮ್ಮ ಎಂದು ಹೆಸರಿಟ್ಟು ತೊಟ್ಟಿಲು ತೊಗಿ ಜೋಗಳ ಪದಗಳನ್ನು ಹಾಡಿ ಸಂಭ್ರಮಿಸಿದರು. ಮಗುವಿಗೆ ಉಡುಗೆ ತೊಡುಗೆಗಳನ್ನು ನೀಡಿ ಸಮರ್ಪಿಸಿದರು. ಈ ಸಂದರ್ಭದಲ್ಲಿ  ಗಂಗಾಧರ ಕನವಳ್ಳಿ ಶಿವಲಿಂಗಪ್ಪ ಕನವಳ್ಳಿ ಬಿ.ಡಿ.ಕೋಳೂರ ಫಕ್ಕೀರಯ್ಯ ಕೆಂಬಾವಿಮಠ ಗ್ರಾ.ಪಂ.ಸದಸ್ಯ ನಿಂಗಪ್ಪ ಆರೇರ ಈಶ್ವರ ಬಡಿಗೇರ ವಿರೇಶ ಬಡಿಗೇರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಪ್ರಸಾದ ಸೇವೆ ಸಲ್ಲಿಸಿದವರನ್ನು ಶ್ರೀಗಳು ಸನ್ಮಾನಿಸಿದರು. ಗಂಗಾಧರ ಕನವಳ್ಳಿ ಬಿ.ಡಿಕೊಳೂರ ನಿರ್ವಹಿಸಿದರು.ಪೆÇೀಟೋ ಕ್ಯಾಪ್ಟನ್ಸವಣೂರ ತಾಲೂಕಿನ ಹಿರೇಮುಗದೂರ ಗುರುಶಾಂತೇಶ್ವರ ಹಿರೇಮಠದಲ್ಲಿ ಗುರುವಾರ ಗುಡ್ಡಾಪುರ ದಾನಮ್ಮದೇವಿ ತೊಟ್ಟಿಲು ಕಾರ್ಯಕ್ರಮದಲ್ಲಿ ಮಠಾಧ್ಯಕ್ಷ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.