ಪರಂಪರೆಯನ್ನು ಉಳಿಸಿ ಬೆಳೆಸೋಣನಮ್ಮ ಪರಂಪರೆಯನ್ನ ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡೋಣವೆಂದು :ಡಾ. ಎಸ್ .ಎಸ್ ಅಂಗಡಿ
Let's preserve and develop our heritage: Dr. S.S. Angadi
ಪರಂಪರೆಯನ್ನು ಉಳಿಸಿ ಬೆಳೆಸೋಣನಮ್ಮ ಪರಂಪರೆಯನ್ನ ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡೋಣವೆಂದು :ಡಾ. ಎಸ್ .ಎಸ್ ಅಂಗಡಿ
ಧಾರವಾಡ 18 : ಕೆ.ಇ.ಬೋರ್ಡಿನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ ಐಕ್ಯೂ ಎಸಿ ಮತ್ತು ಇತಿಹಾಸ ವಿಭಾಗದ ಸಹಯೋ ಯೋಗದೊಂದಿಗೆ ಇಂದು ನಡೆದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಹಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಧಾರವಾಡ ಇವರು ಮಾತನಾಡಿ, ನಮ್ಮ ವಿದ್ಯಾರ್ಥಿಗಳು ತಮ್ಮ ಸ್ಥಳಿಯ ಪ್ರದೇಶದಲ್ಲಿ ದೊರೆಯುವಂತಹ ಸ್ಮಾರಕಗಳನ್ನ ತಿಳಿದುಕೊಳ್ಳುವ ಮತ್ತು ಅವುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಅಲ್ಲದೆ, ನಮ್ಮ ಪರಂಪರೆ ಉಳಿಸಿ ಬೆಳೆಸುವ ಪ್ರಯತ್ನವನ್ನ ಎಲ್ಲರೂ ಸೇರಿ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಅವುಗಳು ದಾರೀದೀಪ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಧಾರವಾಡವು ಐತಿಹಾಸಿಕ ಮತ್ತು ಸಾಹಿತ್ಯದೃಷ್ಟಿಯಿಂದ ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದು, ಇಲ್ಲಿ ದೊರೆಯುವಂತಹ ಶಾಸನಗಳು ದೇವಾಲಯಗಳು ಮೂರ್ತಿ ಶಿಲ್ಫ ಗೋಗ್ರಹಣ ಶಿಲ್ಪ, ಕೋಟೆಗಳು, ಬಾವಿಗಳು ಇನ್ನೂ ಅನೇಕ ಸ್ಮಾರಕಗಳಿದ್ದು ಅವುಗಳ ಪರಿಚಯವನ್ನು ಮಾಡಿಕೊಳ್ಳುಬೇಕು ಎಂದು ಹೇಳುತ್ತಾ ಹಲವಾರು ಉದಾಹರಣೆಗಳನ್ನು ವಿದ್ಶಾರ್ಥಿಗಳಿಗೆ ಪ್ರಾತ್ಯಕ್ಷಿಯವಾಗಿ ಮಾಹಿತಿಗಳನ್ನ ತಿಳಿಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಎಂ.ಎ. ಸಿದ್ಧಾಂತಿರವರು ಮಾತನಾಡಿ, ಸತ್ಯ ಸಂಗತಿಗಳನ್ನು ಸಾಕ್ಷಿ ಆಧಾರಗಳ ಮೂಲಕ ಸಾಬೀತು ಪಡಿಸುವುದೇ ನಿಜವಾದ ಇತಿಹಾಸ ಅಲ್ಲದೆ ಜ್ಞಾನವಿಲ್ಲದೆ ಇತಿಹಾಸವನ್ನು ತಿರುಚಬೇಡಿ ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳ ಚರಿತ್ರೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಕೆ. ಚೆನ್ನಮ್ಮ ಹೂಗಾರ್ ಪ್ರಾರ್ಥಿಸಿದರು. ಡಾ. ಸುರೇಶ್ ಹಾನಗಲ್ ಸ್ವಾಗತಿಸಿದರು. ಅತಿಥಿಗಳ ಪರಿಚಯ ಈಶ್ವರ ರಾವ್ ಕರಾತ್, ವಂದನಾರೆ್ಣಯನ್ನು ಕೆ.ಎಸ್. ಮಡಿವಾಳರ್ ನೆರವೇರಿಸಿದರು.ಫೋಟೋ ಅಡಿಬರಹ: ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದಲ್ಲಿ ಭಿತ್ತಿಚಿತ್ರ ಅನಾವರಣಗೊಳಿಸಲಾಯಿತು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 