ಅಕಾಲಿಕ ಮಳೆ ಅವಾಂತರ ನೆಲಕ್ಕೆ ಉರುಳಿದ ನಿಂಬೆ ಗಿಡಗಳು

ಅಕಾಲಿಕ ಮಳೆ ಅವಾಂತರ ನೆಲಕ್ಕೆ ಉರುಳಿದ ನಿಂಬೆ ಗಿಡಗಳು Lemon trees toppled to the ground due to unseasonal rains

ಲೋಕದರ್ಶನ ವರದಿ  

ಇಂಡಿ  15:   ರೈತ ದೇಶದ ಬೆನ್ನೆಲುಬು" ರೈತನೇ ದೇಶದ ಆರ್ಥಿಕತೆಯ ಮೂಲ ಸ್ತಂಭ  ರೈತರು ನಿಸ್ಸಂದೇಹವಾಗಿ ನಮ್ಮ ದೇಶದ ಆರ್ಥಿಕತೆಯ ಹಾಗೂ ಅಸ್ತಿತ್ವದ ಮೂಲಾಧಾರವಾಗಿದ್ದಾರೆ. ಅವರು ಹಗಲು-ರಾತ್ರಿ ಕಷ್ಟಪಟ್ಟು ಬೆವರು ಸುರಿಸಿ ನಮಗೆಲ್ಲರಿಗೂ ಅನ್ನವನ್ನು ಒದಗಿಸುವ ಶ್ರಮಜೀವಿಗಳು, ಆದರೆ ಪ್ರಕೃತಿ ಕೂಡಾ ರೈತ ಮೇಲೆ ಮೂಡಿಸಿಕೊಂಡಾಗ ಆವಾಗ ರೈತ ಗೊಳೋ ಹೇಳ್ತಿರೋದು.ಅದರಂತೆ ನಿನ್ನೆ ಸಂಜೆ ಇಂಡಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಅಕಾಲಿಕ ಆಲಿಕಲ್ಲು ಮಳೆ ಗಾಳಿಯ ಪರಿಣಾಮವಾಗಿ ನಿಂಬೆ ಗಿಡಗಳು ದಾಳಿಂಬೆ ಪಪಾಯಿ ದ್ರಾಕ್ಷಿ  ಕಬ್ಬು ನೆಲಕ್ಕೆ ಉರುಳಿದ್ದು ರೈತರಿಗೆ ನಷ್ಟ ಸಂಭವಿಸಿದೆ.

ಗಾಳಿಯ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದು, ಇಂಡಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.ಅದರಂತೆ ಅಕಾಲಿಕ ಮಳೆ ಮತ್ತು ಬಿರುಗಾಳಿಯ ಅಬ್ಬರಕ್ಕೆ ತಾಲ್ಲೂಕಿನ ತಡವಲಗಾ ಹಂಜಗಿ ನಿಂಬಾಳ ಲಿಂಗದಹಳ್ಳಿ ಹಿರೇರೂಗಿ ಬೊಳೆಗಾಂವ ಬಬಲಾದಿ ಚವಡಿಹಾಳ ಚೋರಗಿ ಚಿಕ್ಕಬೆವನೂರ ಗ್ರಾಮದಲ್ಲಿ ಬಿರುಗಾಳಿಗೆ ನಿಂಬೆ ಮರಗಳು ಮತ್ತು ಬಾರಿ ದಾಳಿಂಬೆ ಪಪಾಯಿ ಮರಗಳು ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.ಕೇಲವು ಕಡೆಗಳಲ್ಲಿ ಪತ್ರಾಸ್ ಶೇಡ್ ಗಳು ಗಾಳಿ ತೂರಿ ಹೊದ ಘಟನೆಗಳು ಕೂಡಾ ಆಗಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಹಾನಿ ಆದ ಬಗ್ಗೆ ಸಮೀಕ್ಷೆ ಮಾಡಬೇಕು.

ಬೆಳೆ ತೆಗೆದುಕೊಂಡ ರೈತ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಮಳಸಿದ್ದಪ್ಪ ಶ್ರೀಶೈಲ ಖಸ್ಕಿ ಅವರು ನಾನು ಸುಮಾರು ಐದು ಎಕರೆ ಪ್ರದೇಶದಲ್ಲಿ ನಿಂಬೆ ಗಿಡಗಳು ಇದ್ದು, ಇನ್ನೆನು ಅವುಗಳನ್ನು ಇಳಿವಿ ಮಾರುಕಟ್ಟೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಅಕಾಲಿಕ ಮಳೆ ಬಂದು ನಮ್ಮ ಬದುಕು ಮೂರಾಬಟ್ಟೆ ಆಗಿ ಹೋಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ ಅವರು ಮಾತನಾಡಿ  ಸರ್ಕಾರ ನೊಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.ಹಾಗೂ ಅಧಿಕಾರಿಗಳು ಸರಿಯಾಗಿ ಬೆಳೆ ಹಾನಿಯಾಗಿದ್ದ ಬಗ್ಗೆ ಖುದ್ದು ರೈತರ ಹೋಲಗಳಿಗೆ ಹೋಗಿ ಸರ್ವೇ ಕಾರ್ಯ ಮಾಡಬೇಕು. ನ್ಯಾಯುತವಾಗಿ ಬೆಳೆ ಹಾನಿಯಾಗಿದ್ದ ರೈತರಿಗೆ ಪರಿಹಾರ ಬರುವ ಹಾಗೆ ನೋಡಿಕೊಳ್ಳಬೇಕು ಎಂದು  ಸರ್ಕಾರವನ್ನು ಆಗ್ರಹಿಸಿದ್ದಾರೆ.