ದಿ. 23 ರಿಂದ 27ರ ವರೆಗೆ ಪಂ. ಬ್ರಹ್ಮಣ್ಯಾಚಾರ್ಯರಿಂದ ಉಪನ್ಯಾಸ

Lecture by Pt. Brahmanyacharya from 23rd to 27th

ಬೆಳಗಾವಿ 22 :  ನಗರದ ಶ್ರೀ ವೆಂಕಟೇಶ್ವರ ಸೇವಾ ಸಂಘದವರು ವಡಗಾವಿ ವೆಂಕಟೇಶ್ವರ ದೇವಸ್ಥಾನದಲ್ಲಿ ಇದೇ ದಿ. 23 ಬುಧವಾರದಿಂದ ದಿ. 27 ರವಿವಾರದ ವರೆಗೆ ಪ್ರತಿದಿನ ಸಾ. 6 ಗಂಟೆಗೆ ಐದು ದಿನಗಳ ಕಾಲ ಭಾಗವತ ಉಪನ್ಯಾಸವನ್ನು ಹಮ್ಮಿಕೊಂಡಿದ್ದಾರೆ.   

ಉಪನ್ಯಾಸಕರಾಗಿ ಸೋಸಲೆ ವ್ಯಾಸರಾಜ ಮಠದ ಪಂ. ಬ್ರಹ್ಮಣ್ಯಾಚಾರ್ಯರು  ಆಗಮಿಸಲಿದ್ದಾರೆ. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬಳವಂತ ಬಿ. ದೇಶಪಾಂಡೆ ವಹಿಸಿಕೊಂಡಿದ್ದಾರೆ. ಈ ಉಪನ್ಯಾಸದ ಸದುಪಯೋಗ ಪಡೆದುಕೊಂಡು ಹರಿವಾಯು ಗುರು ಹಿರಿಯರ ಅನುಗ್ರಹಕ್ಕೆ ಪಾತ್ರರಾಗುವಂತೆ  ಕೇಶವ ಮಹುಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.