ಹುಣಶ್ಯಾಳ ಪಿ.ಜಿ: ಸ್ಮಾಟರ್್ ಕ್ಲಾಸ್ ಉದ್ಘಾಟನೆ
ಲೋಕದರ್ಶನ ವರದಿ
ಘಟಪ್ರಭಾ 29: ಸಕರ್ಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರು ಕೈಜೋಡಿಸಿದರೆ ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಮಾಡಲು ಸಹಕಾರಿಯಾಗುತ್ತದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಹೇಳಿದರು.
ಅವರು ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಸಾರ್ವಜನಿಕರ ದೇಣಿಗೆಯಿಂದ ನಿಮರ್ಿಸಲಾದ ಮೂರು ಸ್ಮಾಟರ್್ ಕ್ಲಾಸ್ಗಳನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯೊಂದು ದೇಗುಲವಿದ್ದಂತೆ ಇಂತಹ ದೇಗುಲದಲ್ಲಿ ಸಾವಿರಾರು ವಿದ್ಯಾಥರ್ಿಗಳು ವಿದ್ಯಾರ್ಜನೆ ಮಾಡುತ್ತಾರೆ.
ಸಾರ್ವಜನಿಕರು ದೇವಸ್ಥಾನಗಳಿಗೆ ನೀಡುವ ದಾನಗಳಲ್ಲಿ ಒಂದಿಷ್ಟು ಸಕರ್ಾರಿ ಶಾಲೆಗಳಿಗೆ ನೀಡಿದರೆ ಶಾಲೆಗಳ ಅಭಿವೃದ್ಧಿ ಹೊಂದುತ್ತವೆ. ಈ ನಿಟ್ಟಿನಲ್ಲಿ ಮುಂದಾಗಿರುವ ಹುಣಶ್ಯಾಳ ಪಿ.ಜಿ ಗ್ರಾಮಸ್ಥರು ಸುಮಾರು ಶಾಲೆಗೆ 2,13,000 ರೂಪಾಯಿ ದೇಣಿಗೆ ನೀಡಿ ತಮ್ಮ ಊರಿನ ಶಾಲೆಗೆ ತಾವೇ ಸ್ಮಾಟರ್್ ಕ್ಲಾಸ್ಗಳನ್ನು ನಿಮರ್ಿಸಿಕೊಂಡು ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯೋಪಾಧ್ಯಾಯ ಜಿ.ಎಲ್.ಕೋಳಿ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಸ್ಮಾಟರ್್ ಕ್ಲಾಸ್ಗಳು ಅತಿ ಅವಶ್ಯಕವಾಗಿದ್ದು ಊರಿನ ಮಹನೀಯರು ದೇಣಿಗೆ ನೀಡಿದ್ದು ಶ್ಲಾಘನಿಯ ಎಂದರು. ಗೋಕಾಕ ವಿವೇಕ ಕೋಚಿಂಗ್ ಕೇಂದ್ರದ ಸಂಸ್ಥಾಪಕ ಎಸ್.ಕೆ.ಕಬಾಡಗಿ ಮಕ್ಕಳ ಮನಮುಟ್ಟುವಂತೆ ವಿವೇಕಾನಂದರ ವಿವೇಕವಾಣಿಗಳನ್ನು ಹೇಳುವ ಮೂಲಕ ದೇಶಭಕ್ತಿ ಹಾಗೂ ಗುರಿ ಮುಟ್ಟುವ ಸಂದೇಶವನ್ನು ನೀಡಿದರು.
ಇದೇ ಸಂದರ್ಭದಲ್ಲಿ ದೇಣಿಗೆ ನೀಡಿದ ಮಹನೀಯರನ್ನು ಕೃತಜ್ಞತೆ ಸಲ್ಲಿಸಿ ಸತ್ಕರಿಸಲಾಯಿತು. ಶಾಲೆಯ ಮುಖೋಪಾಧ್ಯಾಯ ಜಿ.ಎಲ್.ಕೋಳಿ ಅವರಿಗೆ ಕನರ್ಾಟಕ ಭೂಷಣ ಪ್ರಶಸ್ತಿ ಲಭಿಸಿದ ಪ್ರಯುಕ್ತ ಸತ್ಕರಿಸಲಾಯಿತು.
ಶಿಕ್ಷಕರಾದ ಬಿ.ಬಿ.ದಗಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎ.ಗೌಡರ ಸ್ವಾಗತಿಸಿದರು. ಕೆ.ಎಂ.ಅರಭಾವಿ ನಿರೂಪಿಸಿದರು. ಎಸ್.ಎಸ್.ಹೂಗಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಾದ ಆರ್.ಬಿ.ನಾಯ್ಕ್, ಎಸ್.ಡಿ.ಎಮ್.ಸಿ ಅಧ್ಯಕ್ಷ ತಮ್ಮಣ್ಣ ನಾಯ್ಕ್, ಮಹದೇವ ಕಡಿ, ತುಕಾರಾಮ ಬಂಗೇರ, ಗಂಗಪ್ಪ ಡಬ್ಬಣ್ಣವರ್, ಪ್ರಕಾಶ ನೇಸರಗಿ, ಮಹಾಂತೇಶ ರೊಡ್ಡನವರ, ಮಾಬೂಬಿ ನದಾಫ ಮುಂತಾದವರು ಉಪಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 