ಸಂತನಾಕ’ ಕೃತಿ ಲೋಕಾರೆ್ಣ
Launch of the book 'Santanaaka'
‘ಸಂತನಾಕ’ ಕೃತಿ ಲೋಕಾರೆ್ಣ
ಧಾರವಾಡ 13: ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ಅವರು ಬರೆದ ಐತಿಹಾಸಿಕ ಕಿರು ನಾಟಕ‘ಸಂತನಾಕ’ ಕೃತಿ ಶನಿವಾರ ಧಾರವಾಡದ ಕವಿವಿಯ ಡಾ. ಆರಿ್ಸ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಲೋಕಾರೆ್ಣಗೊಂಡಿತು. ಹಿರಿಯ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಅವರು ಕೃತಿ ಲೋಕಾರೆ್ಣ ಮಾಡಿ ಮಾತನಾಡಿ, ತಾಮ್ರಶಾಸನದ ಆಧಾರಿತ ಐತಿಹಾಸಿಕ ಘಟನೆಯನ್ನು ಸೃಜನಶೀಲ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿರುವುದು ಗಮನಾರ್ಹ ಎಂದರು. ಬೆಳಗಾವಿ ಜಿಲ್ಲೆಯ ಬೇಡಕಿಹಾಳ ಗ್ರಾಮದ ತಾಮ್ರಶಾಸನದ ವಿಷಯವಸ್ತುವನ್ನು ಆಧರಿಸಿರುವ ‘ಸಂತನಾಕ’ ನಾಟಕವು ಬರಗಾಲದ ಸಂದರ್ಭದಲ್ಲಿ ನಡೆದ ಭೀಕರ ಘಟನೆ ಹಾಗೂ ಬೇಡರ ಸಮುದಾಯದ ಹಲವು ಜನರ ಸಾಮೂಹಿಕ ಹತ್ಯೆಯನ್ನು ಕೇಂದ್ರವಾಗಿಸಿಕೊಂಡಿದೆ. ಒಟ್ಟು ಆರು ದೃಶ್ಯಗಳಲ್ಲಿ 16 ಪಾತ್ರಗಳ ಮೂಲಕ ಕಥಾವಸ್ತುವನ್ನು ನಿರೂಪಿಸಲಾಗಿದೆ. ಕಾರ್ಯಕ್ರಮದಲ್ಲಿ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಬಸವರಾಜ ಡೋಣೂರ ಮಾತನಾಡಿ, ಇತಿಹಾಸದ ಅವಶೇಷಗಳಲ್ಲಿ ಸತ್ಯವನ್ನು ಹುಡುಕುತ್ತಿದ್ದ ಡಾ. ಜೆ.ಎಂ. ನಾಗಯ್ಯ ಅವರು ಸೃಜನಶೀಲ ಸಾಹಿತ್ಯದ ಮೂಲಕ ನಾಟಕ ಪರಂಪರೆಗೆ ಮರಳಿರುವುದು ಸಂತಸದ ಸಂಗತಿ ಎಂದರು. ಕೃತಿ ಪರಿಚಯ ಮಾಡಿದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ನಿಕಟಪೂರ್ವ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ನಾಟಕದುದ್ದಕ್ಕೂ ಉತ್ತರ ಕರ್ನಾಟಕದ ಪಕ್ಕಾ ದೇಸಿ ಜವಾರಿ ಭಾಷೆಯ ಸೊಗಡು ಕಾಣುತ್ತದೆ. ಹಿಂಸೆಯನ್ನು ಒಪ್ಪದ ಭಾವ ನಾಟಕದ ಕೇಂದ್ರದಲ್ಲಿದೆ ಎಂದು ಹೇಳಿದರು. ಕವಿವಿ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ. ಕೃಷ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೇಖಕರಾದ ಡಾ. ಸಿ.ಎಂ. ವೀರಭದ್ರಯ್ಯ, ಡಾ. ಧನಮಂತ ಹಾಜವಗೋಳ, ಡಾ. ಕೆ. ಮಲ್ಲಿಕಾರ್ಜುನ, ಡಾ. ಎನ್.ವೈ. ಮಟ್ಟಿಿಹಾಳ, ಡಾ. ಪೋಲೀಸ್ ಪಾಟೀಲ, ಡಾ. ರಾಜೇಶ್ವರಿ ಸಾಳಿ, ಎಸ್.ಎಂ. ನಾಗಭೂಷಣ, ಎಸ್.ಬಿ. ಹಿರೇಮಠ, ಜೆ.ಎಂ. ವಿಕ್ರಮಾದಿತ್ಯ, ಗುರುಮೂರ್ತಿ ಯರಗಂಬಳಿಮಠ, ಜೆ.ಎಂ. ವಿಜಯಾದಿತ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ. ಮಲ್ಲಪ್ಪ ಬಂಡಿ ಸ್ವಾಗತಿಸಿದರು. ಸುಷ್ಮಾ ಹೊಳೆಯಣ್ಣವರ ಹಾಗೂ ಮಮತಾಜ್ ಬೇಗಂ ನಿರೂಪಿಸಿದರು. ಮಂಜುನಾಥ ಬಗಲಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 