ಉದ್ಯಾನ ಕಾಶಿ ಕಾಮಗಾರಿಯ 2ನೇ ಹಂತದ ಯೋಜನೆಗಳಿಗೆ ಚಾಲನೆ : ಶಾಸಕ ನಿಖಿಲ ಕತ್ತಿ

ಉದ್ಯಾನ ಕಾಶಿ ಕಾಮಗಾರಿಯ 2ನೇ ಹಂತದ ಯೋಜನೆಗಳಿಗೆ ಚಾಲನೆ : ಶಾಸಕ ನಿಖಿಲ ಕತ್ತಿ Launch of the 2nd phase of the Udyan Kashi work: MLA Nikhil Katti

ಲೋಕದರ್ಶನ ವರದಿ 

ಹುಕ್ಕೇರಿ 08 : ತಾಲೂಕಿನ ಹಿಡಕಲ್‌ಡ್ಯಾಂ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ತಂದೆ ದಿ. ಉಮೇಶ ಕತ್ತಿ ಅವರ ಕನಸ್ಸಾಗಿದ್ದ ತಾಲೂಕಿನ ಹಿಡಕಲ್ ಜಲಾಶಯ ಬಳಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಉದ್ಯಾನ ಕಾಶಿ ಕಾಮಗಾರಿಯ 2ನೇ ಹಂತದ ಯೋಜನೆಗಳಿಗೆ ದಿ.8 ರಂದು ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.  ಪಟ್ಟಣದರ ವಿವಾರ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಮೊದಲ ಹಂತದಲ್ಲಿರಸ್ತೆ, ಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಇದೀಗ 20 ಕೋಟಿರೂ ವೆಚ್ಚದ2ನೇ ಹಂತದ ಕಾಮಗಾರಿಯಲ್ಲಿ ಮಕ್ಕಳ ಆಕರ್ಷಿಸುವ ರೈಲು ಮತ್ತು ಅದರ ಟ್ರ್ಯಾಕ್ ನಿರ್ಮಾಣ, ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಆಹಾರ ತಯಾರಿಕಾ ಕಟ್ಟೆಗಳು, ಆವರಣಗೋಡೆ ಸೇರಿದಂತೆ ವಿವಿಧಅಭಿವೃದ್ಧಿ ಕಾರ್ಯಗಳಿಗೆ ಕೈಗೆತ್ತಿಕೊಳ್ಳಲಾಗಿದೆ.   ಜತೆಗೆಬಿದಿರುಜೀವ ವೈವಿಧ್ಯ ವನ ನಿರ್ಮಾಣಕ್ಕಾಗಿ ಬಿದಿರು ಸಸಿ ನಾಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಪ್ರಗತಿ ಹಂತದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಕಾಮಗಾರಿ ಪ್ರಗತಿಯಲ್ಲಿದೆ.