ಶ್ರಮಿಕ ಮತ್ತು ಇತರೆ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕ ದಿನಾಚರಣೆ
Labor Day celebration in collaboration with Shramika and other labor organizations
ಲೋಕದರ್ಶನ ವರದಿ
ಮಹಾಲಿಂಗಪುರ 01: ಮೇ 01 ರಂದು ಶುಕ್ರವಾರ ಎಪಿಎಂಸಿ ಭವನದಲ್ಲಿ ಶ್ರಮಿಕ ಮತ್ತು ಇತರೆ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಕಾರ್ಮಿಕ ( ಶ್ರಮಿಕರ) ಮುಖಂಡ ಪೈಗಂಬರ್ ಪೆಂಡಾರಿ ಮಾತನಾಡಿ, ಕಾರ್ಮಿಕರು ದೇಶದ ಬೆನ್ನೆಲುಬು. ನಾವು ಇಂದು ಅನುಭವಿಸುತ್ತಿರುವ ಸೌಕರ್ಯಗಳು, ವಾಸಿಸುವ ಮನೆಗಳು, ಓಡಾಡುವ ರಸ್ತೆಗಳು ಮತ್ತು ಬಳಸುವ ಪ್ರತಿಯೊಂದು ವಸ್ತುಗಳ ಹಿಂದೆ ಒಬ್ಬ ಕಾರ್ಮಿಕನ ಬೆವರು, ಕಠಿಣ ಪರಿಶ್ರಮ ಮತ್ತು ತ್ಯಾಗ ಅಡಗಿದೆ. ಆದ ಕಾರಣ ವಿಶ್ವದೆಲ್ಲೆಡೆ ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಅವರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಈ ದಿನವೇ ಕಾರ್ಮಿಕರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.
ಇದರ ಉದ್ದೇಶ ಮಾನವೀಯ ಆಧಾರದ ಮೇಲೆ ಕೆಲಸದ ಸಮಯ ನಿಗದಿ ಮತ್ತು ನ್ಯಾಯಯುತ ಪ್ರತಿ ಫಲ ಅಂದರೆ ವೇತನಕ್ಕಾಗಿ ಹೋರಾಟದ ಕಿಚ್ಚು ಹಚ್ಚುವ ಈ ದಿನವೇ ಕಾರ್ಮಿಕರಿಗೆ ಮೀಸಲಾಗಿದೆ. ತಮ್ಮ ನೋವು ನಲಿವುಗಳ ಮಧ್ಯೆ ಗೋಳು ಹೋಯ್ದುಕ್ಕೊಂಡು ಮತ್ತೊಬ್ಬರಿಗೆ ಸಹಕಾರ ನೀಡುವವರೇ ಕಾರ್ಮಿಕರು. ಪ್ರತಿಯೊಬ್ಬ ಕಾರ್ಮಿಕನಿಗೆ ಗೌರವಯುತ ಬದುಕು, ಕೆಲಸದಲ್ಲಿ ಸುರಕ್ಷತೆ ಮತ್ತು ನ್ಯಾಯಯುತ ವೇತನದ ಹಕ್ಕಾಗಿದೆ.ಎಲ್ಲ ಕಾರ್ಮಿಕರು ಸಂಘಟಿತರಾದಲ್ಲಿ ವಿಶ್ವವನ್ನೇ ಜಯಿಸುವ ಶಕ್ತಿ ಬರುತ್ತದೆ ಎಂದರು.
ನೇಕಾರ ನಾಯಕ ಶಿವಲಿಂಗಪ್ಪ ಟಿರಕಿ, ಲಕ್ಷ್ಮಣ ಕಿಶೋರಿ ಮಾತನಾಡಿದರು.ಈ ಸಂದರ್ಭದಲ್ಲಿ ಪೈಗಂಬರ್ ಪೆಂಡಾರಿ, ಮಹೇಶ ಆರಿ, ಹಾಜಿ ರಫೀಕ್ ಜಂಗಿ,ನೂರ ಮರೆಗುದ್ದಿ, ಬೋಜು ಲಮಾಣಿ, ದಾದಾಪೀರ ಕಬಾಡಿ, ಪ್ರಕಾಶ ಚವಾನ, ಗನಸೈದ ಕಬಾಡಿ,ರಾಮು ಲಮಾಣಿ,ಅನ್ನು ಪೆಂಡಾರಿ, ಮೇಹಬೂಬ ಮುಲ್ಲಾ, ಯಾಕೂಬ್ ಜೀರಗಾಳ, ದಾವಲಸಾಬ ನಗಾರ್ಚಿ, ಅರಫಾತ ಮಾಲದಾರ, ಅಬುಬಕರ ಝಾರೆ, ಮಲಿಕ ಖುದಾವಂದ, ಕಾರ್ಮಿಕ ಸಂಘದ ಲಾಲಸಾಬ ನಗಾರ್ಚಿ ಸ್ವಾಗತಿಸಿ, ವಂದಿಸಿದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 