ಗದಗ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸಾಹಿತಿ, ಸತ್ಪುರುಷರಿಗೆ ಪ್ರೋತ್ಸಾಹಿಸಿದ ಹಿರಿಮೆ ಕುರ್ತಕೋಟಿ ಗ್ರಾಮದ್ದು : ಸಚಿವ ಎಚ್.ಕೆ.ಪಾಟೀಲ
ಗದಗ 18: ಕನ್ನಡ ನಾಡಿನ ಹಲವಾರು ಸಾಹಿತಿ ಸತ್ಪುರುಷರಿಗೆ ಪ್ರೋತ್ಸಾಹಿಸಿದ ಹಿರಿಮೆ ಕುರ್ತಕೋಟಿ ಗ್ರಾಮಕ್ಕೆ ಸಲ್ಲುತ್ತದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ತಿಳಿಸಿದರು.
ಗದಗ ತಾಲೂಕಿನ ಕುರ್ತಕೋಟಿಯ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗಿದ ಗದಗ ತಾಲೂಕ 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕುರ್ತಕೋಟಿಯು ನಾಟಕ, ಬಯಲಾಟ, ರಂಗಭೂಮಿ , ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಭಾರತ ರತ್ನ ಭೀಮಸೇನ ಜೋಶಿ ಅವರ ಪ್ರಥಮ ಗುರುಗಳೂ ಸಹ ಕುರ್ತಕೋಟಿಯವರು. ಈ ಗ್ರಾಮವು ಐತಿಹಾಸಿಕ ಶಿಲ್ಪಕಲೆ, ವಾಸ್ತುಶಿಲ್ಪದಂತಹ ಕಟ್ಟಡಗಳಿಂದ ಖ್ಯಾತವಾಗಿದೆ. ಕುರ್ತಕೋಟಿ ಗ್ರಾಮದ ಕನ್ನಡದ ಕೀರ್ತಿ ಎಂದೇ ಪ್ರಖ್ಯಾತರಾದ ಕೀರ್ತಿನಾಥ ಕುರ್ತಕೋಟಿ ಅವರು ಖ್ಯಾತ ಸಾಹಿತಿ ಹಾಗೂ ವಿಮರ್ಶಕರು ಆಗಿದ್ದರು. ಕುಮಾರವ್ಯಾಸ ಹಾಗೂ ದ.ರಾ.ಬೇಂದ್ರೆ ಸಾಹಿತ್ಯದಲ್ಲಿ ಅಧಿಕಾರಯುತವಾಗಿ ಮಾತನಾಡಿ ಪ್ರಖ್ಯಾತ ವಾಗ್ಮಿ ಯೂ ಆಗಿದ್ದರು. ಕುರ್ತಕೋಟಿ ಗ್ರಾಮವು ಸಾಹಿತ್ಯ, ಸಂಸ್ಕೃತಿ, ಸಂಗೀತ, ರಾಜಕೀಯ, ಕಲಾಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕುರ್ತಕೋಟಿಯ ಡಾ. ಅರುಣ ಪಾಟೀಲ ಶ್ರೇಷ್ಟ ಸಂಶೋಧಕರು, ವಿಜ್ಞಾನಿಗಳಾಗಿದ್ದಾರೆ. ರಸಾಯನ ಶಾಸ್ತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದಿದ್ದು ಜಿಲ್ಲೆಯಲ್ಲಿ ಮೋಡ ಬಿತ್ತನೆ ಪ್ರಯೋಗಕ್ಕೆ ಕಾರಣೀಭೂತರಾಗಿದ್ದಾರೆ. ಕನ್ನಡ ನಾಡಿನ ಸೇವೆಗಾಗಿ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಲು ಗದಗ ಜಿಲ್ಲೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಈ ಕನ್ನಡ ಸಾಹಿತ್ಯ ಸಮ್ಮೇಳನವು ಮಾದರಿ ಸಮ್ಮೇಳನವಾಗಲಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹೊಸಳ್ಳಿಯ ಸಂಸ್ಥಾನಮಠದ ಅಭಿನವ ಶ್ರೀ ಬೂದಿಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ನಾಡೋಜ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಅವರು ಮಾತನಾಡಿ ಕನ್ನಡ ಭಾಷೆಯು ಬದ್ಧತೆ ಹಾಗೂ ಪರಿಪೂರ್ಣತೆ ಹೊಂದಿದ ಭಾಷೆಯಾಗಿದೆ. ಕನ್ನಡ ಭಾಷೆ0ುನ್ನು ಲಿಪಿಗಳ ರಾಣಿ ಎಂದು ಹೆಸರಿಸಲಾಗಿದೆ. ಕನ್ನಡ ನಾಡು ಹೆಸರಾಂತ ಕವಿಗಳು. ನಾಟಕಕಾರರು. ಸಾಹಿತಿಗಳನ್ನು , ಗಮಕಿಗಳನ್ನು ಹೊಂದಿದೆ . ಕುರ್ತಕೋಟಿ ಗ್ರಾಮವು ಸ್ನೇಹ ಸೌಹಾರ್ದತೆಗೆ, ಸಹನೆ ತಾಳ್ಮೆಗೆ ಹೆಸರಾಗಿದೆ. ಕನ್ನಡದ ದೀಪ ಚಿರಕಾಲ ಬೆಳಗಬೇಕು ಎಂದು ತಿಳಿಸಿದರು. ಕುರ್ತಕೋಟಿಯಲ್ಲಿ ಜರುಗಿದ ಗದಗ ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನವು ಗದಗ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗದಗ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಜಿ, ಮಾಜಿ ಶಾಸಕ ಡಿ. ಆರ್. ಪಾಟೀಲ, ಗದಗ ತಾಲೂಕು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಸಮಿತಿ0ು ಅದ್ಯಕ್ಷರಾದ ಅಶೋಕ ಮಂದಾಲಿ, ಶಿವಶರಣೆ ಡಾ. ನೀಲಮ್ಮ ತಾಯಿ, ಅನ್ನದಾನಿ ಹಿರೇಮಠ, ಎಪಿಎಂಸಿ ಸದಸ್ಯರಾದ ಅಪ್ಪಣ್ಣ ಇನಾಮತಿ, ಗೀರೀಶ ಡಬಾಲಿ, ವಿರುಪಣ್ಣ ಹೊಸಮನಿ, ಚಂದ್ರಶೇಖರ್ಪ ಚೂರಿ, ಶರಣೆ ರತ್ನಕ್ಕ ಪಾಟೀಲ, ಡಾ. ಶಿವಪ್ಪ ಕುರಿ, ಶಾಲಾ ಶಿಕ್ಷನ ಇಲಾಖೆ0ು ಉಪನಿರ್ದೆಶಕ ಆರ್.ಎಸ.ಬುರುಡಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ0ು ಸಹಾ0ುಕ ನಿರ್ದೇಶಕ ವಿರ0್ಯುಸ್ವಾಮಿ ಬಿ,ಗುರಣ್ಣ ಬಳಗಾನುರ, ಅರ್ಜುನ ಗೊಳಸಂಗಿ, ಪ್ರೊ ಕೆ.ಎಚ್ ಬೇಲೂರ, ಸಾಹಿತಿಗಳು, ಹಿರಿಯರು, ಗಣ್ಯರು ಉಪಸ್ಥಿತರಿದ್ದರು.
ಖ್ಯಾತ ಸಾಹಿತಿ ಜಗನ್ನಾಥ ಜಮಾದಾರ ಕಾ0ುರ್ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗದಗ ಜಿಲ್ಲೆಯು ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ , ಚಿತ್ರಕಲೆ, ಶಿಲ್ಪಕಲೆ, ರಂಗಭೂಮಿ, ಜಾನಪದ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆಯನ್ನು ನೀಡಿದ್ದು ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪರಂಪರೆಯ ಪ್ರವಾಹವೇ ಹರಿದು ಬಂದಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಗದಗ ಜಿಲ್ಲೆಯನ್ನು ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ ಎಂದರೆ ತಪ್ಪಾಗಲಾರದು. ಜಿಲ್ಲೆಯಲ್ಲಿನ ಗ್ರಾಮಗಳು ಸಾಹಿತ್ಯ, ನಾಟಕ, ಕಲೆ ಕ್ಷೇತ್ರಗಳಲ್ಲಿ ಉತ್ತಮ ಪರಿಸರವನ್ನು ಹೊಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಡಾ.ರಶ್ಮಿ ಅಂಗಡಿ ಸರ್ವರನ್ನು ಸ್ವಾಗತಿಸಿದರು.ಕರಿಯಪ್ಪ ಕೊಡವಳ್ಳಿ, ಕು. ಶಹನಾಜ್ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎ. ಇನಾಮತಿ ಪ್ರೌಢಶಾಲೆಯು ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಮಂಜುಳಾ ವೆಂಕಟೇಶಯ್ಯ ವಂದಿಸಿದರು.