ಕುಮಟಾ : ದೀಪಾವಳಿ ಹಬ್ಬದ ನಿಮಿತ್ತ ಪಪ್ಪಾಯಿ ಹೊಂಡೆಯಾಟ
ಲೋಕದರ್ಶನ ವರದಿ
ಕುಮಟಾ, 9 : ಬೆಳಕಿನ ಹಬ್ಬವಾದ ದೀಪಾವಳಿ ಸಂದರ್ಭದಲ್ಲಿ ಕುಮಟಾದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಪಪ್ಪಾಯಿ ಹೊಂಡೆಯಾಟ ಸಾರ್ವಜನಿಕರನ್ನು ರೋಮಾಂಚನ ಗೊಳಿಸುವಲ್ಲಿ ಯಶಸ್ವಿಯಾಯಿತು. ಕಳೆದ ನಾಲ್ಕು ದಿನಗಳ ಕಾಲ ಸಡಗರದಿಂದ ನಡೆದ ಬೆಳಕಿನ ಹಬ್ಬ ದೀಪಾವಳಿ ಸಂಪನ್ನಗೊಂಡಿದ್ದು, ಅಮವಾಸ್ಯ ದಿನದಂದು ಆರಂಭವಾದ ಹೊಂಡೆಯಾಟ ಹಬ್ಬದ ಕೊನೆಯ ದಿನವಾದ ಬಲಿ ಪಾಡ್ಯದಂದು ಗುರುವಾರ ಕೊನೆಗೊಂಡಿದ್ದು. ಸಾರ್ವಜನಿಕರು ಹೊಂಡೆಯಾಟ ಆಸಕ್ತಿಯಿಂದ ವೀಕ್ಷಿಸುವ ಮೂಲಕ ಸಂತಸಪಟ್ಟರು.
ದೀಪಾವಳಿಯ ಕೊನೆಯ 2 ದಿನಗಳು ಬಹುತೇಕ ಸಮಾಜದವರು ಸಾಂಪ್ರದಾಯಿಕ ಪಪ್ಪಾಯಿ ಹೊಂಡೆ ಯಾಟವಾಡುತ್ತಾರೆ. ನಾಮಧಾರಿ, ಕೋಮಾರಪಂತ, ಹಾಲಕ್ಕಿ ಗೌಡ, ಮುಕ್ರಿ ಹಾಗೂ ಜಿಎಸ್ಬಿ ಸಮುದಾಯದ ಯುವಕರು ಹೊಂಡೆಯಾಟದಲ್ಲಿ ನಿರತರಾಗಿರುವುದು ಕಂಡುಬಂತು. ದೇವರಹಕ್ಕಲದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಆರಂಭವಾಗುವ ಹೊಂಡೆಯಾಟ ಸುಭಾಸ ರಸ್ತೆ ಮಾರ್ಗವಾಗಿ ಪಿಕಪ್ ಬಸ್ಟ್ಯಾಂಡ್ ತಲುಪುತ್ತದೆ. ಅಲ್ಲಿ ಶಶಿಹಿತ್ತಲ-ಗುಂದಾ ಕಡೆಯಿಂದ ಬಂದ ಕೋಮಾರಪಂತ ಸಮುದಾಯದ ಯುವಕರು ಒಟ್ಟಿಗೆ ಸೇರಿಕೊಂಡು ಹೊಂಡೆಯಾಡುತ್ತಾರೆ. ಅಲ್ಲಿಂದ ರಥಬೀದಿ, ಮೂರುಕಟ್ಟೆ ಮಾರ್ಗವಾಗಿ ತೆರಳುವಾಗ ಹಾಲಕ್ಕಿ ಮತ್ತು ಮುಕ್ರಿ ಸಮಾಜದ ನಂತರ ಈ ಹೊಂಡೆಯಾಟ ಗಿಬ್ ಸರ್ಕಲ್ಲಿನ ಹುಲಿದೇವರ ಕಟ್ಟೆಯಲ್ಲಿ ಕೊನೆಗೊಳ್ಳುತ್ತದೆ.
1916ರಲ್ಲಿ ಕಲ್ಲಿನಿಂದ ಹೊಂಡೆಯಾಡುವ ಪದ್ಧತಿ ಇತ್ತು. ಕಲ್ಲಿನ ಹೊಡೆತಕ್ಕೆ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದರಿಂದ ಅಂದಿನ ಬ್ರಿಟಿಷ್ ಸಕರ್ಾರ ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಿತ್ತು. ನಂತರ ತೆಂಗಿನಕಾಯಿಯಿಂದ ಹೊಂಡೆಯಾಟ ನಡೆಯುತ್ತಿತ್ತು. ಈಗ ಪಪ್ಪಾಯಿ ಬಳಸಿಕೊಂಡು ಹೊಂಡೆಯಾಡುವ ಪದ್ಧತಿ ಇಂದಿಗೂ ಪ್ರಚಲಿತದಲ್ಲಿದೆ. ಈ ಹೊಂಡೆಯಾಟವನ್ನು ನೋಡಲು ನೂರಾರು ಜನರು ಸೇರುತ್ತಾರೆ. ಆಟಗಾರರಿಗೆ ಚಪ್ಪಾಳೆ ತಟ್ಟಿ ಪ್ರೊತ್ಸಾಹಿಸುತ್ತಾರೆ. ಕವಣೆಯಲ್ಲಿ ಪಪ್ಪಾಯಿಯನ್ನು ಇಟ್ಟು ಕೈಯಲ್ಲಿ ಕಂಬಳಿ ಸುತ್ತಿಕೊಂಡು ಕುಳಿತ ವ್ಯಕ್ತಿಗೆ ಹೊಡೆಯುವಾಗ ಆ ಹೊಡೆತವನ್ನು ಕುಳಿತ ವ್ಯಕ್ತಿಯು ತಪ್ಪಿಸಿಕೊಳ್ಳಬೇಕಾಗುತ್ತದೆ. ಒಮ್ಮೊಮ್ಮೆ ಈ ಹೊಡೆತದಿಂದ ಪೆಟ್ಟು ತಗಲುವುದು ಸಾಮಾನ್ಯವಾಗಿರುತ್ತದೆ. ಈ ಪಪ್ಪಾಯಿ ಕವಣೆಯಲ್ಲಿ ಸುತ್ತಿಕೊಂಡು ರಭಸದಿಂದ ಹೊಡೆಯುವಾಗ ಆ ಪಪ್ಪಾಯಿ ಸಿಡಿದು ಜನರಿಗೆ ತಗುಲಿದಾಗ ನೆರೆದ ಜನರು ಕೂಹು ಹೊಡೆಯುವುದು ಜನರನ್ನು ರಂಜಿಸುತ್ತದೆ. ಉಪ್ಪಿನಗಣಪತಿ, ದೇವರಹಕ್ಕಲ, ಚಿತ್ರಿಗಿ, ನೆಲ್ಲಿಕೇರಿ ಹಳೆ ಬಸ್ ನಿಲ್ದಾಣ, ಶಶಿಹಿತ್ತಲ-ಗುಂದಾ, ಬಸ್ತಿಪೇಟೆ, ಉಪ್ಪಾರಕೇರಿ, ಹಳಕಾರ ಸೇರಿದಂತೆ ಪಟ್ಟಣದ ವಿವಿಧ ಕಡೆಯ ಜನರು ಕೂಡ ಆಟದಲ್ಲಿ ತೊಡಗಿಕೊಳ್ಳುತ್ತಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 