ಕ್ರೀಡಾಕೂಟದಲ್ಲಿ ಕುಂಬಾರಹಳ್ಳ ಪಿಎಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಾಲಕಿಯರ ತಂಡ ಪ್ರಥಮ
Kumbarahalla PM Karnataka Public School girls team wins first place in sports meet
ಲೋಕದರ್ಶನ ವರದಿ
ಜಮಖಂಡಿ 02: ತಾಲೂಕಿನ ಆಲಗೂರ ಗ್ರಾಮದ ಪುರ್ನವಸತಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕುಂಚನೂರು ವಲಯ ಮಟ್ಟದ ಪ್ರೌಢಶಾಲೆಗಳ 17 ವರ್ಷದ ಒಳಗಿನ ಕ್ರೀಡಾಕೂಟದಲ್ಲಿ ಕುಂಬಾರಹಳ್ಳ ಪಿಎಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಹೇಳಿದರು.
ತ್ರೋಬಾಲ್‌ನಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದೆ, ಬಾಲಕರ 100 ಮೀಟರ್ ಓಟದಲ್ಲಿ ಶಿವಾನಂದ ನಾಗನೂರ ಪ್ರಥಮ ಸ್ಥಾನ, ಬಾಲಕಿಯರ 3000 ಮೀಟರ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ವಾಲಿಬಾಲ್ ತಂಡದಲ್ಲಿ ಅಮೃತಾ ಸವದಿ, ಸ್ಫೂರ್ತಿ ನರಸನ್ನವರ, ಗಂಗಾ ಕಾಖಂಡಕಿ, ಕಲಾವತಿ ಪೂಜಾರಿ, ಶ್ರೇಯ ಗುಗ್ಗರಿ, ಸೃಷ್ಠಿ ಕೆಮ್ಮನವರ, ಭುವನೇಶ್ವರಿ ಪೂಜಾರಿ, ಸೃಷ್ಠಿ ಮಟ್ಟಿ ಭಾಗವಹಿಸಿದ್ದರು ಎಂದರು.
ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ದೈಹಿಕ ಶಿಕ್ಷಣ ಪರೀವಿಕ್ಷಕಿ ಪಂಚಾಕ್ಷರಿ ನಂದೇಶ, ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮುತ್ತೂರ, ತಂಡದ ವ್ಯವಸ್ಥಾಪಕ ಚಂದ್ರಕಾಂತ ಪೊಲೀಸ್, ಶಾರದಾ ಮಠ, ಶಿಕ್ಷಕರಾದ ಸಂಗಮೇಶ ಉಟಗಿ, ಸವಿತಾ ಬೆನಕಟ್ಟಿ, ಆಶಿಫಾ ಭಾನು ಮೋಮಿನ, ಅಶೋಕ ಬಿರಾದರ್ ಪಾಟೀಲ, ಶಕುಂತಲಾ ಬಿರಾದಾರ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಶುಭ ಹಾರೈಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 