ಬಸವೇಶ್ವರ ಶಾಲೆಯಲ್ಲಿ ರಾಧೆ ಕೃಷ್ಣನ ವೇಷ ಭೂಷಣ ಧರಿಸಿದ ಚಿಣ್ಣರು

ತಾಂಬಾ 07: ಭೂಮಿಯ ಮೇಲೆ ಆವರಿಸಿರುವ ಅಂದಕಾರವನ್ನು ಹೋಗಲಾಡಿಸಲು ಮತ್ತು ಧರ್ಮದ ಆಳ್ವಿಕೆಗೆ ಧಕ್ಕೆತರುತ್ತಿರುವ ಎಲ್ಲ ದುಷ್ಟ ಶಕ್ತಿಗಳನ್ನು ತೋಡೆದು ಹಾಕುವಲ್ಲಿ ಶ್ರೀ ಕೃಷ್ಣ ಪರಮಾತ್ಮನ ಪಾತ್ರ ಅನನ್ಯವಾಗಿದೆ ಎಂದು ಮುಖ್ಯ ಗುರುಮಾತೆ ಕೆ.ಬಿ.ಭರಮಣ ಹೇಳಿದರು. 

ಗ್ರಾಮದ ಶ್ರೀ ಬಸವೇಶ್ವರ ಹೀರೀಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಚಿಣ್ಣರು ಕೃಷ್ಣ ಮತ್ತು ರಾಧೆಯ ವೇಷ ಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚಿಣ್ಣರು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಸಮ್ರಮಿಸಿದ್ದು ನನಗೆ ಸಂತಸ ತಂದಿದೆ. ನಮಗೆ ಬಾಲ್ಯದಲ್ಲಿ ಇಂದಹ ಅವಕಾಶಗಳು ಸಿಕ್ಕಿರಲಿಲ್ಲಾ ಎಂದರು. 

ಸ್ಪರ್ಧೆಯ ನಿರ್ಣಾಯಕರಾಗಿ ಎಸ್‌.ಎಮ್‌.ಮಾದನಶೆಟ್ಟಿ ಮತ್ತು ಎಸ್‌.ಎಸ್‌.ಮದಬಾವಿ ಆಗಮಿಸಿದ್ದರು. ಈ ಸಮಯದಲ್ಲಿ ಪ್ರಥಮ, ಧ್ವಿತಿಯ, ತೃತಿಯ ಸ್ಥಾನಗಳನ್ನು ಆಯ್ಕೆಮಾಡಿ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತ್ತು. 

ಶಿಕ್ಷಕರಾದ ಪಿ.ಡಿ.ಕೆಂಗನಾಳ, ಶ್ರೀಮತಿ ಎಸ್‌.ಆಯ್‌.ದಂಡೋತಿ, ಎಸ್‌.ಎ.ಮಾಳಿ, ಎನ್‌.ಎ.ಬಾಳಿ, ಜೆ.ಎಚ್‌.ಹೋಗಾರ, ಎಸ್‌.ಆರ್‌.ಕೆಂಗನಾಳ, ಡಿ.ಜೆ.ಜೆವೂರ, ಎಸ್‌.ಜಿ.ಗೌರ, ಬಿ.ಡಿ.ಕೊಟಗೊಂಡ, ಆರ್‌.ಎ.ಜಳಕಿ ಹಾಗೂ ಸಿಬ್ಬಂದಿಗಳು ಪಾಲಕರು ಹಾಜರಿದ್ದರು.