ರಾಮ ಮಂದಿರದಲ್ಲಿ ವಿಜ್ರಂಭಣೆಯಿಂದ ಆಚರಿಸಿದ ಕೃಷ್ಣಾಷ್ಠಮಿ
Krishna Ashtami celebrated with grandeur at Ram Mandir
ಅಥಣಿ, 19 ; ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಅಥಣಿ ಶ್ರೀರಾಮ ಮಂದಿರದಲ್ಲಿ ಬಾಲ ಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ಸುಮಂಗಲೆಯರು ಹಾಡು ಹಾಡಿ ಅಲಂಕೃತ ತೊಟ್ಟಿಲು ತೂಗಿದರು. ವಿವಿಧ ಹೂ ಮತ್ತು ಹೂ ಮಾಲೆಗಳಿಂದ, ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿದ ಕೃಷ್ಣ ಮತ್ತು ರಾಧೆಯ ಮೂರ್ತಿಗಳನ್ನು ಅಲಂಕೃತ ವೇದಿಕೆ ಮೇಲಿಟ್ಟು ಭಕ್ತಿಯಿಂದ ಪೂಜಿಸಿದರು.
ವೇದಿಕೆ ಮೇಲೆ ಕೃಷ್ಣನಿಗೆ ಇಷ್ಟವಾದ ಬೆಣ್ಣೆ, ಹಣ್ಣು, ಹಾಲು, ಮೊಸರು, ಶುಂಠಿ, ಸಕ್ಕರೆ ಇಟ್ಟು ನೈವೆದ್ಯ ತೋರಿಸಿದರು. ಕೃಷ್ಣಾಷ್ಠಮಿ ನಿಮಿತ್ಯ ಭಜನೆ ಪದಗಳನ್ನು ಹಾಡಿದರು. ವೇದಿಕೆ ಮೇಲೆ ವಸುದೇವ, ದೇವಕಿ, ಬಲರಾಮರ ಚಿಕ್ಕ ಚಿಕ್ಕ ಮೂರ್ತಿಗಳನ್ನಿಟ್ಟು ಪುಟ್ಟ ಗೋಕುಲವನ್ನೇ ನಿರ್ಮಾಣ ಮಾಡಿದ್ದರು.
ಮರುದಿನ ಪಾರಣಿಯಂದು ಸಂಜೆ ಹಾಡು, ಭಜನೆ ಮಾಡಿ ಕೋಲಾಟ ಆಡಿ ಕುಣಿದು ಕುಪ್ಪಳಿಸಿ ಹಾಲು, ಮೊಸರು, ಬೆಣ್ಣೆಯಿಂದ ತುಂಬಿದ್ದ ಗಡಿಗೆಯನ್ನು ಒಡೆಯುವ ಮೂಲಕ ಗೋಪಾಳ ಕಾವಲಿ ಆಚರಿಸಿ ವಿಜ್ರಂಭಿಸಿದರು. ಕೃಷ್ಣಾಷ್ಠಮಿ ಕಾರ್ಯಕ್ರಮಗಳೆಲ್ಲವು ಲಕ್ಷ್ಮಣ ರಾಮದಾಸಿ, ಕ್ಷಮಾ ರಾಮದಾಸಿ ನೇತೃತ್ವದಲ್ಲಿ ನಡೆದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 