ಕೊಪ್ಪಳ; ರೇಣುಕಾಚಾರ್ಯರ ಜಯಂತಿ ಪೂರ್ವಭಾವಿ ಸಭೆ ಯಶಸ್ವಿ

ಲೋಕದರ್ಶನ ವರದಿ

ಕೊಪ್ಪಳ 11: ನಗರದ ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘ ಕೊಪ್ಪಳದವತಿಯಿಂದ  

ರೇಣುಕಾಚಾರ್ಯರ ಜಯಂತೋತ್ಸವ ಜೂನ್ 27 ಗುರುವಾರ ಜರುಗಲಿದೆ ಎಂದು ಸಂಘದ ಅಧ್ಯಕ್ಷರಾದ ರುದ್ರಯ್ಯ ವಕೀಲರು ಹೇಳಿದರು.

ಅವರು ನಗರದ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಭವನದಲ್ಲಿ ಶನಿವಾರದಂದು ಶ್ರೀ ರೇಣುಕಾಚಾರ್ಯರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಯಂತಿಯ ಪ್ರಯುಕ್ತವಾಗಿ ನಾಲ್ಕು ಪೀಠದ ಜಗದ್ಗರುಗಳವರು ಆಗಮಿಸುತ್ತಾರೆ. ನಾಲ್ಕು ಜಗದ್ಗರುಗಳನ್ನು ಕರೆಸಿಕೊಳ್ಳುವುದು ಸಾಮನ್ಯ ಕೆಲಸವಲ್ಲ, ನಾವು ಈ ಕೆಲಸ ಮಾಡುತ್ತೀದ್ದೇವೆ, ಜಂಗಮರ ಕನಸನ್ನು ನನಸು ಮಾಡುವ ಕಾರ್ಯ ಈಗ ಬಂದಿದೆ ಎಂದರು. ಗುರುಮೂತರ್ಿಸ್ವಾಮಿ ಅಳವಂಡಿರವರು ನಾವು ಜಾತಿವಾದಿಗಳಲ್ಲ, ಜಂಗಮ ಸಮಾಜದಲ್ಲಿ ಹುಟ್ಟಿದ್ದೆ ಒಂದು ಪುಣ್ಯ, ಜಗದ್ಗುರುಗಳವರನ್ನು ಕರೆಸಲು ಸಮಿತಿ ನಿರ್ಣಯ ಮಾಡಿದೆ, ಅವರನ್ನು ಕೇಳಿಕೊಂಡಿದ್ದೇವೆ ಅವರು ದಯಾಮಾಡಿಸುತ್ತೇವೆ ಎಂದಿದ್ದಾರೆ.

ನಾವು ಜಂಗಮರು ಎಲ್ಲಾ ಸಮಾಜದವರ ಪೂಜೆ ಕಾರ್ಯಗಳನ್ನು ಮಾಡುತ್ತೆವೆ. ವಿರೇಶ ಮಾಹಾಂತಯ್ಯನಮಠ ಮಾತನಾಡಿ, ಎಲ್ಲಾ ಜಂಗಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದರು. ಜಯಂತಿಯ ಪ್ರಯುಕ್ತವಾಗಿ ಆಹಾರ ಸಮಿತಿ, ವೇದಿಕೆ ಸಮತಿ, ಮೆರವಣಿಗೆ ಸಮಿತಿ, ಜಯಂತಿ ಉತ್ಸವ ಸಮಿತಿ, ಅಯ್ಯಚಾರ ಸಮಿತಿಯನ್ನು ರಚಿಸಿದರು.

ಸಭೆಯಲ್ಲಿ ಜಂಗಮ ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ ಹಿರೇಮಠ, ಎಸ್.ಎಂ. ಬೂಸನೂರಮಠ, ಮನೋಹರಸ್ವಾಮಿ ಹಿರೇಮಠ, ಅಮರಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ವಿರುಪಾಕ್ಷಯ್ಯ ಗದಗಿನಮಠ, ಹಾಲಯ್ಯ ಹುಡೇದಜಾಲಿ, ಶಿವಕುಮಾರ್ ಹಿರೇಮಠ, ನಾಗಭೂಷಣ ಸಾಲಿಮಠ, ಅಜ್ಜಯ್ಯಸ್ವಾಮಿ, ವಿರೇಶಸ್ವಾಮಿ ಬೊಮ್ಮನಾಳ, ವಿಜಯ ವಸ್ತ್ರದ, ಭರತ ಗದಗಿನಮಠ, ಮಂಜುನಾಥ ಗದಗಿನಮಠ, ಶಾಂತಕ್ಕ, ಸವಿತಾ, ಪಾರ್ವತಿ ಹಿರೇಮಠ ಹಾಗೂ ಇತರ ಜಂಗಮ ಬಾಂಧವರು ಇದ್ದರು. ರುದ್ರಯ್ಯ ವಕೀಲರು ಸ್ವಾಗತಿಸಿದರು, ಹಂಪಯ್ಯ ನಿರೂಪಿಸಿದರು.