ಲೋಕದರ್ಶನ ವರದಿ
ಕೊಪ್ಪಳ 11: ಆದಿಶಕ್ತಿ ಶ್ರೀ ಹಲಗೇರಿ ದ್ಯಾಮಮ್ಮನ ನೂತನ ರಥೋತ್ಸವದ ಕಳಸವು ಸಕಲ ವಾದ್ಯಗಳೊಂದಿಗೆ ಶನಿವಾರ ಬೆಳಗ್ಗೆ ಮೈನಳ್ಳಿಯ ಷ.ಬ್ರ. ಶ್ರೀ ಸಿದ್ದೇಶ್ವರ ಶಿವಾಚಾರ್ಯರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ಬೆಳಗ್ಗೆ 5ಗಂಟೆಗೆ ಶ್ರೀ ದ್ಯಾಮಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದಾನಿಗಳಾದ ಉಮೇಶಗೌಡ ಪಾಟೀಲ್ ದಳಪತಿ ಹಾಗೂ ನಾಗರಾಜ ಪಾಲಂಕಾರ ಅವರ ಮನೆಯಿಂದ ಬೆಳಗ್ಗೆ 7ಗಂಟೆಗೆ ನೂತನ ರಥೋತ್ಸವ ಕಳಸವನ್ನು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಕಲ ವಾದ್ಯಗಳೊಂದಿಗೆ ದ್ಯಾಮಮ್ಮ ದೇವಿಗೆ ಅಪರ್ಿಸಲಾಯಿತು.
ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬೆಳಗ್ಗೆ 11.20ಕ್ಕೆ ನೂತನ ರಥದ ಕಳಸಾರೋಹಣವು ಅಪಾರ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಮೇ.12ರಂದು ಶ್ರೀ ಬನ್ನಿ ಮಹಾಕಾಳಿಗೆ ಗಂಗಾಭಿಷೇಕ ಹಾಗೂ ಗ್ರಾಮದ ಎಲ್ಲಾ ದೇವತೆಗಳಿಗೆ ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ ಎಂದು ಪ್ರಚಾರ ಸಮಿತಿ ಸದಸ್ಯ ದೇವೇಂದ್ರ ಬಳಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಶಾಂಭವಿ ಸೇವಾ ಸಮಿತಿ ಅಧ್ಯಕ್ಷ ಗುರುನಗೌಡ ಪಾಟೀಲ್, ಉಪಾಧ್ಯಕ್ಷ ಕುಬೇರಪ್ಪ ಗೋರವರ್, ಕಾರ್ಯದರ್ಶಿಗಳಾದ ದೇವೇಂದ್ರಪ್ಪ ಬಡಿಗೇರ, ಗವಿಸಿದ್ದನಗೌಡ ಪಾಟೀಲ್, ಬಸನಗೌಡ ಪಾಟೀಲ್, ಶರಣಪ್ಪ ಬಿನ್ನಾಳ, ದ್ಯಾಮಣ್ಣ ಅಬ್ಬಿಗೇರಿ, ಗ್ರಾಪಂ ಅಧ್ಯಕ್ಷ ದೇವಪ್ಪ ಓಜನಹಳ್ಳಿ. ಶರಣಯ್ಯ ಹಿರೇಮಠ, ಉಮೇಶಗೌಡ ದಳಪತಿ, ನಾಗರಾಜ ಪಾಲಂಕಾರ, ಹನುಮಂತ ಹಳ್ಳಿಕೇರಿ, ಮಲ್ಲಿಕಾರ್ಜುನ ಸಜ್ಜನ, ವೀರಭದ್ರಗೌಡ ಪಾಟೀಲ್, ಮಂಜುನಾಥ ಅಂಗಡಿ, ಪ್ರಚಾರ ಸಮಿತಿ ಅಧ್ಯಕ್ಷ ರಾಜಶೇಖರ ಅಂಗಡಿ ಸೇರಿದಂತೆ ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.