ವಿಧಾನ ಸಭೆ ಚುನಾವಣೆಗೆ ನವಲಗುಂದ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಲು ಕೋನರಡ್ಡಿ ಅರ್ಜಿ ಸಲ್ಲಿಕೆ

ನವಲಗುಂದ : ದಾಸ ಶ್ರೇಷ್ಟ ಶ್ರೀ ಭಕ್ತ ಕನಕದಾಸ ಜಯಂತಿಯ ಶುಭ ದಿನ ದಂದು ಧಾರವಾಡ ಜಿಲ್ಲೆಯ ರೈತರ ಗಂಡು ಮೆಟ್ಟಿನ ನಾಡು ನವಲಗುಂದ ವಿಧಾನ ಸಭಾ ಕ್ಷೇತ್ರ-69ಕ್ಕೆ ಕಾಂಗ್ರೇಸ್ ಪಕ್ಷದಿಂದ ಮುಂಬರುವ 2023ರ ವಿಧಾನ ಸಭಾ ಚುನಾವಣೆಗೆ ಸ್ಪಧರ್ಿಸಲು ನವಲಗುಂದ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಜಿಲ್ಲಾ ಅಧ್ಯಕ್ಷ ವಿನೋದ ಅಸೂಟಿ ಜಂಟಿಯಾಗಿ ಕೆಪಿಸಿಸಿ ಕಚೇರಿಗೆ ಅರ್ಜಿ ಸಲ್ಲಿಸಿದರು. 

ಕನಕದಾಸರ ಜಯಂತಿಯ ಶುಭ ದಿನದಂದು ಬೆಂಗಳೂರನಲ್ಲಿ ಮತ್ತೆ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿ ಅವರ ಜೊತೆ ಜಂಟಿಯಾಗಿ ಅರ್ಜಿಸಲ್ಲಿಸಿ ಕಾಂಗ್ರೇಸ್ ಪಕ್ಷ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ 2004, 2008, 2018 ರಲ್ಲಿ ಕಾಂಗ್ರೇಸ್ ಜಯಗಳಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಬಾರಿ ಹೆಚ್ಚು ಸಂಘಟನೆಯನ್ನು ಮಾಡಿ ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೇಸ್ ಬಾವುಟ ಹಾರಿಸಬೇಕೆಂದು ಎನ್.ಹೆಚ್.ಕೋನರಡ್ಡಿ ಹೇಳಿದರು.

2023 ಕ್ಕೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ನೇತೃತ್ವದ ಸಕರ್ಾರ ಅಧಿಕಾರಕ್ಕೆ ತರಲು ಕನ್ನಡಿಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾಜರ್ುನ ಖಗರ್ೆ, ಸಂಘಟನಾ ಚತುರ ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ, ಮಾಜಿ ಮುಖ್ಯ ಮಂತ್ರಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಕೆಪಿಸಿಸಿ ರಾಜ್ಯ ಪ್ರಚಾರ ಸಮೀತಿ ಅಧ್ಯಕ್ಷ ಎಮ್.ಬಿ.ಪಾಟೀಲ, ಎಐಸಿಸಿ ಸದಸ್ಯರುಗಳಾದ  ಹೆಚ್.ಕೆ.ಪಾಟೀಲ, ದಿನೇಶ ಗುಂಡುರಾವ, ಕೆ.ಹೆಚ್.ಮುನಿಯಪ್ಪ ಕಾಯರ್ಾಧ್ಯಕ್ಷರುಗಳಾದ ಸಲಿಂ ಅಹ್ಮದ, ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ದೃವನಾರಾಯಣ, ಈಶ್ವರ ಖಂಡ್ರೆ, ಸೇರಿದಂತೆ ಪಕ್ಷದ ಅನೇಕ ಮುಖಂಡರ ನೇತೃತ್ವದಲ್ಲಿ 2023ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯೊಂದಿಗೆ ನವಲಗುಂದ ವಿಧಾನ ಸಭಾ ಕ್ಷೇತ್ರ-69ನ್ನು ಗೆಲ್ಲುವ ಗುರಿಯೊಂದಿಗೆ ನವಲಗುಂದ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಹಾಗೂ ಧಾರವಾಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿ ಅವರು ಜಂಟಿಯಾಗಿ ಅಜರ್ಿ ಸಲ್ಲಿಸಿದ್ದು ವಿಶೇಷವಾಗಿತ್ತು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನವಲಗುಂದ ಕ್ಷೇತ್ರದಲ್ಲಿ ಎಲ್ಲ ಮುಖಂಡರು ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಿ ಕಾಂಗ್ರೇಸ್ ಪಕ್ಷವನ್ನು ಜಯಗಳಿಸುವಂತೆ ಕಾರ್ಯಪ್ರೌವೃತ್ತರಾಗಬೇಕೆಂದು ಸೂಚಿಸಿದರು ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ನವಲಗುಂದ ಯುವ ಕಾಂಗ್ರೇಸ್ ಅಧ್ಯಕ್ಷ ನಾರಾಯಣ ರಂಗರಡ್ಡಿ, ಡಾ: ತಾಜುದ್ದೀನ ಮುಲ್ಲಾನವರ, ಹೆಬಸೂರ ಗ್ರಾ.ಪಂ ಉಪಾಧ್ಯಕ್ಷ ನಿಜಗುಣಿ, ಗುರು ಹಳ್ಳೂರ,  ಅನೀಲ ಕೊಂಡಜ್ಜಿ ಮಾದೇವ ನಲವಡಿ ಮುಂತಾದವರು ಉಪಸ್ತಿತರಿದ್ದರು.