ಕೊಲ್ಕತಾ, ಜ 28 ಏಳನೇ ಆವೃತ್ತಿಯ ‘ಕೊಲ್ಕತಾ ಸಾಹಿತ್ಯೋತ್ಸವ’ ಫೆ 6 ರಿಂದ8 ರವರೆಗೆ ಇಲ್ಲಿನ ಅಂತಾರಾಷ್ಟ್ರೀಯ ಕೋಲ್ಕತ ಪುಸ್ತಕ ಮೇಳ (ಐಕೆಬಿಎಫ್) ಆವರಣದಲ್ಲಿ ನಡೆಯಲಿದೆ.ಕವಿ ಸೌಮಿತ್ರ ಚಟ್ಟೋಪಾಧ್ಯಾಯ ಅವರು ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಸೌಮಿತ್ರಾ ಬಾಬು ಅವರು ಸಣ್ಣ ಕೃತಿಗಳೊಂದಿಗೆ ದೊಡ್ಡ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಸಣ್ಣ ಪತ್ರಿಕೆಯಾದ 'ಎಖಾನ್' ಸೇರಿದಂತೆ ಬಂಗಾಳಿ ಸಾಹಿತ್ಯದಲ್ಲಿ ಸಣ್ಣ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ ಎಂದು ಸಾಹಿತ್ಯೋತ್ಸವ ನಿರ್ದೇಶಕರಾದ ಸುಜಾತಾ ಸೇನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ನ 7 ರಂದು ನಿಧನರಾದ ಲೇಖಕಿ ನಬನೀತಾ ದೇವ್ ಸೇನ್ ಸಾಹಿತ್ಯೋತ್ಸವದಲ್ಲಿ ಗೌರವ ಸಲ್ಲಿಸಲಾಗುವುದು. ಸಾಹಿತ್ಯೋತ್ಸವದಲ್ಲಿ ಪ್ರತಿವರ್ಷ ನಬನೀತಾ ದೇವ್ ಸೇನ್ ಸ್ಮಾರಕ ಉಪನ್ಯಾಸ ನಡೆಯುತ್ತಿದೆ. ಈ ವರ್ಷ ನಟ ಮತ್ತು ಮಕ್ಕಳ ಬರಹಗಾರ ನಂದನಾ ದೇವ್ ಸೇನ್ ಉಪನ್ಯಾಸ ನೀಡಲಿದ್ದಾರೆ ಎಂದು ಸುಜಾತಾ ಸೇನ್ ಹೇಳಿದರು. ಕೊಲ್ಕತಾ ಸಾಹಿತ್ಯೋತ್ಸವ ಏಳನೇ ಆವೃತ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಬರಹಗಾರರು ಸೇರಿದಂತೆ 5 ಕ್ಕೂ ಹೆಚ್ಚು ದೇಶಗಳ ಒಟ್ಟು 80 ಲೇಖಕರು ಭಾಗವಹಿಸಲಿದ್ದಾರೆ.