ಜ್ಞಾನ ವಿಕಾಸ ಕೇಂದ್ರದಿಂದ ಮಾಹಿತಿ ಪಡೆದು ಅಭಿವೃದ್ಧಿ ಹೊಂದಬಹುದು: ಜಯಶ್ರೀ ವಣ್ಣೂರ

ಕಕ್ಕೇರಿ 05: ಬೀಡಿ ವಲಯದ ಕಕ್ಕೇರಿ ಕಾರ್ಯಕ್ಷೇತ್ರದಲ್ಲಿ ಮಂಗಳವಾರ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಜರುಗಿತು. ಕೇಂದ್ರಕ್ಕೆ ಗೌರಿ ಗಣೇಶ ಎಂದು ನಾಮಕರಣ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಶ್ರೀ ವಣ್ಣೂರ ವಹಿಸಿಕೊಂಡರು.  

ಖಾನಾಪುರ ತಾಲ್ಲೂಕಿನ ಯೋಜನಾಧಿಕಾರಿ ಗಣಪತಿ ನಾಯ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಮಹಿಳೆಯರು ಕುಟುಂಬವನ್ನು ನಡೆಸುವುದರ ಜೊತೆಗೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸಿಕೊಡುವ ಕಾರ್ಯ ಮಾಡಬೇಕು. ಕೇಂದ್ರದಲ್ಲಿ ಶಿಕ್ಷಣ, ಆರೋಗ್ಯ, ಕಾನೂನು, ಸರಕಾರಿ ಸೌಲಭ್ಯಗಳು, ಅನೇಕ ವಿಷಯಗಳ ಕುರಿತು ಎಲ್ಲರೂ ಪ್ರತಿ ತಿಂಗಳು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡು ಅಭಿವೃದ್ಧಿ ಹೊಂದಬಹುದು ಎಂದು ಹೇಳಿದರು.   

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹಿರಿಯರಾದ ಹೈಸ್ಕೂಲಿನ ನಿವೃತ್ತ ಮುಖ್ಯಾಧ್ಯಾಪಕ ಈಶ್ವರ ಸಂಪಗಾವಿ ಅವರು ಮಕ್ಕಳಿಗೆ ಅವಶ್ಯವಾಗಿ ಶಿಕ್ಷಣ ನೀಡುವುದರ ಜೊತೆಗೆ ರೀತಿ ನೀತಿ ಸಂಸ್ಕಾರವನ್ನು ಕಲಿಸಬೇಕು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಅಸ್ಪಾಕ ಪಟೇಲ, ರಮೇಶ ಬಡೂರ, ಕೇಂದ್ರದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಾದ ಜಯಶ್ರೀ ವಣ್ಣೂರ, ಪಾರ್ವತಿ ಮುತಗಿ, ಸೇವಾಪ್ರತಿನಿಧಿ ಗೌರಮ್ಮ, ನಾಗರತ್ನ ಹಾಗೂ ಜ್ಞಾನ ವಿಕಾಸ ಕೇಂದ್ರ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಸೀಮಾ ಕೊಚೇರಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶಾಮಲಾ ಭಂಡರಗಾಳಿ ವಂದಿಸಿದರು, ಜ್ಞಾನ ವಿಕಾಸ ಸಮನ್ವಯಧಿಕಾರಿ ಸುರೇಖಾ ಕೋಳಿ ನಿರೂಪಿಸಿದರು.